ಹೂವಿನಹಡಗಲಿ:ಶ್ರೀಗ್ರಾಮದೇವತೆ ಊರಮ್ಮದೇವಿ ಉತ್ಸವ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ:ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ರಥೊತ್ಸವ, ಗುರುವಾರ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ನಿಯಮಾನುಸಾರ ದೇವಿ ಚೌತಿ ಮನೆಯ ಮುಂಭಾಗದಲ್ಲಿ, ಎಲ್ಲಾ ಕಾರ್ಯಕ್ರಮಗಳನ್ನು ಜರುಗಿಸಿದ ನಂತರ ದೇವಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಂಪ್ರದಾಯದಂತೆ ಬೆನ್ನುಗೋಡೆಯಿಂದ ಪಟ್ಟಣದ ಗೌಡರ ಮನೆ, ಬಣಕಾರ, ಶಾನಬೋಗರ ಮನೆ, ಹಾಗೂ ಪ್ರಮುಖ ದೇವಾಲಯಗಳಿಗೆ ತೆರಳಿದ ದೇವಿ ಉತ್ಸವ ಮೂರ್ತಿಗೆ ಉಡಿ ತುಂಬಲಾಯಿತು. ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದಿಂದ, ವಾಲಿಯರ ಓಣಿಯ ಮೂಲಕ ಬಂದ ದೇವಿ ಉತ್ಸವ ಮೂರ್ತಿಯು ಚೌತಿ…
