ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಷೇರುದಾರರಿಗೆ ಸಕ್ಕರೆ ವಿತರಿಸುವ ಕಾರ್ಯಕ್ರಮಕ್ಕೆ ಮಹಾದೇವಪ್ಪ ಯಾದವಾಡ ಚಾಲನೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಖಾನಪೇಠದ ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಷೇರುದಾರರಿಗೆ ಸಕ್ಕರೆ ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಗೂ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಚಾಲನೆ ನೀಡಿ ಮಾತನಾಡಿದ ಅವರು.

ಕಾರ್ಖಾನೆ ಆರಂಭದ ಹಂತದಲ್ಲಿ ಸಾಕಷ್ಟು ರೈತರು ಸಾಲಶೂಲ ಮಾಡಿ ಷೇರು ಮಾಡಿದ್ದಾರೆ. ಅವರ ಋಣವನ್ನು ತಿರಿಸಲು ಕಳೆದ 14 ವರ್ಷಗಳಿಂದ ಸಕ್ಕರೆ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಖಾನೆ ನಿರ್ಮಾಣಕ್ಕೆ ಮಾಜಿ ಶಾಸಕ ದಿವಂಗತ ಬಿ.ಬಿ. ಹಿರೇರಡ್ಡಿ ಅವರು ಹಾಗೂ ತಾವು ಸಾಕಷ್ಟು ಶ್ರಮಿಸಿದ್ದು, ಕಾರ್ಖಾನೆ ಆರಂಭದ ಹಂತದಲ್ಲಿ ಸಮಸ್ಯೆ ಉಂಟಾದ ಸಂದರ್ಭದಲ್ಲಿ ತಾವು ಶಾಸಕರಿದ್ದಾಗ ಲೀಜ್ ನೀಡುವ ಮೂಲಕ ಕಾರ್ಖಾನೆ ಪ್ರಾರಂಭಿಸಬೇಕಾಯಿತು. ಅಂದು ಕೈಗೊಂಡ ನಿರ್ಧಾರದಿಂದ ಇಂದು ತಾಲೂಕಿನ ಸುತ್ತಲಿನ ರೈತರ ಅನುಕೂಲವಾಗಿದೆ.

ಆಗಸ್ಟ್ 20 ರ ವರೆಗೆ ರವಿವಾರ ಹೊರತು ಪಡಿಸಿ ಪ್ರತಿ ಶೇರ್‌ಗೆ ರೂ.2400 ದರದಲ್ಲಿ 1 ಕ್ವಿಂಟಾಲ್ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ವಿತರಿಸಲಾಗುವುದು ಎಂದು ಹೇಳಿದರು.

ಕಾರ್ಖಾನೆ ನಿರ್ದೇಶಕರಾದ ಮಲ್ಲಣ್ಣ ಯಾದವಾಡ ಮಾತನಾಡಿ, ತಾಲೂಕಿನ ರೈತರ ಹಿತಕ್ಕಾಗಿ ಆಡಳಿತ ಮಂಡಳಿ ಸದಾ ಶ್ರಮಿಸಲಿದೆ. ಪ್ಯಾರಿ ಸಿಬ್ಬಂದಿ ರೈತರಿಗೆ ಸಹಕಾರ ನೀಡಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ತೊರಗಲ್ಲದ ಶ್ರೀ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಬಿ.ಎಸ್. ಬೆಳವಣಕಿ, ನಿರ್ದೇಶಕಾರ ಬಸವರಾಜ ಹಿರೇರಡ್ಡಿ, ಬಿ.ಎಂ. ತುಪ್ಪದ, ಎಂ.ಎಂ. ಆತಾರ, ಗೋಪಾಲರಡ್ಡಿ ಸಂಶಿ, ಐ.ಎಸ್. ಹರನಟ್ಟಿ, ಈರಣ್ಣ ಕಾಮನ್ನವರ, ಶಶಿಕಲಾ ಸೋಮಗೊಂಡ, ಅನ್ನಪೂರ್ಣಾ ಪಾಟೀಲ, ಶಿವಾನಂದ ಮುಷ್ಠಿಗೇರಿ, ಬಿ.ಎಸ್. ಸಿದರಡ್ಡಿ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖರ, ರವಿ ಗೋರಾಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author