Prashanth Angadi

ಬಳ್ಳಾರಿ ಗರ್ಭಿಣಿ ಮಹಿಳೆಯರು ಸೂಕ್ತ ಚಿಕಿತ್ಸೆ ಪಡೆಯಬೇಕು: ಡಿಹೆಚ್‌ಓ ಡಾ.ವೈ.ರಮೇಶ್‌ಬಾಬು

ಬಳ್ಳಾರಿ ನಗರದ ಬಂಡಿಹಟ್ಟಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ಗರ್ಭಿಣಿ ಮನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಸೋಮವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.ಗರ್ಭಿಣಿಯ ಆರೈಕೆಯನ್ನು ಕುಟುಂಬದ ಸದಸ್ಯರು ಅದರಲ್ಲೂ ಗಂಡನ ಮನೆಯಲ್ಲಿ ಮನೆಯ ಮಗಳಂತೆ ಕಾಳಜಿವಹಿಸಬೇಕು ಎಂದು ಹೇಳಿದರು.ರಕ್ತದಲ್ಲಿ ಕಬ್ಬಿಣಾಂಶ 12 ಹೆಚ್‌ಬಿ ಗಿಂತ ಹೆಚ್ಚು ಇರುವಂತೆ ಮುತವರ್ಜಿವಹಿಸಬೇಕು. ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಲು ಆದ್ಯತೆ ನೀಡಬೇಕು. ಹೆರಿಗೆಯಾದ 45 ದಿನಗಳವರೆಗೆ ತಾಯಿ-ತಂದೆ, ಗಂಡ ಹಾಗೂ ಮನೆಯ ಸದಸ್ಯರು ಬಾಣಂತಿಯ…

Read More

ಜಿಲ್ಲಾಡಳಿತದಿಂದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತ್ಯೋತ್ಸವ

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿ ಅವರು ಮಾತನಾಡಿದರು.ಹನ್ನೆರಡನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ನುಲಿಯ ಚಂದಯ್ಯನವರು ಮಹಾನ್ ಕಾಯಕಯೋಗಿ ಆಗಿದ್ದರು. ಅವರು ತಮ್ಮ ವಚನಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಸಾರಿ, ಜನ ಸಾಮಾನ್ಯರಲ್ಲಿ ಭಾವೈಕ್ಯತೆಯ…

Read More

ಮಿಷನ್ ವಿದ್ಯಾಕಾಶಿಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ ಮುಖ್ಯಶಿಕ್ಷಕರ ಮತ್ತು ಪಾಲಕರ ಪಾತ್ರ ಮುಖ್ಯವಾಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟ. ಕಳೆದ ಸಾಲಿನ ಪರೀಕ್ಷಾ ಫಲಿತಾಂಶ ಕಡಿಮೆ ಆಗಿದ್ದು, ಶೇ 74.85 ರಷ್ಟು ಫಲಿತಾಂಶ ಬಂದಿದೆ. ಇದನ್ನು ಸುಧಾರಿಸಿ ಶೇ 100 ರಷ್ಟು ಮಾಡುವಲ್ಲಿ ವಿದ್ಯಾರ್ಥಿಗಳ ಪಾಲಕರ ಮತ್ತು ಶಾಲಾ ಮುಖ್ಯಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜೆ.ಎಸ್.ಎಸ್. ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ…

Read More

ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸಿದರು.

ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನುಲಿಯ ಚಂದಯ್ಯನವರು, ಕಾಯಕ ಶರಣರಾದ ಬಸವಣ್ಣನವರ ಜೊತೆ ಸೇರಿ ಸಮಜದಲ್ಲಿರುವಂತಹವರನ್ನು ತಮ್ಮ ತಮ್ಮ ಕಸುಬುಗಳ ಮೂಲಕ ಎಲ್ಲರಂತೆ ದುಡಿದು ಜೀವನ ನಡೆಸಿಕೊಂಡು ಬದುಕುವಂತೆ ಸಮಾಜಕ್ಕೆ ಪ್ರೇರಣೆ ನೀಡಿದರು. ಚಂದ್ಯಯನವರು ಮನೆಯಲ್ಲಿ ಕೆರೆಯ…

Read More

ಬೆಟಗೇರಿ:ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆ ಮೂರ್ತಿಗಳ ಪಲ್ಲಕ್ಕಿ ಉತ್ಸವ ನಡೆಯಿತು.

