ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹರಳಯ್ಯ ಸರ್ಕಲ್ ಮುಂದೆ ಇರುವ ಮೇನ್ ರೋಡ್ ಮಧ್ಯದಲ್ಲಿ ಇರ್ತಕ್ಕಂತ ಡಿವೈಡರ್ ಅನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ರವಿಕುಮಾರ್ ಎಚ್. ಎನ್. ಅವರು ತೆರವುಗೊಳಿಸಿದರು.
ರಾಮದುರ್ಗದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಡಿವೈಡರ್ಗಳಿಂದಾಗಿ ಲಾರಿ, ಬಸ್, ಇನ್ನೂ ಅನೇಕ ವಾಹನಗಳು ತಿರುವು ಪಡೆಯಲು ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಐದರಿಂದ ಹತ್ತು ಪುಟ ವರೆಗೆ ಡಿವೈಡರ್ ಕತ್ತರಿಸಿ ಎಂದು ಸಮಾಜ ಸೇವಕರು ಹಾಗೂ ಸಂಚಾರಿ ಸತ್ಯ ಪತ್ರಿಕೆ ವರದಿಗಾರರಾದ ಪ್ರಶಾಂತ ಅಂಗಡಿ ಅವರು ರಾಮದುರ್ಗ ಜನಪ್ರೀಯ ಶಾಸಕರು ಹಾಗೂ ಸರಕಾರದ ಮುಖ್ಯ ಸಚೇತಕರು ಅಶೋಕ ಮ. ಪಟ್ಟಣ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರು ಪಿ.ಡಬ್ಲೂ.ಡಿ ಉಪ ವಿಭಾಗದ ಅಧಿಕಾರಿಗಳಾದ ರವಿಕುಮಾರ ಎಚ್ ಎನ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ನಮ್ಮ ಮನವಿಗೆ ಸ್ಪಂದಿಸಿ ಡಿವೈಡರ ಕತ್ತರಿಸುವ ಮೂಲಕ
ವಾಹನ ಸವಾರರ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟಿರುವುದು ನಿಜಕ್ಕೂ ಸಂತೋಷದ ವಿಷಯ.
ವಾಹನ ಸವಾರರಿಗೆ ಅನುಕೂಲ ಮಾಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು



