ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು–ಕೊರತೆ ಸಭೆಯು ರಾಮದುರ್ಗ ಪೋಲೀಸ್ ಉಪಾಧೀಕ್ಷಕರು ಉಪ ವಿಭಾಗ ರಾಮದುರ್ಗದ (DYSP) ಚಿದಂಬರ ವಿ ಮಡಿವಾಳರ ಇವರ ಉಪಸ್ಥಿಯಲ್ಲಿ ನಡೆಯಿತು.

ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರ ದೈನಂದಿನ ಸಮಸ್ಯೆಗಳು, ಭೂ ವಿವಾದಗಳು, ಪೊಲೀಸ್ ದೂರುಗಳು, ಮತ್ತು ಜಮೀನು ವಿವಾದಗಳು, ಜಾತಿ ನಿಂದನೆ ಪ್ರಕರಣಗಳು, ಮೂಲಭೂತ ಸೌಕರ್ಯಗಳ ಕೊರತೆ, ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿನ ಸಮಸ್ಯೆಗಳು, ಶಬ್ದಮಾಲಿನ್ಯ ಟ್ರ್ಯಾಕ್ಟರ್, ಇತರೆ ಅಕ್ರಮ ಡಿಜೆಸೌಂಡ್ ತೆರೆವು, ಅಕ್ರಮ ಮದ್ಯ ಮಾರಾಟ,
ರಾಮದುರ್ಗ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ತಂಬಾಕು ಮಿಶ್ರಿತ ಮಾವಾ ಮಾರಾಟ ಹೆಚ್ಚಾಗಿದೆ ತಕ್ಷಣವೇ ಈ ಮಾವಾ ಮಾರಾಟಾ ಅಂತಹ ಅಕ್ರಮ ಅಡ್ಡೆಗಳ ಮೇಲೆ ಹಾಗೂ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ,
ಹಾಗೂ ರಾಮದುರ್ಗ ಮುಖ್ಯ ರಸ್ತೆಯ ಮೇಲೆ ಮರಳು ಮತ್ತು ಕಡಿಗಳನ್ನು ಸುರಿದಿರುವುದು ವಾಹನ ಸವಾರರ ಸುರಕ್ಷತೆಗೆ ಅಪಾಯಕಾರಿಯಾಗಿದೆ ಅದನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿದರು, ಸಾಮಾಜಿಕ ಅನ್ಯಾಯಗಳ ಕುರಿತು ವಿಶೇಷವಾಗಿ ಅವರ ಬೇಡಿಕೆಗಳು, ಸಮಸ್ಯೆಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಲಾಯಿತು.

ಈ ವೇಳೆ ಡಿ. ವಾಯ್. ಎಸ್. ಪಿ ಚಿದಂಬರ ವಿ ಮಡಿವಾಳರ ಮಾತನಾಡಿ ಒಂದು ಮೊಬೈಲಿಗೆ ಕವರನ್ನು ಹಾಕಿ ಹೇಗೆ ಜೋಪಾನವಾಗಿ ನೋಡಿಕೊಳ್ಳುತ್ತೇವೆ ಹಾಗೆಯೇ ನಮ್ಮ ಜೀವನದ ಬಗ್ಗೆ ಕಾಳಜಿ ವಹಿಸಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು
ಪ್ರತಿ ವರ್ಷ ರೋಗ, ರುಜಿನಗಳಿಗೆ ಬಲಿಯಾಗುವವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ.
