ಅಂತರಾಷ್ಟ್ರೀಯ ಲೋಕ ಅದಾಲತ್ ಹಾಗೂ ವಿವಿಧ ವಿಷಯಗಳ ಕುರಿತು ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗದಲ್ಲಿ ಸಭೆ ಕರೆಯಲಾಗಿತ್ತು ಸಭೆಗೆ ಸಮಯಕ್ಕೆ ಸರಿಯಾಗಿ ಬರದೇ ಇರುವ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಮುಂದಿನ ಸಭೆಯಲ್ಲಿ ಸಮಯಕ್ಕೆ ಸರಿಯಾಗಿ ಬರಬೇಕೆಂದು ಅಧಿಕಾರಿಗಳಿಗೆ ರಾಮದುರ್ಗ ದಿವಾಣಿ ನ್ಯಾಯಾಧೀಶರು ಶ್ರೀಮತಿ ಭಾಗ್ಯಶ್ರೀ ಮಾದರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು
ರಾಮದುರ್ಗ : ರಾಜಿ ಆಗಬಹುದಾಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಪ್ಟೆಂಬರ್ 12 -2026 ರಂದು ರಾಮದುರ್ಗ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ರಾಮದುರ್ಗ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಅಧ್ಯಕ್ಷರು ಶ್ರೀಮತಿ. ಪುಷ್ಪಲತಾ. ಕೆ ಹೇಳಿದರು.
ರಾಮದುರ್ಗ ನ್ಯಾಯಾಲಯದ ಸಭಾಂಗಣದಲ್ಲಿ ದಿನಾಂಕ.07-08-2026 ರಂದು ಶುಕ್ರವಾರ ಆಯೋಜಿಸಿದ್ದ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಪ್ಟೆಂಬರ್ 12 ರಂದು ಅಂತರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು . ಬಾಕಿ ಇರುವ ಪ್ರಕರಣಗಳು ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಆಸ್ತಿ ವಿವಾದ, ಸಿವಿಲ್ ವ್ಯಾಜ್ಯ, ವಿಭಾಗದ ದಾವೆ, ಹಣ ವಸೂಲಾತಿ ದಾವೆ, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳನ್ನು ಸಪ್ಟೆಂಬರ್ 12 ರಂದು ಅಂತರಾಷ್ಟ್ರೀಯ ಲೋಕ ಅದಾಲತ್ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದ ಮೇಲೆ ಇತ್ಯರ್ಥವಾಗದ ಪ್ರಕರಣಗಳ ಮಾಹಿತಿ ಕೋರ್ಟಿಗೆ ತಿಳಿಸಿರುವುದಿಲ್ಲ ಹಾಗೂ ಅಬಕಾರಿ ಇಲಾಖೆಯಲ್ಲಿ ದಂಡವನ್ನು ಕಟ್ಟಿಸಿಕೊಂಡು ಅಪರಾಧಿಗಳನ್ನು ಬಿಡುವ ಕೆಲಸ ಆಗುತ್ತಿದೆ ಅಂತವರನ್ನು ಕೋಟಿಗೆ ಕರೆದುಕೊಂಡು ಬಂದು ಅವರನ್ನು ಸೂಕ್ತ ಕಾನೂನು ಅಡಿಯಲ್ಲಿ ಪ್ರಕರಣ ಇತ್ಯರ್ಥಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಮಾಡಿ ಎಂದು ರಾಮದುರ್ಗ ದಿವಾಣಿ ನ್ಯಾಯಾಧೀಶರು ಶ್ರೀಮತಿ ಭಾಗ್ಯಶ್ರೀ ಮಾದರ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಯಾಂಕ್ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಬ್ಯಾಂಕಿನಲ್ಲಿ ಸಾಲ ಪಡೆದ ಗ್ರಾಹಕರು ಮರುಪಾವತಿ ಮಾಡದೇ ಉಳಿದು ಕೊಂಡ ಸಾಲವನ್ನು ಮರು ಪಾವತಿಗೆ ರಿಯಾಯಿತಿ ದರದಲ್ಲಿ ಹಾಗೂ ಬಡ್ಡಿ ಕಡಿತ ದಂತಹ ಯೋಜನೆ ರೂಪಿಸಿ ಸಾಲ ಮರು ಪಾವತಿ ಮಾಡಲು ಅಂತರಾಷ್ಟ್ರೀಯ ಲೋಕ ಅದಾಲತ್ ದಲ್ಲಿ ಸಾಲಗಾರರಿಗೆ ಅವಕಾಶ ನೀಡಿದೆ ಎಲ್ಲ ಕೇಸ್ ಗಳನ್ನು ಬಗೆಹರಿಸಿಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ನ್ಯಾಯಾಧೀಶರು ತಿಳಿಸಿದರು.
ರಾಮದುರ್ಗ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು (ಪಿಸಿ) ಬದಲಾಯಿಸುವಂತೆ ರಾಮದುರ್ಗ ಸಿಪಿಐ ಅವರಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಈ ವೇಳೆ ಎ ಡಿ ಲಕ್ಕನ್ನವರ ಕಾರ್ಯದರ್ಶಿಗಳು ವಕೀಲರ ಸಂಘ ರಾಮದುರ್ಗ,
ರಾಮದುರ್ಗ ಸಿಪಿಐ (CPI) ವಿನಾಯಕ ಬಡಿಗೇರ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನೂನು ಸೇವಾ ಸಮಿತಿ ಸಿಬ್ಬಂದಿ ಲೋಹಿತ ಪಾಟೀಲ ಅವರನ್ನು ಸಂಪರ್ಕಿಸಿ. 8050644574



