ಸಾಲಹಳ್ಳಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳ ಮೇಲೆ ಶಿಕ್ಷಕನಿಂದ ಮನಸೊಇಚ್ಚೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿರುವ
ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.
ಸಾಲಹಳ್ಳಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ
ಶಿಕ್ಷಕನಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ವಸತಿ ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ 12ಕ್ಕೂ ಹೆಚ್ಚು
ಮಕ್ಕಳ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ.

ಮೋರಾರ್ಜಿ ದೆಸಾಯಿ ವಸತಿ ಶಾಲೆಯ ಹಿಂದಿ ಬೋಧಿಸುವ ಸಹ
ಶಿಕ್ಷಕ ನಿಂಗನಗೌಡ್ರ ಹೊಸಗೌಡ್ರ ಅವರು ಹಲ್ಲೆ ಮಾಡಿದ್ದಾರೆ ಎಂಬ
ಆರೋಪ ವ್ಯಕ್ತವಾಗಿದೆ. ಶಿಕ್ಷಕ ಹಲ್ಲೆ ಮಾಡಿರುವ ಕುರಿತು ಅಳಲು
ತೋಡಿಕೊಂಡ ವಿದ್ಯಾರ್ಥಿಗಳು, ನಾವು ತರಗತಿಯಿಂದ ಹೊರಗೆ
ಬಂದಾಗ, ಹಿಂದಿ ಮೇಸ್ಟು ತರಗತಿಗೆ ಬಂದರು. ಈ ವೇಳೆ ನಾವು
ಒಳಗೆ ಹೋಗಿ ಓದುತ್ತಾ ಕುಳಿತರೂ ಸುಮ್ಮನಿರದೇ ಕೋಲು
ತೆಗೆದುಕೊಂಡು ಕೈ, ಕಾಲು, ತಲೆ, ಬೆನ್ನು, ತೊಡೆ ಭಾಗ ಸೇರಿದಂತೆಬ ವಿವಿಧೆಡೆ ಗಾಯಗಳಾಗುವಂತೆ ತೀವ್ರವಾಗಿ ಥಳಿಸಿದ್ದಾರೆ ಎಂದು
ಮಕ್ಕಳು ಗಾಯಗಳನ್ನು ತೋರಿಸಿ ಅಳಲು ತೋಡಿಕೊಂಡಿದ್ದಾರೆ.
ಇನ್ನು ಮಕ್ಕಳ ಮೇಲೆ ಹಲ್ಲೆ ಮಾಡಿದ ಶಿಕ್ಷಕನ ವಿರುದ್ಧ ಕ್ರಮಕ್ಕೆ
ಆಗ್ರಹಿಸಿ 12 ಮಕ್ಕಳ ಪೋಷಕರು ಮೇಲಾಧಿಕಾರಿಗಳಿಗೆ ದೂರು
ನೀಡಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗೆ ದೂರು ನೀಡಿದ ಪೋಷಕರು
ಹಾಗೂ ವಿದ್ಯಾರ್ಥಿಗಳು. ಇನ್ನು ಘಟನೆ ನಡೆದ ಬೆನ್ನಲ್ಲಿಯೇ ಶಿಕ್ಷಕ
ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದಾನೆ. ಜೊತೆಗೆ,
ಮಕ್ಕಳು ಈ ಶಿಕ್ಷಕರು ಹಾಸ್ಟೆಲ್‌ನಲ್ಲಿ ಪುನಃ ಥಳಿಸುವ ಸಾಧ್ಯತೆಯಿದ್ದು,
ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.
