ಸವದತ್ತಿ : ವಿದ್ಯಾರ್ಥಿಗಳು ತಮ್ಮ ಸ್ಪಷ್ಟ ಗುರಿಗಳೊಂದಿಗೆ ಉಪನ್ಯಾಸಕರ ಸೂಕ್ತ ಮಾರ್ಗದರ್ಶನದೊಂದಿಗೆ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ. ಇಂದಿನ ದಿನಗಳಲ್ಲಿ ಶಕ್ತಿ ಮತ್ತು ಸಂಪತ್ತಿಗಿಂತ ವಿದ್ಯೆಗೆ ಹೆಚ್ಚಿನ ಆದ್ಯತೆ ಇದೆ ಎಂದು
ಮುಖ್ಯ ಅತಿಥಿಗಳಾದ ಐ. ಎಂ. ಅಂಬಿ ಅವರು ಸವದತ್ತಿಯ ಶ್ರೀ ಜಿ ಜಿ ಚೋಪ್ರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವಪಲ್ಲಿ ಡಾ. ಎಸ್ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು. ಅತಿಥಿಗಳಾದ ಆರ್. ಸಿ. ಬಾರಾಟಕ್ಕೆ ಮಾತನಾಡಿ ವಿದ್ಯಾರ್ಥಿಗಳು ಡಾ . ಎಸ್ ರಾಧಾಕೃಷ್ಣನ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಉತ್ತಮ ನಾಗರಿಕರಾಗಬೇಕೆಂದು ಹೇಳಿದರು. ಉಪನ್ಯಾಸಕರಾದ ಎಸ್. ಬಿ. ಕಿವುಡಿ ಮತ್ತು ಜಿ.ಜಿ.ಖೋದಾನಪುರ ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರನ್ನು ಗೌರವಿಸುವ ಜೊತೆಗೆ ಉಪನ್ಯಾಸಕರಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಿ ಸತ್ಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಆರ್. ಪಿ. ಕೌಜಲಗಿ ಮಾತನಾಡಿ ಮಾನವೀಯತೆಯ ವಿಕಾಸವೇ ಶಿಕ್ಷಣದ ಮೂಲ ಉದ್ದೇಶವಾಗಿದ್ದು ಆಧುನಿಕ ದಿನಗಳಲ್ಲಿ ಶಿಕ್ಷಣವು ಸಂವಿಧಾನಬದ್ಧ ಹಕ್ಕಾಗಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ತಮಗೆ ಶಿಕ್ಷಣ ನೀಡಿದ ಎಲ್ಲಾ ಗುರುಗಳನ್ನು ಸ್ಮರಿಸಿಕೊಳ್ಳುತ್ತಾ ಶಿಕ್ಷಣಕ್ಕೆ ಇರುವ ಅಗಾಧ ಶಕ್ತಿಯನ್ನು ವಿವರಿಸಿದರು. ಶಿಕ್ಷಕರ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಸಂಘಟಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀದೇವಿ ಹಂಜೆ, ಎಸ್. ಎಂ. ಪಾಟೀಲ, ಮಂಜುಳಾ ತೇಗೂರ, ಶಿಲ್ಪಾ ಪೂಜೇರ, ಸೌಜನ್ಯ ಕುಲಕರ್ಣಿ, ಶಿವಾನಿ ಮಠಪತಿ, ಉಮಾದೇವಿ ಎಂ. ಕೆ., ಆನಂದ ಯರಗಟ್ಟಿ, ಮಂಜುನಾಥ ಹುಲ್ಲೂರ, ಗಿರಿಜಾ ಹುಂಡನವರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು .



