ಆಶಾಡ ಮಾಸದ ಹುಣ್ಣಿಮೆಯ ಗುರುಪೂರ್ಣಿಮಾ ಕಾರ್ಯಕ್ರಮ

WhatsApp Group Join Now

ಓಂ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಕಮಿಟಿ ಎಲ್ಲ ಸರ್ವ ಸದಸ್ಯರು ಹಾಗೂ ರಾಮದುರ್ಗದ ಎಲ್ಲ ಸಮಾಜದ ಸರ್ವ ಸದಸ್ಯರು ಕೂಡಿಕೊಂಡು ಆಶಾಡ ಮಾಸದ ಹುಣ್ಣಿಮೆಯ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆಯನ್ನು ನೆರವೇರಿಸಿ ರಾಮದುರ್ಗ ನಗರದ ದೇವಸ್ಥಾನಗಳ ಎಲ್ಲಾ ಗುರುಗಳನ್ನು ಕರೆಸಿ ಅವರ ಪಾದಗಳ ಪೂಜೆಯನ್ನು ಮಾಡಿ ಸನ್ಮಾನಿಸಿ ಗುರುದಕ್ಷಿಣೆಯನ್ನು ನೀಡಲಾಯಿತು ಅಲ್ಲದೆ ರಾಮದುರ್ನಗರದ ಎಲ್ಲ ಸಮಾಜದ ಹಿರಿಯರು ಮತ್ತು ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ನೆರವು ನೀಡಿದರು ಈ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ದೇವಸ್ಥಾನದ ಗುರುಗಳಾದ ಲಲ್ಲು ಮಹಾರಾಜ್ ಹಾಗೂ ಅವರ ಶಿಷ್ಯರು ಮತ್ತು ಪುರುಷೋತ್ತಮ್ ಲಾಹೋಟಿ, ರಮೇಶ್ ಮುರಡಿ, ಪ್ರಕಾಶ್ ಸೂಳಿಬಾವಿ, ಕಂಕಾಣಿ, ರಾಜು ಕೋಪಡೆ೯, ದಾಸರ, ನಿಂಗನಗೌಡ ಪಾಟೀಲ್ ಮತ್ತು ಇತರ ಸದಸ್ಯರು ಹಾಜರಿದ್ದರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಗುರುಗಳಾದ ಶ್ರೀ ವಿಜಯ ಜೋಶಿ ಮತ್ತು ಸಂತರಾದ ಶ್ರೀ ಕಲಾಲ್ ಇವರು ಸೇರಿದ್ದ ಭಕ್ತಾದಿಗಳಿಗೆ ಗುರು ಅಂದರೆ ಏನು ಎಂಬುದು ವಿಷಯಕ್ಕೆ ಸಂಬಂಧಪಟ್ಟಂತೆ ಗು ಅಂದ್ರೆ ಕತ್ತಲು ರು ಅಂದರೆ ಬೆಳಕು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದು ನಮ್ಮೆಲ್ಲರನ್ನು ಮುನ್ನಡೆಸುವರು ಗುರು ಅಂತ ಮಹತ್ವದ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿ ಗುರು ಶಿಷ್ಯರ ಸಂಬಂಧ ಯಾವ ರೀತಿ ಇರುತ್ತದೆ ಎಂಬುದರ ಬಗ್ಗೆ ಜ್ಞಾನದ ಬೆಳಕನ್ನು ನೀಡಿದ್ದಾರೆ ಗುರು ಶಿಷ್ಯರಿಗೆ ಸಂಬಂಧಪಟ್ಟಂತಹ ಜ್ಞಾನದ ಬೆಳಕನ್ನು ನೀಡಿದ ಎಲ್ಲಾ ಪುರಾಣದ ಸಂಬಂಧಪಟ್ಟಂತ ದೇವಾನ ದೇವತೆಗಳಿಗೆ ಸಂಬಂಧಿಸಿದ ಕಥೆಗಳನ್ನು ವಿವರಗಳ ಮೂಲಕ ನೀಡಿ ಗುರು ಶಿಷ್ಯರ ಸಂಬಂಧ ಬಗ್ಗೆ ಮಾಹಿತಿಯ ಬೆಳಕನ್ನು ನೀಡಿದ್ದಾರೆ

About The Author