ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ

WhatsApp Group Join Now

ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಯರಗಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸತ್ತಿಗೇರಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.

ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ರವರು ಸಸಿಗೆ ನೀರೆಯುವುದರ ಮೂಲಕ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಾನೂನು ಎಲ್ಲರಿಗೂ ಸಮಾನವಾಗಿದ್ದು ಕಾನೂನಿನ ಅಡಿಯಲ್ಲಿ ವ್ಯವಸ್ಥಿತವಾದ ಜೀವನ ನಡೆಸಿದರೆ ಮಾತ್ರ ಸಮಾಜದಲ್ಲಿ ಗೌರವಯುತವಾಗಿ ಬಾಳಲು ಸಾಧ್ಯ ಎಂದರು. ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಎಲ್ಲರಿಗೂ ನೀಡಿದೆ ಮೂಲ ಸೌಲಭ್ಯಗಳನ್ನು ಪಡೆಯುವ ಹಕ್ಕು ಹಾಗೂ ಇದರ ಜೊತೆಗೆ ಕರ್ತವ್ಯಗಳನ್ನು ಸಹ ಪಾಲಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿ ಭಾಷಣ ಮಾಡಿದ ಸಿವಿಲ್‍ ನ್ಯಾಯಾಧೀಶರಾದ ಕೃಷಪ್ಪ ಪಮ್ಮಾರ ರವರು ಮಾತನಾಡಿ ಸಮಾಜದಲ್ಲಿ ಕಾನೂನಿನ ಅರಿವು ಇಲ್ಲದೇ ಇರುವುದರಿಂದ ಅಪರಾಧಗಳು ಹೆಚ್ಚಾಗುತ್ತಿವೆ ಆದ್ದರಿಂದ ಎಲ್ಲರೂ ಕಾನೂನುಗಳನ್ನು ತಿಳಿದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಕಾನೂನನ್ನು ತಿಳಿದುಕೊಂಡವರು, ತಿಳುವಳಿಕೆ ಇಲ್ಲದವರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸವುದು ಎಲ್ಲರ ಕರ್ತವ್ಯವಾಗಿದೆ ಮೂಲಭೂತ ಹಕ್ಕುಗಳನ್ನು ಇನ್ನೊಬ್ಬರಿಗೆ ತೊಂದರೆ ಆಗದಂತೆ ಚಲಾವಣೆ ಮಾಡಬೇಕು. ವಾಹನ ಚಲಾವಣೆ ಮಾಡುವ ಮುನ್ನ ಕಾನೂನಿನ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಅದೇ ರೀತಿ ವಿದ್ಯಾರ್ಥಿಗಳು ಬೇರೆ ಬೇರೆ ಅನಾವಶ್ಯಕ ವಿಷಯಗಳ ಕಡೆಗೆ ಗಮನ ಹರಿಸಿ ಜೀವನ ಹಾಳು ಮಾಡಿಕೊಳ್ಳದೇ ಪಠ‍್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು.

ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳಾದ ಆರ್.ಎಸ್.ಆಲಕಟ್ಟಿ ರವರು ಮಾತನಾಡಿ ಮೂಲಭೂತ ಹಕ್ಕುಗಳಾದ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು, ಸಾಂವಿಧಾನಾತ್ಮಕ ಪರಿಹಾರ ಹಕ್ಕು ಆರು ಮೂಲಭೂತ ಹಕ್ಕುಗಳು ಸ್ವ-ವಿವರಣೆ ನೀಡಿದರು ಅದರ ಜೊತೆಗೆ ಸಂವಿಧಾನಕ್ಕೆ ನಿಷ್ಠೆ ತೋರಿಸುವುದು ಮತ್ತು ಅದರ ಆದರ್ಶಗಳನ್ನು ಹಾಗೂ ಸಂಸ್ಥೆಗಳನ್ನು ರಾಷ್ಟ್ರೀಯ ಧ್ವಜವನ್ನು ಮತ್ತು ರಾಷ್ಟ್ರ ಗೀತೆಯನ್ನು ಗೌರವಿಸುವುದು ನಮ್ಷೆಲ್ಲರ ಮುಲಭೂತ ಕರ್ತವ್ಯವಾಗಿದೆ ಎಂದು ಹೇಳಿದರು.

ಅತಿಥಿ ಭಾಷಣ ಮಾಡಿದ ನ್ಯಾಯವಾದಿಗಳಾದ ಎಮ್.ಎಮ್.ಮಡಿವಾಳರ ರವರು ಮಾತನಾಡಿ ನಮ್ಮ ಸಂವಿಧಾನವು ನಮಗೆ ಮೂಲಭೂತವಾದ ಕೆಲವು ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳ ಬಳಕೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದು ಇವತ್ತಿನ ಕಾರ್ಯಕ್ರಮದ ಮುಖ್ಯ ಉದ್ದೇಶ. ಇಂತಹ ಹಕ್ಕುಗಳ ಉಪಯೋಗವನ್ನು ಮಾತ್ರ ನಾವು ತೆಗೆದುಕೊಳ್ಳಬೇಕೇ ವಿನಃ ಅದರ ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ಅತಿಥಿ ಭಾಷಣ ಮಾಡಿದ ನ್ಯಾಯವಾದಿಗಳಾದ ವಿ.ಜಿ. ಬಿರಾದಾರಪಾಟೀಲ ರವರು ಮಾತನಾಡಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕು ಎನ್ನುವುದರ ಜೊತೆಗೆ ಕಾನೂನುಗಳ ಉಲ್ಲಂಘನೆಯಾಗದಂತೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬೇಕು. ನಮ್ಮೊಳಗಿನ ಆತ್ಮ ಪ್ರಜ್ಞೆ ನಮ್ಮನ್ನು ಮುನ್ನಡೆಸಬೇಕು. ನೈತಿಕ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದರು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ಬಿ.ಎಸ್.ದೊಡಮನಿ ರವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಯರಗಟ್ಟಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಆಯ್.ಬಿ.ಗೌಡರ, ಕಾರ್ಯದರ್ಶಿಗಳಾದ ಡಿ.ಎ.ಜಮಾದಾರ, ಪಿ.ಎಸ್.ಐ ಎಲ್.ಬಿ.ಮಾಳಿ ಹಾಗೂ ಇತರರು ಉಪಸ್ಥಿತರಿದ್ದರು.

ಅಥಶಾಸ್ತ್ರ ಶಿಕ್ಷಕರಾದ ಯು.ಬಿ.ಮೂಲಂಗಿ -ಸ್ವಾಗತಿಸಿ, ನಿರೂಪಿಸಿದರು, ಇಂಗ್ಲಿಷ ಶಿಕ್ಷಕರಾದ ಎಚ್.ಎಸ್.ಶೆಟ್ಟೆಪ್ಪನವರ ವಂದಿಸಿದರು.

About The Author