ಒಂದೇ ಕುಟುಂಬದ ಠೇವಣಿ ಹಣ ಮರಳಿಸದ ಕೋ-ಆಪರೇಟಿವ ಸೊಸೈಟಿಗೆ ದಂಡ ವಿಧಸಿ ಮತ್ತು ಪರಿಹಾರಕ್ಕೆ ಆದೇಶ
ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಸೆಂಟ್ರಲ್ಎಕ್ಸೈಸ್ ಕಾಲೋನಿಯ ನಿವಾಸಿಗಳಾದ ಅಶೋಕ ಮತ್ತು ರೇಖಾ ಅನ್ವೇಕರ್ ಹಾಗೂ ಸುಮಾ ಮತ್ತು ಅವರ ಮಗಳು ನಿಸ್ಮಿತಾ ವಿಠ್ಠಲಕರಇವರು ಹುಬ್ಬಳ್ಳಿಯ ಗೋಕುಲ ರೋಡ್ನಲ್ಲಿರುವ ಎದುರುದಾರರಾದ ಕಿತ್ತೂರುರಾಣಿ ಚೆನ್ನಮ್ಮ ಕೋ-ಆಪರೇಟಿವ ಸೊಸೈಟಿಯಲ್ಲಿ 2023-24 ರಲ್ಲಿತಲಾ ರೂ:13 ಲಕ್ಷ, ರೂ:5,50,000, ರೂ:14,50,000 ಹಾಗೂ ರೂ:3,50,000 ಮೊತ್ತವನ್ನು ಠೇವಣಿ ಇಟ್ಟಿದ್ದರು. ಕೇಲವು ಠೇವಣಿಗಳ ಅವಧಿ ಮುಕ್ತಾಯವಾಗಿದ್ದವು ಮತ್ತು ಕೇಲವೊಂದು ಮುಂದಿನ ವರ್ಷದಲ್ಲಿ ಮುಕ್ತಾಯವಾಗುತ್ತಿದ್ದವು. ದೂರುದಾರರು ಎದುರುದಾರರ ಬಗ್ಗೆ ವ್ಯವಹಾರಿಕ ತೊಂದರೆಗಳನ್ನು ಅರಿತು ತಮ್ಮ ಎಲ್ಲ ಠೇವಣಿ ಹಣ…
