ರಾಮದುರ್ಗದ ಎಸ್ಐಎಸ್ ವೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗುಡ್ಡಗಾಡು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಧ್ಯಾಪಕರೊಂದಿಗೆ ಸಂಭ್ರಮ ಹಂಚಿಕೊಂಡರು.
ಗುಡ್ಡಗಾಡು ( ಕ್ರಾಸ್ ಕಂಟ್ರಿ ) ಪಂದ್ಯಾವಳಿಯಲ್ಲಿ ಎಸ್ಐಎಸ್ ವೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ರಾಮದುರ್ಗ :ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಫೆ. 16 ಮತ್ತು 17ರಂದು ನಡೆದ ಪುರುಷರ ಗುಡ್ಡಗಾಡು( ಕ್ರಾಸ್ ಕಂಟ್ರಿ) ಪಂದ್ಯಾವಳಿಯಲ್ಲಿ ಇಲ್ಲಿಯ ಶ್ರೀಮತಿ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ಕಾಲೇಜಿನ ಬಿಎ 2ನೇ ವರ್ಷದ ವಿದ್ಯಾರ್ಥಿ ಸಂಜೀವ ಫಕೀರಪ್ಪ ಮಜ್ಜಗಿ ಈತನು ಬೆಳಗಾವಿ ರಾಣಿ ಚೆನ್ನಮ್ಮ…