ಅತಿಯಾದ ವೇಗ ಮತ್ತು ಮದ್ಯಪಾನ ಸೇವನೆಯಿಂದಲೇ ಅತಿ ಹೆಚ್ಚು ಪ್ರಾಣಾಪಾಯದ ಅಪಘಾತಗಳು ಸಂಭವಿಸುತ್ತಿವೆ ಮದ್ಯಪಾನ ಮಾಡಿ ಸಿಕ್ಕಿಬಿದ್ದರೆ 10,000 ವರೆಗೂ ದಂಡ ಬೀಳಬಹುದು, ದ್ವಿಚಕ್ರ ವಾಹನ ಸವಾರರು ಪ್ರಯಾಣಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ದುಡಿಯುವ ವ್ಯಕ್ತಿಗೆ ಪ್ರಾಣ ಹಾನಿಯಾದರೆ ಆ ಕುಟುಂಬ ಬೀದಿಗೆ ಬರುತ್ತದೆ ಎಂಬುದನ್ನು ಪ್ರತಿಯೊಬ್ಬ ಚಾಲಕ ಮತ್ತು ಸವಾರ ತಮ್ಮ ಮನಸ್ಸಿನಲ್ಲಿ ಸದಾ ಇಟ್ಟುಕೊಳ್ಳಬೇಕು. ಯಾವುದೇ ಪ್ರಾಣಹಾನಿ ಆಗದಂತೆ ವಾಹನ ಸಂಚಾರ ಮಾಡುವಾಗ ಸಂಚಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಾಹನ ನೀಡುವ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಟ್ರ್ಯಾಕ್ಟರ್ಗಳ ಮೇಲೆ ಅತಿಯಾದ ಶಬ್ದ ಮಾಡುವ ಡಿಜೆ (DJ) ಸೌಂಡ್ ಸಿಸ್ಟಮ್ಗಳನ್ನು ಅಳವಡಿಸುವುದು ಕಾನೂನುಬಾಹಿರ. ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಮತ್ತು ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸುವ ಟ್ರ್ಯಾಕ್ಟರ್ಗಳ ಮೇಲಿನ ಸೌಂಡ್ ಬಾಕ್ಸ್ಗಳನ್ನು ಪೊಲೀಸರು ಜಪ್ತಿ ಮಾಡಬಹುದು ಎಂದು ಡಿ. ವಾಯ್. ಎಸ್. ಪಿ ಚಿದಂಬರ ವಿ ಮಡಿವಾಳರ ಎಚ್ಚರಿಕೆ ನೀಡಿದರು
ರಾಮದುರ್ಗ ವೃತ್ತದ ಪೊಲೀಸ್ ನಿರೀಕ್ಷಕರು (CPI) ವಿನಾಯಕ ಬಡಿಗೇರ ಮಾತನಾಡಿ ಲಿಂಗದಾಳ ಗ್ರಾಮದಲ್ಲಿ ಸ್ಮಶಾನಕ್ಕೆ ದಾರಿ ಸಲುವಾಗಿ ಸಾರ್ವಜನಿಕರಿಂದ ಬೇಡಿಕೆ ಇಟ್ಟಿದ್ದು. ರಾಮದುರ್ಗ ತಾಲೂಕಿನ ಇಡಗಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಿಂಗದಾಳ ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಸಲವಾಗಿ ಜಗಳ ವಾಗಿದ್ದು ಸ್ಮಶಾನ ಭೂಮಿಗೆ ದಾರಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರ ಮಟ್ಟದಲ್ಲಿ ಕೆಲಸ ಆಗಬೇಕು ಎಂದು ಹೇಳಿದರು.
ಹೋದ ವರ್ಷದಲ್ಲಿ ಸುಮಾರು 48 ಅಪಘಾತಗಳು ಆಗಿದ್ದು ಅದರಲ್ಲಿ ಸುಮಾರು 30 ರಿಂದ 35ರ ವರೆಗೆ ದ್ವಿಚಕ್ರ ವಾಹನ ಸವಾರರ ಆಗಿರುತ್ತಾರೆ. ಆದಕಾರಣ ದಯವಿಟ್ಟು ಮಧ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸಬೇಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಅಪ್ರಾಪ್ತರಿಗೆ ವಾಹನ ನೀಡಬೇಡಿ, ಅಪರಾಧಗಳು ಕಡಿಮೆ ಆಗಬೇಕು ಪೊಲೀಸ್ ಠಾಣೆಯಲ್ಲಿ ಉಚಿತವಾಗಿ FIR ದಾಖಲೆ ಮಾಡಲಾಗುವುದು ವೈಯಕ್ತಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ ಇದರ ಬಗ್ಗೆ ಯಾವಾಗ ಬೇಕಾದರೂ ಬಂದು ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ತಿಳಿಸಿದರು.
ಈ ವೇಳೆ ರಾಮದುರ್ಗ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (PSI) ಸವಿತಾ ಮುನ್ಯಾಳ, ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು



