ಸವದತ್ತಿಯ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಸಭೆಯನ್ನು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಸವದತ್ತಿಯಲ್ಲಿ ಹವ್ಮಿುಕೊಳ್ಳಲಾಗಿತ್ತು.
ಸವದತ್ತಿಯ ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ, ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗೌರವಾನ್ವಿತ ಸದಸ್ಯ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ರವರ ನಿರ್ದೇಶನದಂತೆ, ಬಾಲ್ಯ ವಿವಾಹ ಮುಕ್ತ ಭಾರತಕ್ಕಾಗಿ 100 ದಿನಗಳ ಜಾಗೃತಿ ಅಭಿಯಾನ, ಬಾಲ ಕಾರ್ಮಿಕ ಪದ್ದತಿ ನಿಷೇಧ, ಮತ್ತು ಪೋಕ್ಸೋ ಆ್ಯಕ್ಟ, ಹಾಗೂ ಮಾದಕ ವಸ್ತುಗಳ ವಿರೋದಿ ಕುರಿತು ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ, ಸವದತ್ತಿ ತಾಲೂಕಿನ ಪ್ರತಿಯೊಂದು ಹಳ್ಳಿ-ಗ್ರಾಮಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳು ಹಾಗೂ ಕಾನೂನು ಜಾಗೃತಿ ಅಭಿಯಾನಗಳನ್ನು ಮಾಡಬೇಕೆಂದು ಸೂಚಿಸಿದರು.
ಮುಂದುವರೆದು ದಿನಾಂಕ: 07.03.2026 ರಂದು ಎಲ್ಲ ಪ್ರೌಡ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರು, ಮತ್ತು ಎಲ್ಲಾ ಶೈಕ್ಷಣಿಕ ಮೇಲ್ವಿಚಾರಕರು ಕಡ್ಡಾಯವಾಗಿ ಹಾಜರಿರಬೇಕೆಂದು ತಿಳಿಸಿದರು. ಜೊತೆಗೆ ಸವದತ್ತಿಯ ನ್ಯಾಯವಾದಿಗಳ ಸಂಘದ ಸರ್ವ ಸದಸ್ಯರಿಗೆ ಹಾಗೂ ಸಮಿತಿಯ ಪೆನಲ್ ವಕೀಲರುಗಳಿಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಡೆಯುುವ ಈ ಕಾರ್ಯಕ್ರಮಗಳಲ್ಲಿ ಕಾನೂನು ಉಪನ್ಯಾಸಕರಾಗಿ ಭಾಗವಹಿಸಿ ಎಲ್ಲರಲ್ಲೂ ಕಾನೂನು ಅರಿವು ಮೂಡಿಸುವಂತೆ ಸೂಚಿಸಿದರು.
ಈ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ. ಕೃಷ್ಣಪ್ಪ ಪಮ್ಮಾರ, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ, ಶ್ರೀ. ಎ.ಎ. ಖಾಜಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀ. ಎಮ್.ಎಸ್. ಹುಬ್ಬಳ್ಳಿ, ಉಪಾಧ್ಯಕ್ಷರು, ನ್ಯಾಯವಾದಿಗಳ ಸಂಘ, ಶ್ರೀ. ಎಸ್.ಎಸ್. ಕಾಳಪ್ಪನವರ, ಕಾರ್ಯದರ್ಶಿಗಳು, ನ್ಯಾಯವಾದಿಗಳ ಸಂಘ, ಶ್ರೀಮತಿ. ಎಸ್.ವಾಯ್. ಶಿಬಾರಗಟ್ಟಿ, ಮಹಿಳಾ ಪ್ರತಿನಿಧಿ, ನ್ಯಾಯವಾದಿಗಳು ಹಾಗೂ ಸಮಿತಿಯ ಎಲ್ಲ ಪೆನಲ್ ವಕೀಲರುಗಳು ಮತ್ತು ಇತರರು ಉಪಸ್ಥಿತರಿದ್ದರು.



