BREAKING NEWS

ಚೆನ್ನಮ್ಮನ ಶೌರ್ಯ, ಸ್ವಾಭಿಮಾನ ಸ್ಮರಣೆ; ಮಕ್ಕಳನ್ನು ಚೆನ್ನಮ್ಮನಂತೆ ಬೆಳೆಸಲು ಸಚಿವ ಸತೀಶ್ ಜಾರಕಿಹೊಳಿ ಕರೆ

ಬೆಳಗಾವಿ ರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದ ಪರಂಪರೆಯನ್ನು ಸ್ಮರಿಸುವ 202ನೇ ಕಿತ್ತೂರು ಉತ್ಸವವನ್ನು ಕಾಕತಿಯಲ್ಲಿ ಸಂಭ್ರಮದಿಂದ ಆಚರಿಸುವುದು ಹೆಮ್ಮೆಯ ಸಂಗತಿ. ದೇಶಕ್ಕೆ ಮಾದರಿಯಾಗುವಂತೆ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶಗಳಂತೆ ಬೆಳೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ, ಕಾಕತಿ ಗ್ರಾಮ ಪಂಚಾಯತ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ…

Read More

ವೀರರಾಣಿಯ ನೆಲದಲ್ಲಿ ಸಾಂಸ್ಕೃತಿಕ ವೈಭವ; ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ ಬ್ರಿಟೀಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ ಸ್ಮರಣಾರ್ಥ ಆಚರಿಸುವ ಕಿತ್ತೂರು ಉತ್ಸವವು ಶುಕ್ರವಾರ ಕಿತ್ತೂರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆರಂಭಗೊಂಡಿತು. ಚನ್ನಮ್ಮನ ಉತ್ಸವದ ಸಂಭ್ರಮ, ಐತಿಹಾಸಿಕ ಪರಂಪರೆಯನ್ನು ನೆನಪಿಸುವ ವಾತಾವರಣ ಕಿತ್ತೂರಿನಲ್ಲಿ ನಿರ್ಮಾಣವಾಯಿತು. ರಾಜ್ಯದಾದ್ಯಂತ ಸಂಚರಿಸಿದ ವೀರ ಜ್ಯೋತಿಯನ್ನು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೀರರಾಣಿ ಕಿತ್ತೂರು…

Read More

ಕಿತ್ತೂರು ಚನ್ನಮ್ಮ ಕನ್ನಡ ನಾಡಿನ ಅಸ್ಮಿತೆ- ಸ್ವಾಭಿಮಾನ, ಆತ್ಮ ಗೌರವದ ಸಂಕೇತ: ಚುಕ್ಕಿ ನಂಜುಂಡಸ್ವಾಮಿ

ಬೆಳಗಾವಿ ಕಿತ್ತೂರು ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಶುಕ್ರವಾರ ಜರುಗಿದ ಚನ್ನಮ್ಮನ ಕಿತ್ತೂರ ಉಸ್ತವವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರಾದ ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ ಉದ್ಘಾಟಿಸಿ ಅವರು ಮಾತನಾಡಿದರು. ಕಿತ್ತೂರು ಚನ್ನಮ್ಮ ಧೈರ್ಯ, ಸಾಹಸದ ಪ್ರತೀಕವಾಗಿದ್ದು ಬ್ರಿಟಿಷರಿಗೆ ಕಪ್ಪ ಕೊಡುವುದನ್ನು ವಿರೋಧಿಸಿದ ದಿಟ್ಟ ಮಹಿಳೆಯಾಗಿದ್ದ ಅಂತಹ ಮಹಾನ್ ಮಹಿಳೆ ಜನಿಸಿದ ನಮ್ಮ ನಾಡಿನಲ್ಲಿ ಇಂದಿಗೂ ಸಹ ಮಹಿಳೆಯರನ್ನು ನೋಡುವಂತಹ ಮನಸ್ಥಿತಿ ಬದಲಾಗದೆ ಇರುವುದು ಕಳವಳಕಾರಿ ಸಂಗತಿಯಾಗಿದೆ. ಭ್ರೂಣ ಹತ್ಯೆ…

Read More

ಚಳಿಗಾಲ ಅಧಿವೇಶನ-2026 ರ ಪೂರ್ವ ಸಿದ್ಧತಾ ಸಭೆ.

