ಲೋಕ ಅದಾಲತ್; 1.53 ಲಕ್ಷ ಪ್ರಕರಣ ಇತ್ಯರ್ಥ: ನ್ಯಾಯಮೂರ್ತಿ ಅಣ್ಣಯ್ಯ ಮಾಹಿತಿ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಂಪತ್ಯ ಜೀವನ ಅಂತ್ಯಗೊಳಿಸಲು ಮುಂದಾಗಿದ್ದ ಎರಡು ಜೋಡಿಗಳು ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ ಮಾಡಿಕೊಂಡು ತಮ್ಮ ದಾಂಪತ್ಯ ಜೀವನ ಮುಂದುವರೆಸುವ ನಿರ್ಧಾರ ಕೈಗೊಂಡರು. ನ್ಯಾಯಾಧೀಶರ ಬುದ್ಧಿಮಾತಿಗೆ ಸಹಮತ ವ್ಯಕ್ತಪಡಿಸಿದ ಜೋಡಿ ಪರಸ್ಪರ ಒಪ್ಪಿ ಮತ್ತೆ ಜೀವನ ಮುಂದುವರೆಸುವ ನಿರ್ಧಾರ ಕೈಗೊಂಡರು. ಮಗಳ ಮುಖ ನೋಡಿ ಒಂದಾಗಿ ಜೀವನ ನಡೆಸಿ ಎಂದು ನ್ಯಾಯಾಧೀಶರು ನೀಡಿದ ಸಲಹೆಗೆ ಒಂದು ಜೋಡಿ ಒಂದಾಯಿತು. ಪೊಲೀಸ್ ನೌಕರಿಯಲ್ಲಿದ್ದ ತಮ್ಮ ಪತಿಯ ಜೊತೆಗೆ ಸಂಘರ್ಷ ಮರೆತು ಮತ್ತೆ ದಾಂಪತ್ಯ…
