ಕನಕ ನೌಕರರ ವಿವಿದ್ದೋಷಗಳ ಹಾಗೂ ಶ್ರೈಕ್ಷನಿಕ್ ಸಹಕಾರ ಸಂಘ. ನಿಯಮಿತ ಬೆಳಗಾವಿ. ದಿನಾಂಕ 6-9-2026 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಕನಕ ನೌಕರರ ಸಂಘದ2025,26 ನೆಯ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು. ಈ ಸಂದರ್ಭದಲ್ಲಿ ಕನಕ ನೌಕರರ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಜಿತಕುಮಾರ ಬಿರಾದಾರ ಅವರು ಅಧ್ಯಕ್ಷತೆಯನ್ನು ವಹಿಸಿದರು. ಶ್ರೀಮತಿ ರೇಖಾ ದಳವಾಯಿ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಫೌಂಡರ್ ಅಧ್ಯಕ್ಷರು ಮಾಜಿ ಶ್ರೀ ಶಿವಪ್ಪ ಕಾಡಮ್ಮನವರ ಹಾಗೂ ಸತತವಾಗಿ 10 ವರ್ಷಗಳ ಕಾಲ ಅಧ್ಯಕ್ಷರು ನಿವೃತ್ತ S,P. ಸದಲಗಿ ಸರ್, ರಾಮಪ್ಪ ಬನಶಂಕರಿ ಸರ್, ವೆಂಕಣ್ಣ ಹಿಟ್ಟಣಗಿ , ಸಿದ್ದಪ್ಪ ಸಾಬಣ್ಣವರ, ಶ್ರೀಕಾಂತ್ ಹಾದಿಮನಿ, ಸದಾನಂದ ಪಡೋಲಕರ, ಶಿವಾನಂದ ಹೂಗಾರ್, ಮಲ್ಲಪ್ಪ ಅಲಪನವರ,ಚಂದ್ರಕಾಂತ ಅಪ್ಪಣ್ಣವರ, ಸುನೀಲ್ ದೊಡ್ಡಕುರಬರ,
ಹಾಲಪ್ಪ ಜಗ್ಗಿನವರ,ಉಪಸ್ತಿತರಿದ್ದರು. ಹಣಮಂತ ಬಂಡಿಗನವರ ಗೌರವ ಕಚೇರಿ ವ್ಯವಸ್ಥಾಪಕರು, ಗೌರವ ಕಾರ್ಯದರ್ಶಿಗಳು , ಪೂಜಾರಿ ಅವರು ಉಪಸ್ಥಿತರಿದ್ದು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅಶ್ವಿನಿ ನಾಯಕ್ (ಕುರಬರ) ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಸಿದ್ವಿ ಕರೆಗಾರ ಇವಳು ಪ್ರಾರ್ಥನೆ ಮಾಡಿದಳು. ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಾಮಾನ್ಯ ಸದಸ್ಯರು ಉಪಸ್ತಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು. ಈ ಸಂದರ್ಭದಲ್ಲಿ SSLC ಮತ್ತು PUC ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವರ್ಷ ನಿವೃತ್ತ ಆದ ಸರಕಾರಿ ನೌಕರರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಬೆಳಗಾವಿ ಕನಕ ನೌಕರರ ಸಂಘದ 2025-26 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ

WhatsApp Group
Join Now