ಬೆಳಗಾವಿ ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನವನ್ನು ಯಶಸ್ವಿಗೊಳಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ‌ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಚಳಿಗಾಲ ಅಧಿವೇಶನ-2026 ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಚಳಿಗಾಲದ ಅಧಿವೇಶನ ಸಿದ್ಧತೆಗೆ ಸಮಯಾವಕಾಶವಿದ್ದು, ಅಧಿವೇಶನ ಯಶಸ್ವಿಗಾಗಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು…

Read More

ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಾಲವಾರ ಪೂಜ್ಯರ ಜನ್ಮದಿನದ ಅಂಗವಾಗಿ 155ಕ್ಕೂ ಹೆಚ್ಚು ಬುದ್ದಿ ಮಾಧ್ಯರಿಗೆ ಉಚಿತ ಕ್ಷೌರ ಸೇವೆ

ಕಲಬುರಗಿ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಷ.ಬ್ರ.ಡಾ. ಸಿದ್ಧ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 62ನೇ ವರ್ಷದ ಜನ್ಮದಿನದ ಅಂಗವಾಗಿ, ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಅನಾಥ ನಿರ್ಗತಿಕರ ಕೇಂದ್ರದಲ್ಲಿ 155ಕ್ಕೂ ಹೆಚ್ಚು ಅನಾಥ ಹಾಗೂ ಮಾನಸಿಕ ಬುದ್ಧಿ ಮಾಧ್ಯರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಲಾಯಿತು. ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ…

Read More

ಗೋಣಗನೂರು ಶಾರ್ಟ್ ಸರ್ಕ್ಯೂಟ್‌ನಿಂದ 7 ಎಕರೆ ಕಬ್ಬಿನ ಬೆಳೆ ಭಸ್ಮ; ಪರಿಹಾರಕ್ಕೆ ರೈತರ ಆಗ್ರಹ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಣಗನೂರು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದೆ ಎನ್ನಲಾದ ಅಗ್ನಿ ಅವಘಡದಲ್ಲಿ ಸುಮಾರು 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. ಸೈಯದಸಾಬ್ ಸೈಯದ, ಬುಡನಸಾಬ್ ಸೈಯದ, ಸುಭಾನಲ್ಲ ಸೈಯದ ಹಾಗೂ ಕಾಶಿಂಸಾಬ್ ಸೈಯದ ಅವರಿಗೆ ಸೇರಿದ ಹೊಲಗಳಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಗಾಳಿಯ ರಭಸಕ್ಕೆ ಬೆಂಕಿ…

Read More

ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಕಲ್ಪಿಸಲು ಆಗ್ರಹ

20 ವರ್ಷಗಳ ಹೋರಾಟಕ್ಕೆ ಸ್ಪಂದನೆ ಯಾವಾಗ? ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ರಾಮದುರ್ಗ: ಲೋಕಾಪುರ–ರಾಮದುರ್ಗ–ಸವದತ್ತಿ–ಧಾರವಾಡ ಮಾರ್ಗವಾಗಿ ಹೊಸ ರೈಲು ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ, ರೈಲು ಮಾರ್ಗ ಹಾಗೂ ಮಹಾದಾಯಿ ನದಿ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ತಹಶೀಲ್ದಾರ್‌ರ ಮೂಲಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಸೀರಅಹ್ಮದ ಭೈರಕದಾರ, ಕಳೆದ 20 ವರ್ಷಗಳಿಂದ ಈ ಭಾಗದ ಅಭಿವೃದ್ಧಿಗಾಗಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಿರಂತರ ಹೋರಾಟ…

