ರಾಮದುರ್ಗ ಹಾಲ್ ಟಿಕೆಟ್ ನೀಡಲು ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿರುವ ಆರೋಪ…!

WhatsApp Group Join Now

ಭ್ರಷ್ಟಾಚಾರ ಎಸಗುತ್ತಿದ್ದ ಶಾಲಾ ಮುಖ್ಯೋಪಾಧ್ಯಾನ ಚಳಿಬಿಡಿಸಿದ ವಿಜಯ ಸೇನೆ
ಶೀಘ್ರವೇ ಮುಖ್ಯೋಪಾಧ್ಯಾಯನ ಅಮಾನತ್ತಿಗೆ ಪಟ್ಟು

ರಾಮದುರ್ಗ ಪಟ್ಟಣದ ನೇತಾಜಿ ಸುಭಾಷಚಂದ್ರ ಭೋಸ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಮುಖ್ಯೋಪಾಧ್ಯಾಯ ಶಿಲವಂತಮಠ ಅವರು
ಪರೀಕ್ಷಾ ಶುಲ್ಕ ಎಂದು ಹಾಲ್ ಟಿಕೆಟ್ ಫಾರ್ಮ ತುಂಬಲು ತಲಾ 2000 ರೂಪಾಯಿ ಹಣಪಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ವಿಷಯ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ವಿಜಯ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ವಿಜಯ ನಾಯ್ಕ ಮಕ್ಕಳ ನೆರವಿಗೆ ಧಾವಿಸಿದರು ನಂತರ ಮುಖ್ಯೋಪಾಧ್ಯಾಯ ಶಿಲವಂತಮಠ ಅವರನ್ನ ವಿಜಯ ನಾಯ್ಕ ತರಾಟೆಗೆ ತೆಗೆದುಕೊಂಡರು ಹಾಗೂ ಬೆಳಗಾವಿ ಡಿಡಿಪಿಐ ಹಿರೇಮಠ ಅವರನ್ನ ದೂರವಾಣಿ ಮುಖಾಂತರ ಸಂರ್ಪಕ ಮಾಡಿ ಇಂತಹ ಕೃತ್ಯದಲ್ಲಿ ಭಾಗವಹಿಸಿದ ಮುಖ್ಯೋಪಾಧ್ಯಾಯನ ಬಗ್ಗೆ ಕಳೆದ ವರ್ಷವೇ ದೂರು ಸಲ್ಲಿಸಿ ತಾಕೀತು ಮಾಡಿ ಕೈಬಿಡಲಾಗಿತ್ತು ಆದರೂ ಅವರು ಅದೇ ಚಾಳಿ ಮುಂದುವರೆಸಿದ್ದಾರೆ ಅವರನ್ನು ಶೀಘ್ರವೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿಗಳೂ ಸಹ ಬಿಇಓ ಅವರ ಮುಂದೆ ಆದ ಅನ್ಯಾಯ ಹಾಗೂ ಹಣ ನೀಡಿದ ಕುರಿತು ವಿಷಯ ತಿಳಿಸಿದರು ಇಂತಹ ಅಧಿಕಾರಿಗಳ ವಿರುದ್ದ ಶೀಘ್ರವಾಗಿ ಕ್ರಮ ಜರುಗಿಸಲು ಆಗ್ರಹಿಸಿದರು

About The Author