ಬೆಳಗಾವಿ ನಮ್ಮ ಜೀವನಕ್ಕೆ ಒಂದು ದಾರಿ ಗೊತ್ತು ಗುರಿ ತೋರಿಸುವ ಮೂಲಕ ನಮ್ಮ ಜೀವನದ ಮಹತ್ವದ ಕುರಿತು ಅರಿವು ಮೂಡಿಸಲು ಮತ್ತು ಸೂಕ್ತವಾದ ರೀತಿಯಲ್ಲಿ ಮಾರ್ಗದರ್ಶನ ಮಾಡಲು ಗುರುವಿನ ಅವಶ್ಯಕತೆ ಬಹಳ ಇದೆ. ಆ ನಿಟ್ಟಿನಲ್ಲಿ ಗುರು ಸದಾ ಸ್ಮರಣೀಯ ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಸುಶೀಲಾ ಗುರವ ರವಿವಾರ ದಿ. 2 ರಂದು ಬೆಳಗಾವಿ ನಗರದ ಫ. ಗು.ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವ ಕುರಿತು ಮಾತನಾಡಿದರು. ಅತಿಥಿಗಳಾದ ಶಂಕರ ಗುಡಸ್ ಮಾತನಾಡಿ ಜೀವನದಲ್ಲಿ ಗುರು ಎಷ್ಟು ಪ್ರಮುಖ ಸ್ಥಾನ ವಹಿಸುತ್ತಾನೆ ಎಂಬುದನ್ನು ಚಿಕ್ಕ ದೃಷ್ಟಾಂತಗಳನ್ನು ನೀಡುವುದರ ಮೂಲಕ ವಿವರಣೆ ನೀಡಿದರು. ಇದೇ ಸಂದರ್ಭದಲ್ಲಿ ಶರಣರಾದ ಸದಾಶಿವ ದೇವರಮನಿ,ಶಶಿಭೂಷಣ್ ಪಾಟೀಲ ಸತೀಶ ಪಾಟೀಲ ಸೇರಿದಂತೆ ಅನೇಕ ಶರಣರು ಗುರುವಿನ ಮಹತ್ವ ಮತ್ತು ಗುರುವಿಲ್ಲದ ಜೀವನ ನಿರರ್ಥಕ ಎಂಬುದರ ಸಾರ ಹೇಳುತ್ತಾ ಗುರುವಿನ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಗುರುಪೂರ್ಣಿಮೆ ನಿಮಿತ್ತ ಮಾದರಿ ಶಿಕ್ಷಕ ವೃತ್ತಿಯನ್ನು ನಡೆಸುತ್ತಿರುವ ಮತ್ತು ಸಮಾಜಕ್ಕೆ ಮಾದರಿಯಾದ ಶಿಕ್ಷಕರಾದ ಮಹಾಂತೇಶ ಮೆಣಸಿನಕಾಯಿ , ಮಹಾಂತೇಶ ತೋರಣಗಟ್ಟೆ, ಶಿವಾನಂದ ತಲ್ಲೂರ, ಸುಶೀಲಾ ಗುರವ, ಅಶೋಕ ಉಳ್ಳೇಗಡ್ಡಿ, ಶ್ರೀದೇವಿ ನರಗುಂದ , ಎಂ ಎಸ್, ಸಾರಾಪೂರಿ, ಮಹಾಂತೇಶ ಮಡಿವಾಳರ ರವರನ್ನು ಗುರು ಪೂರ್ಣಿಮೆ ನಿಮಿತ್ತ ಸನ್ಮಾನಿಸಲಾಯಿತು. ಬಸವೇಶ್ವರ ಬ್ಯಾಂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಮಾಜ ಸೇವಕಿ ಸರಳಾ ಹೆರೆಕರ ರವರನ್ನು ಸಹ ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿ ಸರಳಾ ಹೆರೆಕರ ಕಳೆದ ಹಲವಾರು ವರ್ಷಗಳಿಂದ ತಮ್ಮದೇ ಆದ ಸಮಾಜ ಸಂಸ್ಥೆಗಳ ಅಡಿಯಲ್ಲಿ ನಿರ್ಗತಿಕ, ಅನಾಥರಿಗೆ ಮತ್ತು ಬಡವರಿಗೆ ಮತ್ತು ವಿಶೇಷ ಚೇತನರಿಗೆ ಕೈಲಾದ ಸೇವೆ ಮಾಡುತ್ತಾ ಸಾಗಿದ್ದು ಇದಕ್ಕೆ ಬಸವ ತತ್ವಗಳೇ ಪ್ರೇರಣೆ ಆ ನಿಟ್ಟಿನಲ್ಲಿ ಎಲ್ಲರೂ ಬಸವ ತತ್ವ ಅಡಿಯಲ್ಲಿ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸೋಣ ಎಂದರು. ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಆನಂದ ಕರ್ಕಿ , ಬಸವರಾಜ ಬಿಜ್ಜರಗಿ. ಸುವರ್ಣ ಗುಡಸ, ಅಕ್ಕಮಹಾದೇವಿ ತೆಗ್ಗಿ,ಜೆ ಬಿ ಜವಣಿ ,ಶ್ರೀದೇವಿ ನರಗುಂದ,
WhatsApp Group
Join Now
ಸುನೀಲ ಸಾಣಿಕೊಪ್ಪ, ನಂದಾ ಬಗಲಿ,ಸೋಮಶೇಖರ ವಾಲಿ ಇಟಗಿ,ಶಿವಾನಂದ ನಾಯಕ,ಬಾಬು ತಿಗಡಿ,ಲಕ್ಷ್ಮೀ ಜವಣಿ, , ಸೋಮಶೇಖರ ಹೊಸಮನಿ, ಶಿವಾನಂದ ನಾಯಕ,ಸಂಗಮ ಹಿರೇಮಠ
ಚನಪ್ಪ ನರಸನ್ನವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆಯೊಂದಿಗೆ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.



