ರಾಮದುರ್ಗ ಅಕ್ರಮ ಗಾಂಜಾ ಸಾಗಾಟ : 180 ಗ್ರಾಂ ಗಾಂಜಾ ವಶ; ವ್ಯಕ್ತಿ ಬಂಧನ

WhatsApp Group Join Now

ರಾಮದುರ್ಗ : ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನವೀನ ಲಕ್ಷ್ಮಣ ಹೆದ್ದೆರಿ ಸಾ: ಕೆರೂರ ತಾಲೂಕು ಬಾದಾಮಿ ವ್ಯಕ್ತಿಯನ್ನು ರಾಮದುರ್ಗ ಪೊಲೀಸರು ಬಂಧಿಸಿ , ಆತನ ಬಳಿ ಇದ್ದ 180 ಗ್ರಾಂ ಗಾಂಜಾ ಒಂದು ಪಲ್ಸರ್ ಬೈಕ್, ಒಂದು ಸಾವಿರ ರೂ. ವನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಇರುವ ಹಾದಿ ಬಸವೇಶ್ವರ ದೇವಸ್ಥಾನ ಹತ್ತಿರದಲ್ಲಿ ಬದಾಮಿ ತಾಲೂಕಿನ ಕೆರೂರ ಗ್ರಾಮದ ನವೀನ್ ಲಕ್ಷ್ಮಣ ಹೆದ್ದೆರಿ ಎಂಬ ವ್ಯಕ್ತಿಯು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಾಲೂಕು ಆಡಳಿತ ,DSP ಚಿದಂಬರಂ ಮಡಿವಾಳ, ಸಿಪಿಐ ವಿನಾಯಕ್ ಬಡಿಗೇರ್ ಮಾರ್ಗದರ್ಶನ ಮೇರೆಗೆ ಸ್ಥಳಕ್ಕೆ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚಾರಣೆ ನಡೆಸಿದಾಗ ಆತನ ಬಳಿ ಇದ್ದ 180 ಗ್ರಾಂ ಗಾಂಜಾ ಒಂದು ಪಲ್ಸರ್ ಬೈಕ್, ಒಂದು ಸಾವಿರ ರೂ. ವನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಪಿಎಸ್ಐ ಸವಿತಾ ಮುನ್ಯಾಳ, ಗ್ರೇಡ್-2 ತಹಸೀಲ್ದಾರ್ ಸಂಜಯ ಖಾತೇದಾರ, ಪೊಲೀಸ್ ಸಿಬ್ಬಂದಿ ASI ಅನಿಲ್ ಮಡಿವಾಳರ, ಹಣಮಂತ ವಾಸನ, ಕೃಷ್ಣಾ ಮಾದರ, ಸುರೇಶ ಕೋತಿನ, ಶ್ರೀಕಾಂತ ಜಾಧವ, ಶೇಷಪ್ಪ ಕಮಕೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

About The Author