ಗೋಮಾಳ ಜಮೀನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿರುವ ಗೋಮಾಳ ಜಮೀನು ಸಂರಕ್ಷಣೆ ಮಾಡಲು ತಾಲೂಕಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ತಾಲೂಕಾ ಘಟಕದ ನೇತೃತ್ವದಲ್ಲಿ ರೈತ ಮುಖಂಡರು ತಹಶೀಲಾರ್ಗೆ ಸೋಮವಾರ ಮನವಿ ಸಲ್ಲಿಸಿದರು. ತಾಲೂಕಿನಲ್ಲಿರುವ ಗೋಮಾಳ, ಗೈರಾಣ ಜಮೀನುಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಕೇಳಿ ಬರುತ್ತಿದೆ. ಆದರೆ ಗೋಮಾಳ ಪೂರ್ವಜರ ಜಮೀನುಗಳು ಕಾಲದಿಂದಲೂ ಗೋವುಗಳು ಮೇಯಲು ಸಹಕಾರಿಯಾಗಿದ್ದವು.ಇಂದು ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ನೀಡಿದ್ದು, ಜಾನುವಾರುಗಳ ಮೇಯಲು ಇಲ್ಲದಂತಾಗಿದೆ. ಶೀಘ್ರದಲ್ಲಿ ಬೇರೆ ಉದ್ದೇಶಗಳಿಗೆ…
