ವಕೀಲರ ಸಂರಕ್ಷಣೆಯ ಕಾಯ್ದೆ ಪರಿಣಾಮಕಾರಿ ಜಾರಿಗೆ ಸವದತ್ತಿ ವಕೀಲರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ

WhatsApp Group Join Now

ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ವಕೀಲರ ಮೇಲೆ ಆಗುತ್ತಿರುವ ಬೆದರಿಕೆ, ಹಲ್ಲೆ, ಕೊಲೆಯತ್ನ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ವಕೀಲರಿಗೆ ನಿಷ್ಪಕ್ಷಪಾತವಾಗಿ ನಿರ್ಭಯದಿಂದ ಮತ್ತು ಘನತೆಯಿಂದ ವೃತ್ತಿ ಮಾಡಲು ತುಂಬಾ ದುಸ್ಥರ ಆಗಿರುವ ಕಾರಣಕ್ಕಾಗಿ ಬೆಂಗಳೂರು ವಕೀಲರ ಪರಿಷತ್ ಮತ್ತು ರಾಜ್ಯದ ಹಲವಾರು ಜಿಲ್ಲೆಗಳು ಮತ್ತು ತಾಲ್ಲೂಕುಗಳ ವಕೀಲರ ಸಂಘಗಳು ದಿನಾಂಕ 03/11/2026 ರಂದು ರಾಜ್ಯಾದ್ಯಂತ ಪ್ರತಿಭಟನೆ ಕರೆಯನ್ನು ನೀಡಿ ವಕೀಲರ ಹಿತ ರಕ್ಷಣೆ ಕಾಯ್ದೆ ಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂದರೆ ಈ ಹಿಂದೆ ಜಾರಿಯಲ್ಲಿ ಇರುವ ವಕೀಲರ ಸಂರಕ್ಷಣೆಯ ಕಾಯ್ದೆಗೆ ತಿದ್ದುಪಡಿ ಮಾಡಿ ಕಠಿಣಗೊಳಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮತ್ತು ನ್ಯಾಯ ನಿರ್ವಹಣೆಯಲ್ಲಿ ವಕೀಲರ ಹಿತ ರಕ್ಷಿಸುವ ಕಾನೂನನ್ನು ಜಾರಿಗೆ ತರುವಂತೆ ಇಂದು ಸವದತ್ತಿ ವಕೀಲರ ಸಂಘದಿಂದ ಮತ್ತು ರಾಜ್ಯದ ಎಲ್ಲ ವಕೀಲ ಬಾಂಧವರ ಪರವಾಗಿ ಸವದತ್ತಿ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮತ್ತು ಕಾನೂನು ಮತ್ತು ಸಂಸದೀಯ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ, ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ ಮತ್ತು ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ, ಸಹ ಕಾರ್ಯದರ್ಶಿ ಶ್ರೀ ಆರ್ ವಿ ಹುಂಬಿ, ರಾಘವೇಂದ್ರ ಪೂಜಾರ ವಕೀಲರಾದ ಶ್ರೀ ಆರ್ ಎಂ ನಿಡವನಿ , ಆಯ್ ಎಂ ಹಡಗಲಿ ಎಸ್ ಎಂ ಸಾಂಗ್ರೇಶಕೊಪ್ಪ , ಎಂ ಎಂ ಎಲಿಗಾರ, ಬಿ ಕೆ ಕಡಕೋಳ, ಜಗದೀಶ ವಿ ಅಗಡಿ, ಪ್ರೇಮನಾಥ್ ಕುಂಕುಮಗಾರ, ಅಕ್ಕನಗೌಡರ, ಎಸ್ ಎಸ್ ಮಾನೆ , ಪ್ರವೀಣ್ ಮಾನಗಾಂವ, ಮುಸ್ತಾಕ್ ಶಹಾಪುರ, ಉಮೇಶ ನವಲನ್ನವರ, ವಾಯ ಪಿ ರಾಮಜಾರ, ಡಿ ಎಂ ಚೂರಿಖಾನ ವಿ ಡಿ ಎಲಿಗಾರ , ಎಂ ಎಂ ದೊಡಮನಿ,ವಿವೇಕ ಮುನವಳ್ಳಿ, ಕಾಸಿಂಸಾಬ ಮುಲ್ಲಾ ,ರಾಜು ಮೊರಬದ, ಮಂಜುನಾಥ ಮಲ್ಲಾಡ, ಎಂ ಎಸ್ ಹತ್ತಿ, ಮಹೇಶ ಅಂಗಡಿ, ಶ್ರೀಮತಿ ಪಟ್ಟಣಶೆಟ್ಟಿ, ಕುಮಾರಿ ಅಕ್ಕಮ ಲಗಮಣ್ಣವರ, ಇಮ್ತಿಯಾಜ್ ಎಲಿಗಾರ ಮಂಜುನಾಥ ಬಾಡಿಗೇರ, ಅಜಯ ಪಂಥರ, ಜೆ ಎಂ ತಾಂಭೋಳಿ, ಎ ಆಯ್ ಜಂಗ್ಲೀಸಾಬನವರ, ಮತ್ತು ಸಂಘದ ಇತರೆ ಸದಸ್ಯರು ಉಪಸ್ಥಿತರಿದ್ದರು.

About The Author