WhatsApp Group
Join Now
ಬೀಳಗಿ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಹಾಗೂ ಅದಕ್ಕೆ ಬಳಸಿದ ವಾಹನವನ್ನು ಮಂಗಳವಾರ ಆಹಾರ ಇಲಾಖೆಯ ಶಿರಸ್ತೇದಾರ ಹಾಗೂ ನಿರೀಕ್ಷಕರು ತಾಲ್ಲೂಕಿನ ಸುನಗ ತಾಂಡಾ 1 ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಆಹಾರ ಇಲಾಖೆಯ ಸಂತೋಷ ರಬಕವಿ, ಶಿರಸ್ತೇದಾರರಾದ ಅನ್ವರ ಸನದಿ, ಶಶಿಧರ ಭಜಂತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ.
ಒಟ್ಟು 91 ಚೀಲಗಳಲ್ಲಿ 4005 ಕೆ.ಜಿ ಅಕ್ಕಿ ಇದ್ದವು. ಮುಂದಿನ ಕ್ರಮಕ್ಕಾಗಿ ಬೊಲೆರೋ ವಾಹನ ಹಾಗೂ ಅದರಲ್ಲಿರುವ ಅಕ್ಕಿಯ ಚೀಲಗಳನ್ನು ಪೊಲೀಸ್ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಆಹಾರ ಇಲಾಖೆಯ ನಿರೀಕ್ಷಕ ಸಂತೋಷ ರಬಕವಿ ತಿಳಿಸಿದರು.



