ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭಾರತೀಯ ಮಜ್ದೂರ್ ಸಂಘ ಬೆಳಗಾವಿ ಸಮಿತಿಯಿಂದ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ ಮತ್ತು ಮನವಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾರ್ಮಿಕ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯ ಕಾರ್ಮಿಕ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧ ನೀತಿಯನ್ನು ವಿರೋಧಿಸಿ ಜಿಲ್ಲೆಯ ಎಲ್ಲ ವಿಭಾಗಗಳ ಕಾರ್ಮಿಕರು ಹಾಗೂ ನೌಕರರು ತಮ್ಮ ಹಕ್ಕುಗಳನ್ನು ಉಳಿಸಿ ರಕ್ಷಿಸಿಕೊಳ್ಳಲು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಭಾರತದ ದೇಶಾಧ್ಯಂತ ಎಲ್ಲ ರಾಜ್ಯಗಳ ಜಿಲ್ಲಾ ಮಟ್ಟದಲ್ಲಿ ಬುಧವಾರ ಧರಣಿ ಸತ್ಯಾಗ್ರಹವನ್ನು ನಡೆಸಿ. ಬೇಡಿಕೆಗಳನ್ನು ಇಟ್ಟರು
ಪ್ರತಿಭಟನೆಯ ಪ್ರಮುಖ ವಿಷಯಗಳು:
ಇಪಿಎಫ್ಓ ಕೊಡುಗೆಯಲ್ಲಿ ವೇತನ ಮಿತಿಯನ್ನು ಹೆಚ್ಚಿಸುವುದು.
ಇ.ಎಸ್.ಐ.ಸಿ. ವೇತನ ಮಿತಿಯನ್ನು ಹೆಚ್ಚಿಸುವುದು.
ಇಪಿಎಸ್ 95 ಪಿಂಚಿಣಿಯನ್ನು 1000 ದಿಂದ ಹೆಚ್ಚಿಸಿ ಪ್ರತಿತಿಂಗಳಿಗೆ 7500/- ಕೊಡಬೇಕು.
ಇಪಿಎಸ್. ವೇತನ ಪಿಂಚಣಿದಾರರಿಗೆ ಆಯುಷ್ಯಮಾನ ಭಾರತ ವೈದ್ಯಕೀಯ ಯೋಜನೆಯನ್ನು ಜಾರಿಗೆ ನೀಡಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಹಾಗೂ ನೌಕರರನ್ನು ಖಾಯಂಗೊಳಿಸಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಡಿಯಲ್ಲಿ ಕೆಲಸ ಮಾಡುವ ಎಲ್ಲಾ ಸ್ಟೀಮ್ ಕಾರ್ಮಿಕರನ್ನು ನೌಕರರನ್ನಾಗಿ ಪರಿಗಣಿಸಬೇಕು. ಅವರಿಗೆ ಇ.ಎಸ್.ಐ. ಮತ್ತು ಪಿ.ಎಫ್. ಸೌಲಭ್ಯ ಸಿಗಬೇಕು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ದುಡಿಯುವ 1.20.000 ನೌಕರರಿಗೆ 38 ತಿಂಗಳ ಹಿಂಬಾಕಿ ವೇತನ ಹಾಗೂ 01-01-2024 ರಿಂದ ವೇತನ ಪರಿಷ್ಕರಣೆಯನ್ನು ಕಡ್ಡಾಯವಾಗಿ ಜಾರಿಮಾಡಲೇಬೇಕು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಗುತ್ತಿಗೆ ನೌಕರರ ಪದ್ಧತಿಯನ್ನು ರದ್ದುಗೊಳಿಸಿ ಇನ್ನುಮುಂದೆ ಖಾಯಂ ನೌಕರಿ ಪದ್ಧತಿಯನ್ನು ಜಾರಿಗೆ ತರಬೇಕು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈಗ ಫಲಾನುಭಿವಗಳಿಗೆ ಕೊಡುವ ಜನಪ್ರಿಯ ಯೋಜನೆಗಳನ್ನು ರದ್ದುಪಡಿಸಬೇಕರು.
ಫಲಾನುಭಿವಿಗಳಿಗೆ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಕೊಡುವ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಸಕಾಲದಲ್ಲ ಸೌಲಭ್ಯಗಳು ಸಿಗುವ ವ್ಯವಸ್ಥೆ ಜಾರಿಯಾಗಬೇಕು. ಹಾಗೂ ಕರ್ನಾಟಕ ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಗುತ್ತಿಗೆ ನೌಕರರು ಇದ್ದರು ಸಹಿತ ಹೊಸದಾಗಿ ರಾಜ್ಯಾದ್ಯಂತ 43 ಸೇವಾ ಕೇಂದ್ರಗಳನ್ನಾಗಿ ವಿಂಗಡಿಸಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕೆಲಸ ಮಾಡಲು ಗುತ್ತಿಗೆ ಕೊಟ್ಟಿರುವುದನ್ನು ಕೂಡಲೇ ರದ್ದುಗೊಳಿಸಬೇಕು.