Read More

ಕನ್ನಡ ಸಾಹಿತ್ಯ ಪರಿಷತ್ತಿನ ಪುನಶ್ಚೇತನಕ್ಕೆ ಜಾಣಗೆರೆ ವೆಂಕಟರಾಮಯ್ಯ ಅವರ ಸಂಕಲ್ಪ

ಕನ್ನಡ-ಕನ್ನಡ ನಿಘಂಟು ಯೋಜನೆಗೆ ಮರುಚಾಲನೆ, ‘ಕನ್ನಡ ನುಡಿ’ ಪತ್ರಿಕೆಗೆ ಮರುಜೀವ, ಯುವಜನರನ್ನು ಸಾಹಿತ್ಯದತ್ತ ಸೆಳೆಯಲು ಹಲವು ಮಹತ್ವದ ಯೋಜನೆಗಳ ಭರವಸೆ ಬೆಂಗಳೂರು: “ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೋಲುದ್ರೂ ಮೂಗ್ನಲ್ಲಾದ್ರು ಕನ್ನಡ್ ಪದವನ್ನೇ ಆಡ್ತೀನಿ” ಎಂಬ ಜಿ.ಪಿ. ರಾಜರತ್ನಂ ಅವರ ಕನ್ನಡಾಭಿಮಾನದ ಸಾಲುಗಳು ಕನ್ನಡಿಗರ ಭಾಷಾಪ್ರೇಮದ ಪ್ರತೀಕವಾಗಿವೆ. ಕನ್ನಡದ ಅಸ್ಮಿತೆ, ಭಾಷೆಯ ಘನತೆ, ಸಾಹಿತ್ಯದ ಶ್ರೀಮಂತಿಕೆ ಮತ್ತು ಕನ್ನಡಪರ ಹೋರಾಟದ ಆಶಯಗಳನ್ನು ಮುಂದಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಚೈತನ್ಯ ತುಂಬುವ ಸಂಕಲ್ಪವನ್ನು ಕನ್ನಡಪರ ಹೋರಾಟಗಾರ, ಸಾಹಿತಿ…

Read More

ಮಾನವೀಯತೆಯ ಆಧಾರದ ಮೇಲೆ ರೈತರ ಸಾಲ ವಸೂಲಾತಿ ಕೈಗೊಳ್ಳಿ: ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ ಜಿಲ್ಲೆಯಲ್ಲಿ ಕೂಡ ಬರಗಾಲದ ಸಂದರ್ಭ ಎದುರಾಗಿರುವುದರಿಂದ ಬ್ಯಾಂಕುಗಳು ಮಾನವೀಯತೆಯ ಆಧಾರದ ಮೇಲೆ ರೈತರ ಸಾಲ ವಸೂಲಾತಿ ಕೈಗೊಳ್ಳಬೇಕು ಹಾಗೂ ಸಾಲ ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಜಿಲ್ಲೆಯ ಎಲ್ಲ ಬ್ಯಾಂಕುಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಡಿಸಿಸಿ/ಡಿ.ಎಲ್.ಆರ್.ಸಿ. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಲ ಮರುಪಾವತಿಗೆ 60 ತಿಂಗಳ ಕಾಲಾವಕಾಶ:ರೈತರ ಸಾಲಗಳನ್ನು ಮರುರಚಿಸಿ, 12…

Read More

ಲಿಂಗಾಯತ ಸಂಘಟನೆ ವತಿಯಿಂದ ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

ಬೆಳಗಾವಿ : ಬಸವಣ್ಣನವರ ಆಚಾರ ವಿಚಾರಗಳನ್ನು ಪ್ರಚಾರಪಡಿಸುವುದಲ್ಲದೆ ಧಾರ್ಮಿಕವಾಗಿ ನಾವು ಜಾಗೃತಗೊಳ್ಳಲು ನಾವೆಲ್ಲ ಒಗ್ಗಟ್ಟಿನಿಂದ ಮುಂದೆ ಸಾಗಬೇಕಿದೆ ಬಸವ ಜಯಂತಿ ಉತ್ಸವದ ಮೂಲಕ ನಾವೆಲ್ಲ ಒಂದಾಗಿದ್ದೇವೆ ಈ ನಿಟ್ಟಿನಲ್ಲಿ ಮುಂದೆ ಸಾಗಿದಾಗ ಮಾತ್ರ ಧರ್ಮದ ಜಾಗೃತಿ ಸಾಧ್ಯ ಎಂದು ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ರವಿವಾರ ದಿ ೧೧ ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಲಿಂಗಾಯತ ಸಂಘಟನೆಗಳ ಒಕ್ಕೂಟದ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪದಾಧಿಕಾರಿಗಳನ್ನು ಸತ್ಕರಿಸಿ…

Read More