ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ರವಿವಾರರಂದು ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ 20ನೇ ವಾರ್ಷಿಕೋತ್ಸವ ಹಾಗೂ 187ನೇ ವಿಶ್ವ ಛಾಯಾಗ್ರಹನ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಮುಖ್ಯ ಸಚೇತಕರು, ಶಾಸಕರು ವಿಧಾನಸಭಾ ಕ್ಷೇತ್ರ ರಾಮದುರ್ಗ ಅಶೋಕ ಮ. ಪಟ್ಟಣ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಮೊಬೈಲ್ ಕ್ಯಾಮೆರಾ ಮತ್ತು ಎಐ (AI) ತಂತ್ರಜ್ಞಾನದಿಂದ ಫೋಟೋಗ್ರಾಫಿ ಅನ್ನೋದು ಹೋಗಿಬಿಟ್ಟಿದೆ. ಸಣ್ಣಪುಟ್ಟ ಕಾರ್ಯಕ್ರಮಗಳು, ಪಾಸ್‌ಪೋರ್ಟ್ ಸೈಜ್ ಫೋಟೋಗಳು ಮತ್ತು ದಿನಬಳಕೆಯ ಚಿತ್ರಗಳಿಗಾಗಿ ಜನರು ಈಗ ಮೊಬೈಲ್ ಬಳಸುತ್ತಿದ್ದಾರೆ.
ಮೊಬೈಲ್ ನಿಂದ ಫೋಟೋ ಎಡಿಟಿಂಗ್, ಹಿನ್ನೆಲೆ ಬದಲಾಯಿಸುವುದು ಮತ್ತು ಬಣ್ಣಗಳನ್ನು ಸರಿಹೊಂದಿಸುವ ಕೆಲಸಗಳನ್ನು AI ಈಗ ಕೆಲವೇ ಸೆಕೆಂಡುಗಳಲ್ಲಿ ಮಾಡಿಕೊಡುತ್ತದೆ
ಇದರಿಂದ ಸ್ಟುಡಿಯೋಗಳ ಸಾಂಪ್ರದಾಯಿಕ ಆದಾಯ ಕಡಿಮೆಯಾಗಿದೆ ಎಂದು ಹೇಳಿದರು.
ಈ ವೇಳೆ ಫೋಟೋಗ್ರಾಫರ ಸಂಘಕ್ಕೆ ಸಮುದಾಯ ಭವನ ಬೇಕು ಎಂದು ಬೇಡಿಕೆ ಇಟ್ಟಾಗ ಶಾಸಕರು ಆದಷ್ಟು ಬೇಗ ಜಾಗವನ್ನು ನೋಡಿ ಸಮುದಾಯ ಭವನ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ತೊಂಡಿಕಟ್ಟಿ ಅವಧೂತ ಗಾಳೇಶ್ವರಮಠ ಪ. ಪೂ. ಶ್ರೀ. ಅಭಿನವ ವೆಂಕಟೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಬೆಳಗಾವಿ ನಿರ್ದೇಶಕರು ಬಿ.ಡಿ.ಸಿ.ಸಿ.ಬ್ಯಾಂಕ್ ಮಲ್ಲಣ್ಣ ಯಾದವಾಡ ಮಾತನಾಡಿ ಫೋಟೋಗ್ರಾಫರ ಒಂದು ಸಂಘ ಇದೆ ಈ ಸಂಘದಿಂದ ಯಾವುದಾದರೂ ಒಂದು ಕೋ ಆಪರೇಟಿವ್ ಸೊಸೈಟಿಯನ್ನು ನಿರ್ಮಿಸಿ ನಾನು ನಮ್ಮ ಡಿ.ಸಿ.ಸಿ.ಬ್ಯಾಂಕ್ ನಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡಿಕೊಡುತ್ತೇನೆ ಹಾಗೂ ಫೋಟೋಗ್ರಾಫರ ಸಮುದಾಯ ಭವನ ಕಟ್ಟಡಕ್ಕೆ ತನ್ನ ಕೈಲಾದಷ್ಟು ಸಹಾಯಧನವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಮೆಹಬೂಬ ತೊರಗಲ್. ನೂತನ ಉಪಾಧ್ಯಕ್ಷರು, ಸುಹಾಸ ಬಾರ್ಕಿ. ನೂತನ ಕಾರ್ಯದರ್ಶಿಗಳು ಇವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ರಾಮದುರ್ಗ ತಾಲೂಕ ಹಿರಿಯ ಛಾಯಾಗ್ರಾಹಕರು ವೆಂಕಟೇಶ ಪತ್ತಾರ, ಮಾಯಪ್ಪ ಯರಗಟ್ಟಿ, ರಾಮದುರ್ಗ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಅಧ್ಯಕ್ಷರು ಡಾ ಶೇಷಪ್ಪ ಪೋತರಡ್ಡಿ, ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ, ಬೆಂಗಳೂರು ಅಧ್ಯಕ್ಷರು ಎಚ್. ಎಸ್. ನಾಗೇಶ, ಕಾರ್ಯದರ್ಶಿಗಳು ಟಿ. ಸಿ. ನಾಗರಾಜು, ಸಂಘಟನಾ ಕಾರ್ಯದರ್ಶಿಗಳು, ಮಲ್ಲಿಕಾರ್ಜುನ ಕೆ. ಆರ್, ನಿರ್ದೇಶಕರು ಸುರೇಶ ಬಿ.ಬಾಳೋಜಿ, ಬೆಳಗಾವಿ ಜಿಲ್ಲಾ ಅಧ್ಯಕ್ಷರು ಲಕ್ಷ್ಮಣ. ಯಮಕನಮರಡಿ, ಜಿಲ್ಲಾ ಸದಸ್ಯರು ಮಂಜುನಾಥ ದೊಡಮನಿ, ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ ಗೌರವಾಧ್ಯಕ್ಷರು ಮಂಜುನಾಥ ದೊಡಮನಿ, ಅಧ್ಯಕ್ಷರು ಗುರು ಕ. ಮುಗಳಿ, ಉಪಾಧ್ಯಕ್ಷರು ಕಾಂತೇಶ ರಾಠೋಡ, ಕಾರ್ಯದರ್ಶಿಗಳು ಗಣೇಶ ಖಾನಪೇಠ, ಖಜಾಂಚಿ ಮಹಾಂತೇಶ ನಾಯಕ, ನಿರ್ದೇಶಕರು, ಮತ್ತು ಜಿಲ್ಲಾ ಸದಸ್ಯರು, ಬೆಳಗಾವಿ, ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು ಚಿದಾನಂದ ರಕ್ಷಿ, ನಿರ್ದೇಶಕರು ವಿರುಪಾಕ್ಷಿ ವಾಳೇದಾರ, ಶರಣಪ್ಪ ಬಡಿಗೇರ, ಸುಹಾಸ ಬಾರ್ಕಿ. ಮೆಹಬೂಬ ತೊರಗಲ್, ನಾಗೇಶ ಮಹಾಲಿಂಗಪೂರ, ಶಿವರಾಜ ಹಿರೇಮಠ. ರಾಘವೇಂದ್ರ ಹೂಗಾರ, ಸಹ ಕಾರ್ಯದರ್ಶಿ ರೂಪೇಶ ಪವಾರ, ವಿನಾಯಕ ಖಾನಪೇಠ. ಹಾಗೂ ಸದಸ್ಯರು ಪಾಲ್ಗೊಂಡಿದ್ದರು.



