ಉಡಚಮ್ಮನಗರ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ವಿಜಯ ಸೇನೆ ಪರಿಹಾರ ದೊರಕಿಸಿಕೊಟ್ಟಿದೆ.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಂಗಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಡಚಮ್ಮನಗರ ಗ್ರಾಮದಲ್ಲಿ ಬಹಳ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದರ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಇವತ್ತು ಸರಿ ಮಾಡುತ್ತೇವೆ ನಾಳೆ ಸರಿ ಮಾಡಿಕೊಡುತ್ತೇವೆ ಎಂದು ಹೇಳುತ್ತಾ ಬಂದಿರುತ್ತಾರೆ.

ಕೆಲವು ದಿನಗಳ ಹಿಂದೆ ರಾಮದುರ್ಗದ ವಿಜಯ ಸೇನಾ ಸಮಿತಿಗೆ ಬಂದ ದೂರಿನ ಹಿನ್ನೆಲೆ ವಿಜಯ ಸೇನಾ ಸಮಿತಿ ಸಂಸ್ಥಾಪಕ ವಿಜಯ ನಾಯಕ್ ಅವರು ಕಾರ್ಯ ಪ್ರವೃತ್ತರಾಗಿದ್ದರು ಇಂದು ಆ ಊರಿನ ನೀರಿನ ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ

ವರ್ಷಗಳಿಂದ ನೆನೆಗುದಿಗೆ ಬಿದ್ದ ನೀರಿನ ಸಮಸ್ಯೆ ಕೆರೆ ನೀರು ಕುಡಿದು ಆರೋಗ್ಯ ಸಮಸ್ಯೆ ಮಾಡಿಕೊಳ್ಳುತ್ತದ್ದ ರಾಮದುರ್ಗ ತಾಲೂಕಿನ ಉಡಚಮ್ಮನಗರ ಗ್ರಾಮದ ಸಾರ್ವಜನಿಕ ಸಮಸ್ಯೆಗೆ ವಿಜಯ ಸೇನೆ ಪರಿಹಾರ ದೊರಕಿಸಿಕೊಟ್ಟಿದೆ ಕೆರೆ ನೀರು ಕುಡಿದು ಬದುಕು ಸಾಗಿಸುತ್ತಿದ್ದ ನೂರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ದೊರೆತಂತಾಗಿದೆ
ಇದರಿಂದ ಸಾರ್ವಜನಿಕರು ವಿಜಯ ಸೇನಾ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

ರಾಮದುರ್ಗ ತಾಲೂಕಿನಲ್ಲಿ ಅನೇಕ ಗ್ರಾಮಗಳಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ವಿಜಯ ಸೇನೆ ಧ್ವನಿಯಾಗಿದೆ ಎಂದು ಸಾರ್ವಜನಿಕರು ಹೇಳಿದರು.

About The Author