ರಾಮದುರ್ಗ ಅರಣ್ಯ ಇಲಾಖೆಯ ವತಿಯಿಂದ ಪಕ್ಷಿ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

WhatsApp Group Join Now

ರಾಮದುರ್ಗ ತಾಲೂಕಿನ ಸಿದ್ನಾಳ ಹಾಗೂ ಕಟಕೋಳ ಗ್ರಾಮದ ಕೆರೆಗೆ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ ಅವರ ನೇತೃತ್ವದಲ್ಲಿ ಮೀಡಿಯಾ ಕ್ಲಬ್ ರಾಮದುರ್ಗ ಸದಸ್ಯರು
ಭೇಟಿ ನೀಡಿ ವಿವಿಧ ಪ್ರಭೇದಗಳ ಪಕ್ಷಿಗಳನ್ನು ವೀಕ್ಷಿಸಿದರು.

ಸಿದ್ನಾಳ ಗ್ರಾಮದ ಕೆರೆಗೆ ವಿವಿಧ ದೇಶಗಳಿಂದ ವಲಸೆ ಬಂದಿರುವ ಹಲವಾರು ಪ್ರಭೇದಗಳ ವಿದೇಶಿ ಹಕ್ಕಿಗಳು ಸೇರಿದಂತೆ ಸ್ಥಳೀಯ ಪಕ್ಷಿಗಳೂ ಕಂಡುಬಂದವು.

ಪಕ್ಷಿಗಳ ವೈವಿಧ್ಯತೆ ಹಾಗೂ ಅವುಗಳ ಚಟುವಟಿಕೆಗಳನ್ನು ಮಾಧ್ಯಮ ಮಿತ್ರರು ಕುತೂಹಲದಿಂದ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಭಾಗ್ಯಶ್ರೀ ಮಸಳಿ ಅವರು ವಿವಿಧ ಪ್ರಭೇದಗಳ ಪಕ್ಷಿಗಳ ಪರಿಚಯ, ಅವುಗಳ ಜೀವನಶೈಲಿ, ಆಹಾರ ಪದ್ಧತಿ, ವಲಸೆಯ ಉದ್ದೇಶ ಹಾಗೂ ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಪಕ್ಷಿಗಳ ಸಂರಕ್ಷಣೆ, ಜಲಮೂಲಗಳ ರಕ್ಷಣೆ ಹಾಗೂ ಪ್ರಕೃತಿ ಸಂಪತ್ತಿನ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಕ್ಷಿ ಸಂಕುಲದ ಸಂರಕ್ಷಣೆ ಮತ್ತು ಪ್ರಕೃತಿಯ ಮಹತ್ವ ಸಾರಿದ ಅರಣ್ಯ ಇಲಾಖೆಯ ಈ ಕಾರ್ಯಕ್ರಮ ಗಮನ ಸೆಳೆಯಿತು.

ಮೀಡಿಯಾ ಕ್ಲಬ್ ಅಧ್ಯಕ್ಷ ವಿಜಯ ನಾಯ್ಕ ಉಪಾಧ್ಯಕ್ಷ ಪವನ ದೇಶಪಾಂಡೆ ಕಾರ್ಯದರ್ಶಿ ಪ್ರಶಾಂತ ಅಂಗಡಿ, ಶ್ರೀನಿಧಿ ಸಪಳಿಗ, ಖಜಾಂಚಿ ಅಂಬರೀಶ ಬಟಕುರ್ಕಿ, ಮಾರುತಿ ಮಾದರ ನಿಖಿಲ ಪತ್ತಾರ, ಶಂಕರ ಪಟ್ಟದಕಲ್ಲ, ಮೌನೇಶ ಪತ್ತಾರ ಪಕ್ಷಿ ವೀಕ್ಷಣೆ ನಡೆಸಿದರು.

ಈ ವೇಳೆ ಡಿ ವೈ ಆರ್ ಎಫ್.ಓ ಅಶೋಕ್ ವೈ ಕಾಂಬಳೆ .ಎಂ ಎಂ. ಮಿರ್ಜಿ.ಪಿ.ವಿ.ದೊಡ್ಡಪತ್ತಾರ.
ಬಿಟ್ ಫಾರೆಸ್ಟ್ ಮಹೇಶ್ ಕಿಲಾರಿ. ಮಹಾಂತೇಶ ತೇಲಿ. ಪಾಲ್ಗೊಂಡಿದ್ದರು.

About The Author