ಎಲ್ಲಾ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಡಿಯಲ್ಲಿ ಹೆಚ್ಚಿನ ಸೌಲಭ್ಯ ಸಿಗುವ ವ್ಯವಸ್ಥೆ ಜಾರಿಯಾಗಬೇಕು ಧರಣಿ ಸತ್ಯಾಗ್ರಹವನ್ನು ನಡೆಸಿ. ಬೆಳಗಾವಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಕಾರ್ಮಿಕ ಮಂತ್ರಿಗಳಿಗು ಮತ್ತು ರಾಜ್ಯ ಮುಖ್ಯಂತ್ರಿಗಳಿಗೆ ಹಾಗೂ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಶಾಂತ ಕಲಾದಗಿ, ಅಸಂಘಟಿತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮಾ ಆಲಗುಂಡಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಮಾರುತಿ ವಾರ್ತೆಪ್ಪನವರ, ವಿಠ್ಠಲ ವಾರ್ತೆಪ್ಪನವರ, ಸಚಿನ ನವಲಗುಂದ, ಬಸವರಾಜ ಹುಣಸಿಕಟ್ಟಿ ಭೀಮ, ರೂಪಾ ಸಕ್ರಿ, ಶಿಶಿಂಧೆ, ಅರ್ಜುನ ಕಿತ್ತೂರ, ಅಶೋಕ ಬೆಡಗೆ ಗೋವಿಂದ ಬಾದಾಮಿ, ರಾಜು ಮುದಕವಿ, ಪರಶುರಾಮ ಮುಷ್ಟಿಗೇರಿ, ಬಸಪ್ಪ ಮಾಳಶೆಟ್ಟಿ, ಶಂಕ್ರಪ್ಪ ಬನೆಪ್ಪನವರ, ರಾಜು ಕೆನೇರಿ, ಸೋಮನಾಥ ಅಪ್ಪನ್ನವರ, ಕುಮಾರ ವಡ್ಡರ, ಕರಿಯಪ್ಪ ವಡ್ಡರ, ಮುತ್ತಪ್ಪ ಹಡಪದ, ನಾಗಲಿಂಗ ಬಡಿಗೇರ, ಶಿವಾನಂದ ಹರ್ತಿ, ಉಮೇಶ ಕೋನನ್ನವರ, ರತ್ನಾ ದಿವಟಗಿ, ವೀಣಾ ಆರಿ, ಮಾಲಾ ಬಾರಕೇರ, ಗಂಗವ್ವ ಕುಪ್ಪನಿ, ಪಕೀರವ್ವ ಯರಗಣ್ಣಿ, ಅನ್ನಪೂರ್ಣ ಖಾನಪೇಠ, ಸುರೇಶ ಮಾದರ, ನಾಗಪ್ಪ ಮಾದರ, ಮುರಳಿ ಕಮ್ಮಾರ, ಪರಶುರಾಮ ಕಲಾಲ, ಪ್ರಕಾಶ ವಗ್ಗರ, ಬಸವರಾಜ ಯಾದವಾಡ, ದ್ಯಾಮಣ್ಣಾ ಮಾದರ, ರಾಜು ಬಂಡಿವಡ್ಡರ (ಸಾಲಾಪೂರ) ನಾಗಪ್ಪ ಮೇಲಗೇರಿ, ಚನ್ನಪ್ಪ ತೋಟದ, ಮಕ್ತುಮಸಾಬ ಅತ್ತಾರ(ಸಂಗಳ), ಕೃಷ್ಣಾ ಆರೇರ, ರಫೀಕ ಜೈನೇಖಾನ, ಮೌನೇಶ ಬಡಿಗೇರ, ಮಾದೇವಪ್ಪ ದಿವಟಗಿ, ಹನಮಂತ ಬಂಡಿವಡ್ಡರ, ಕೃಷ್ಣಾ ಬಂಡಿವಡ್ಡರ, ನಾಗಪ್ಪ ಬಂಡಿವಡ್ಡರ, ಮಾನಪ್ಪ ಬಡಿಗೇರ, ಇದ್ದರು.



