ಆಲಮೇಲ ಪಟ್ಟಣದ ಪೋಲಿಸ್ ಠಾಣೆ ಅವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯನ್ನು ಆಲಮೇಲ ಠಾಣೆಯ ಪಿ.ಎಸ್.ಐ ಅರವಿಂದ್ರ ಅಂಗಡಿ ಇವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ಜರಗಿತು.ಪಿ.ಎಸ್.ಐ ಅರವಿಂದ್ರ ಅಂಗಡಿ ಮಾತನಾಡಿ.
ಮುಂಬರುವ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆ ಆಚರಣೆ ಮಾಡಬೇಕು ಯಾವುದೇ ಆಂತರಿಕ ಘಟನೆ ನಡೆಯದಂತೆ ಕಾನೂನು ಪರಿಪಾಲನೆ ಯಿಂದ ಯಾವುದೇ ಹಿಂದೂ ಮುಸ್ಲಿಂ ಹಬ್ಬವನ್ನಾಗಲಿ ಶಾಂತಿಯುತವಾಗಿ ಎಲ್ಲರೂ ಸೋದರಂತೆ ಭಾವನೆಗಳನ್ನು ಇಟ್ಟುಕೊಂಡು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು
ಆಲಮೇಲ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಅಂದಾಜು 36 ಸ್ಥಳಗಳಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆ ಯಿಂದ ಮೊಹರಂ ಹಬ್ಬ ಆಚರಣೆ ನಡೆಯುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಎ.ಎಸ್.ಐ ಎ.ಎಚ್ ಗಿರಿಣಿ ವಡ್ಡರ. ಪೊಲೀಸ್ ಸಿಬ್ಬಂದಿಗಳಾದ ಚಿದಾನಂದ ಸುರುಗಿಹಳ್ಳಿ. ರಾಮನಗೌಡ ಬಿರಾದಾರ. ಗೋಡೆಕರ್ ವಾಗ್ಮೀರಿ ಕ್ಷತ್ರಿ ಸಿದ್ದರಾಯ ಪಾಟೀಲ. ನದಾಫ್ ಹಾಗೂ ವಿವಿಧ ಗ್ರಾಮದ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.



