ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಶನಿವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲಿ ಜರುಗಿದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ವಿನಾಯಕ್ ಬಡಿಗೇರ್ ವಹಿಸಿ ಅವರು ಮಾತನಾಡಿದರು.

ಪ್ರವಾದಿ ಮಹಮ್ಮದ ಅವರ ಸಂದೇಶ ಸಾರಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗುವ ಧಾರ್ಮಿಕ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ಕಲ್ಪಿಸದೇ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರೂ ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು.
ಹಬ್ಬಗಳನ್ನು ಶಾಂತಿಯಿಂದ ಆಚರಿಸುವಂತೆ ಹಿರಿಯರು ಯುವಕರಿಗೆ ತಿಳಿಹೇಳಬೇಕು. ಅಹಿತರಕರ ಘಟನೆಗಳು ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ನೀವು ಆಚರಿಸುವ ಹಬ್ಬ-ಹರಿದಿನಗಳು ಇನ್ನೊಬ್ಬರಿಗೆ ಮಾದರಿಯಾಗಬೇಕು.ಈ ಮೂಲಕ ಹಿರಿಯರು, ಹಬ್ಬದಾಚರಣೆ ಮಹತ್ವ ಸಾರಬೇಕು ಎಂದು ಸಿಪಿಐ ವಿನಾಯಕ್ ಬಡಿಗೇರ್ ಸಲಹೆ ನೀಡಿದರು.
ಪಿ.ಎಸ.ಐ. ಸವಿತಾ ಮುನ್ನಾಳ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆಗಸ್ಟ್ 26ರಂದು ಈದ್ ಮಿಲಾದ್ ಆಚರಣೆ ಮಾಡಲಾಗುತ್ತಿದ್ದು ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೂಟ ಬದಲಾವಣೆ ಇರುವುದಿಲ್ಲ. ಪ್ರತಿ ವರ್ಷ ಯಾವ ತರಹ ಆಚರಣೆ ಮಾಡಲಾಗುತ್ತದೆ ಅದೇ ತರ ಈ ವರ್ಷವೂ ಕೂಡ ಆಚರಣೆ ಮಾಡಬೇಕು ಮೆರವಣಿಗೆಯ ಮಾರ್ಗ ಹೀಗೆ ಇರಲಿದ್ದು ಮೆರವಣಿಗೆಯು
ಹಳೆಯ ಪೊಲೀಸ್ ಠಾಣೆಯಿಂದ, ಹರಳಯ್ಯ ಸರ್ಕಲ್, ಮಿನಿ ವಿಧಾನಸೌಧ, ನೇಕಾರಪೇಟೆ, ತೇರ ಬಜಾರ, ಪಡಕೋಟಿ ಗಲ್ಲಿ ಇಂದ ಮರಳಿ ಹಳೆಯ ಪೊಲೀಸ್ ಠಾಣೆಗೆ ಬಂದು ಮೆರವಣಿಗೆ ಮುಕ್ತಾಯಗೊಳ್ಳುವುದು.
ಮೆರವಣಿಗೆ ಸಂದರ್ಭದಲ್ಲಿ ಡಿಜೆ ಗೆ ಅವಕಾಶ ಇರುವುದಿಲ್ಲ.
ಓಣಿಗೊಂದು ಡ್ರೆಸ್ ಕೊಡಗಳನ್ನು ಮಾಡಿದ್ದೇವೆ ಅಂತ ಕಮಿಟಿಯವರು ಹೇಳಿರುತ್ತಾರೆ ಶಾಂತ ರೀತಿಯಿಂದ ಮೆರವಣಿಗೆ ಒಳಗೆ ಭಾಗವಹಿಸುವವರಿಗೆ ಬಹುಮಾನ ನೀಡುತ್ತಿವೆ ಎಂದು ಕಮಿಟಿಯ ಅವರು ತಿಳಿಸಿರುತ್ತಾರೆ. ಶಾಂತಿ ಕದಡುವ ಯಾವುದೇ ಘಟನೆಗಳು ನಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು
ಪಿ ಎಸ್ ಐ ಸವಿತಾ ಮುನ್ಯಾಳ ಹೇಳಿದರು.
ಈ ಸಂದರ್ಭದಲ್ಲಿ ಪಿ.ಎಸ.ಐ. ಸಂತೋಷ ದೂಳಖೆಡ, ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು



