ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯ, ಚವಾಟ ಗಲ್ಲಿ ಶಾಖೆಯ ಪ್ರಭಾರಿ, ಶ್ರೀಮತಿ ಭಾರತಿ ಪಾಟೀಲ ಅವರಿಗೆ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಗ್ರಂಥಪಾಲಕರ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಉತ್ತಮ ಗ್ರಂಥಪಾಲಕ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಮಧು ಬಂಗಾರಪ್ಪ,ಮಾನ್ಯ ಸಚಿವರು,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕರ್ನಾಟಕ ಸರ್ಕಾರ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.
ಪದ್ಮಶ್ರೀ ಡಾ.ಎಸ್ ಆರ್ ರಂಗನಾಥನ್ ಅವರ ಜನ್ಮ ದಿನಾಚರಣೆ ನಿಮಿತ್ತ, ಕರ್ನಾಟಕ ಸರ್ಕಾರ,ಸಾರ್ವಜನಿಕ ಗ್ರಂಥಾಲಯ ಇಲಾಖೆ,ವತಿಯಿಂದ ಬೆಂಗೂರಿನಲ್ಲಿ ನಡೆದ ರಾಜ್ಯಮಟ್ಟದ ಗ್ರಂಥಪಾಲಕ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.ಅವರ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತುಇಲಾಖೆಯಲ್ಲಿ ಸಲ್ಲಿಸಿದ ಸುಧೀರ್ಘ ಸೇವೆ ಮತ್ತು ಅವರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು.ಈ ಸಂಧರ್ಭದಲ್ಲಿ ಶ್ರೀಮತಿ ವಿ ರಶ್ಮಿ ಮಹೇಶ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,ವಿದ್ಯಾಕುಮಾರಿ. ಕೆ ಮಾನ್ಯ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷರಾದ ರಾಜಪ್ಪ ದಳವಾಯಿ, ಸಿ ಪಿ ರಾಮಶೇಷ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ತಿತರಿದ್ದರು.
ಪ್ರಶಸ್ತಿ ಪಡೆದ ಭಾರತಿ ಪಾಟೀಲ ಅವರಿಗೆ ನಗರ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರಾದ ಶ್ರೀ ರಾಮಯ್ಯ, ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರು ಶ್ರೀ ಕೃಷ್ಣಮೂರ್ತಿ ಮತ್ತು ಏ ಏ ಕಾಂಬಳೆ, ಪ್ರಕಾಶ ಇಚಲಕರಂಜೀ, ಸುಮಿತ್ ಕಾವಳೆ ಮತ್ತಿತರು ಮತ್ತು ಎಲ್ಲಾ ಸಿಬ್ಬಂದಿ ವರ್ಗ,ಅಭಿನಂದನೆ ಸಲ್ಲಿಸಿದ್ದಾರೆ.



