ಪತ್ರಿಕೆ ವಿತರಿಸಲು ಹೋದ ಪತ್ರಕರ್ತರಿಗೆ ಅಯೋಗ್ಯ PDOನಿಂದ ಧಮಕಿ ಆರೋಪ..!

WhatsApp Group Join Now

ಪತ್ರಿಕೆ ವಿತರಣೆಗೂ PDO ಪರ್ಮಿಷನ್ ಬೇಕಂತೆ..!

ಸರ್ಕಾರಿ ಗುರುತಿನ ಚೀಟಿ ಧರಿಸದೆ “ನಾನೇ PDO” ಎಂದು ಅಧಿಕಾರದ ದರ್ಪ ಪ್ರದರ್ಶನ?

ಸೊಂಡೆಕೊಪ್ಪ: ಪತ್ರಿಕೆ ವಿತರಣೆ ಮಾಡಲು ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದ ಪತ್ರಕರ್ತರೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶಿವಪ್ರಕಾಶ ಅವರು ಅನುಚಿತವಾಗಿ ವರ್ತಿಸಿ ಧಮಕಿ ಹಾಕಿದ್ದಾರೆ.

ಪತ್ರಕರ್ತರು ಪತ್ರಿಕೆ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ “ಪತ್ರಿಕೆ ವಿತರಿಸಲು ನನ್ನ ಪರ್ಮಿಷನ್ ಬೇಕು” ಎಂಬ ರೀತಿಯಲ್ಲಿ ಅಧಿಕಾರಿಯವರು ಪ್ರಶ್ನಿಸಿದ್ದಾರೆ ಎನ್ನಲಾಗಿದ್ದು, ಪಿಡಿಒ ಶಿವಪ್ರಕಾಶ ಪತ್ರಕರ್ತರು ಪತ್ರಿಕೆ ವಿತರಣೆ ಮಾಡಿದನ್ನು ವಿಡಿಯೋ ಮಾಡುತ್ತಾ ಪತ್ರಕರ್ತರಿಗೆ ” ನಿನ್ನ ಮೇಲೆ ಎದ್ದೇಳಲು ಆಗದಂತೆ ಮಾಡುತ್ತೀನಿ” ಎಂದು ಪರೋಕ್ಷವಾಗಿ ಕೊಲೆ ಬೆದರಕೆ ಹಾಕಿದ್ದಾರೆ.
ಈ ಕುರಿತು ಮಾತಿನ ಚಕಮಕಿ ನಡೆದಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.

ಪತ್ರಿಕೆ ವಿತರಣೆಗೂ ಅಧಿಕಾರಿಯ ಅನುಮತಿ ಬೇಕೇ?

ಸಾರ್ವಜನಿಕವಾಗಿ ಪತ್ರಿಕೆ ವಿತರಣೆ ಮಾಡುವ ಪತ್ರಕರ್ತರಿಗೆ ಪಂಚಾಯಿತಿ PDO ಅವರ ವೈಯಕ್ತಿಕ ಅನುಮತಿ ಕಡ್ಡಾಯವೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಪತ್ರಕರ್ತರು ಸರ್ಕಾರದ ಕಚೇರಿಗೆ ತೆರಳಿ ಸಾರ್ವಜನಿಕ ವಿಚಾರಗಳ ಕುರಿತು ಪ್ರಶ್ನೆ ಕೇಳುವುದು ಮತ್ತು ಪತ್ರಿಕೆ ವಿತರಿಸುವುದನ್ನು ತಡೆಯಲು ಯಾವುದೇ ಕಾನೂನುಬದ್ಧ ಅಧಿಕಾರವಿದೆಯೇ ಎಂಬುದನ್ನು ಸಂಬಂಧಪಟ್ಟ ಮೇಲಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಸರ್ಕಾರಿ ಗುರುತಿನ ಚೀಟಿ ಎಲ್ಲಿದೆ?

ಇನ್ನೊಂದೆಡೆ, ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿಗಳು ತಮ್ಮ ಗುರುತನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸುವ ರೀತಿಯಲ್ಲಿ ಅಧಿಕೃತ ಗುರುತಿನ ಚೀಟಿ ಧರಿಸಬೇಕೆಂಬ ನಿಯಮಗಳಿರುವ ಸಂದರ್ಭದಲ್ಲಿ, ಸಂಬಂಧಪಟ್ಟ PDO ಅವರು ಗುರುತಿನ ಚೀಟಿ ಧರಿಸದೆ ಪತ್ರಕರ್ತರೊಂದಿಗೆ ಅಧಿಕಾರದ ಮಧದಲ್ಲಿ ಮಾತನಾಡಿದ್ದಾರೆ.

“ಸರ್ಕಾರಿ ಗುರುತಿನ ಚೀಟಿ ಧರಿಸದೆ ಅಧಿಕಾರಿಯ ಗುರುತು ಹೇಗೆ ದೃಢಪಡಿಸಿಕೊಳ್ಳಬೇಕು?” ಎಂಬ ಪ್ರಶ್ನೆಯನ್ನೂ ಪತ್ರಕರ್ತರು ಮುಂದಿಟ್ಟಿದ್ದಾರೆ.

ವಿಡಿಯೋ ವೈರಲ್ — ಮೇಲಧಿಕಾರಿಗಳ ಗಮನಕ್ಕೆ

ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಪಂಚಾಯಿತಿ ಕಚೇರಿ ಆವರಣದಲ್ಲಿ ಪತ್ರಕರ್ತರು ಮತ್ತು PDO ನಡುವೆ ಮಾತಿನ ಚಕಮಕಿ ನಡೆದಿರುವುದು ಕಂಡುಬರುತ್ತದೆ.

ಪತ್ರಕರ್ತರಿಗೆ ಬೆದರಿಕೆ ನೀಡಲಾಗಿದೆ ಎಂಬ ಆರೋಪದ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಡಿಯೋವನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಸಂಚಾರಿ ಸತ್ಯದ ಪ್ರಶ್ನೆಗಳು

ಪತ್ರಿಕೆ ವಿತರಣೆ ಮಾಡಲು PDO ಪರ್ಮಿಷನ್ ಕಡ್ಡಾಯವೇ?

ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಪತ್ರಕರ್ತರಿಗೆ ಧಮಕಿ ನೀಡುವುದು ಸರಿಯೇ?

ಸರ್ಕಾರಿ ಅಧಿಕಾರಿಯು ಕರ್ತವ್ಯದ ವೇಳೆ ಗುರುತಿನ ಚೀಟಿ ಧರಿಸಿದ್ದರೇ?

ಈ ಘಟನೆಯ ಕುರಿತು ಮೇಲಧಿಕಾರಿಗಳು ಕ್ರಮ ಕೈಗೊಳ್ಳುವರೇ?

ಘಟನೆಯ ಸಂಪೂರ್ಣ ವಿಡಿಯೋ ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ಪರಿಶೀಲಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ.

About The Author