ಯುಗಾದಿ ಹಬ್ಬದ ಪ್ರಯುಕ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಿರಸಂಗಿಯ ಕಾಳಿಕಾ ದೇವಿಯ ದರ್ಶನ ಪಡೆದರು
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿಯ ಸುಪ್ರಸಿದ್ಧ ಶಕ್ತಿದೇವತೆ ಶ್ರೀ ಕಾಳಿಕಾದೇವಿಯ ದೇವಸ್ಥಾನಕ್ಕೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸಚಿವರು, ವಿಶ್ವಕರ್ಮ ಸಮಾಜ ವಿಶ್ವವನ್ನೇ ಸೃಷ್ಟಿ ಮಾಡಿದ ಸಮಾಜ. ದೇಶದ ಯಾವುದೇ ಭಾಗಕ್ಕೆ ಹೋದರೂ ಸಮಾಜದ ಬಾಂಧವರು ಮೂಲ ಕಸುಬನ್ನು ಬಿಟ್ಟಿಲ್ಲ ಎಂದು ಹೇಳಿದರು.ಸಾಫ್ಟ್ವೇರ್ ಯುಗದಲ್ಲೂ ವಿಶ್ವಕರ್ಮರ ಕಲೆಯನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದರು. ಸಾಮಾಜಿಕ ಬದ್ಧತೆ ಸಾಮಾಜಿಕ ಕಳಕಳಿ ಹೊಂದುವುದು…