ವಿಜೃಂಭನೆಯಿಂದ ನಡೆದ ಬೆಟಗೇರಿ ವೀರಭದ್ರೇಶ್ವರ ಜಾತ್ರಾಮಹೋತ್ಸವಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಗಣ್ಯರಿಗೆ ಸತ್ಕಾರಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭನೆಯಿಂದ ನಡೆಯಿತು.ಬೆಳಗ್ಗೆ 6 ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಜರುಗಿತು. ಮುಂಜಾನೆ ೮ಗಂಟೆಗೆ ಆರತಿ, ಕರಡಿ ಮಜಲು, ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ…

Read More

2.89 ಕೋಟಿ ರೂಪಾಯಿ ಲಾಭಗಳಿಸಿದ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್

ಬೆಂಗಳೂರು, ಸಹಕಾರಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬೆಂಗಳೂರಿನ ಬಸವನಗುಡಿಯ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್, ಈ ಬಾರಿಯೂ ಲಾಭದತ್ತ ಸಾಗಿದ್ದು, ಒಟ್ಟಾರೆ 2.89 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್‌ನ 28 ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಧ್ವಾರಕನಾಥ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕಳೆದ ವರ್ಷ ಬ್ಯಾಂಕ್ 2.85 ಕೋಟಿ ರೂಪಾಯಿ ಲಾಭಗಳಿಸಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿಯುಸಿ ಉತ್ತಮ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ…

Read More

ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಿ ಪತ್ರ ಚಳುವಳಿಗೆ ಸಚಿವ ತಂಗಡಗಿ ಚಾಲನೆ

ಕೊಪ್ಪಳ: ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋತ್ ಅವರು ಪಕ್ಷಪಾತ ಮಾಡುತ್ತಿದ್ದು, ಅವರು ತಮ್ಮ ಪೂರ್ವಾಶ್ರಮದ ಪಕ್ಷ ಮತ್ತು ತಮಗೆ ಅಂತಹ ಹುದ್ದೆ ಕೊಟ್ಟ ಬಿಜೆಪಿ ಪಕ್ಷದ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ ಆದ್ದರಿಂದ ಕೂಡಲೇ ಅವರನ್ನು ವಾಪಾಸ್ ಕರೆಸಿಕೊಳ್ಳಿ ಎಂಬ ಪತ್ರ ಚಳುವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಚಾಲನೆ ನೀಡಿದರು.ನಗರದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ನಂತರ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ಆರಂಭಿಸಿರುವ ಸದರಿ ಪತ್ರ ಚಳುವಳಿಗೆ ಚಾಲನೆ…

Read More

ಬೆಟಗೇರಿ:ಎರಡು ಕರುಗಳಿಗೆ ಜನ್ಮ ನೀಡಿದ ಹಸು ಮತ್ತು ಕರುಗಳ ಜೋತೆಗೆ ಬಸವರಾಜ ಶಿವಲಿಂಗಪ್ಪ ಮುಧೋಳ

ಅವಳಿ-ಜವಳಿ ಕರುಗಳಿಗೆ ಜನ್ಮ ನೀಡಿದ ಆಕಳು.!ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರೈತ ಶಿವಲಿಂಗಪ್ಪ ಕಲ್ಲಪ್ಪ ಮುಧೋಳ ಅವರು ಸಾಕಿದ ಎಚ್‌ಎಫ್ ತಳಿಯ ಆಕಳು ಇತ್ತೀಚೆಗೆ ಎರಡು(ಅವಳಿ-ಜವಳಿ)ಕರುಗಳಿಗೆ ಜನ್ಮ ನೀಡಿ ನೋಡುಗರಲ್ಲಿ ಆಶ್ಚರ್ಯ ಮೂಡಿಸಿದೆ. ಎರಡು ಕರುಗಳು ಆರೋಗ್ಯವಾಗಿವೆ.

Read More

ಬೆಟಗೇರಿ ವೀರಭದ್ರೇಶ್ವರ ದೇವರ ಜಾತ್ರಾಮಹೋತ್ಸವ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಹಾಗೂ ಶ್ರಾವಣ ಮಾಸದ ಪ್ರಯುಕ್ತ ಆ.19 ರಂದು ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯಲಿದೆ.ಆ.19ರಂದು ಬೆಳಗ್ಗೆ 6ಗಂಟೆಗೆ ಸ್ಥಳೀಯ ವೀರಭದ್ರೇಶ್ವರ ದೇವಾಲಯದ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಮುಂಜಾನೆ 8ಗಂಟೆಗೆ ಆರತಿ, ಕರಡಿ ಮಜಲು, ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆಯ ಮೂರ್ತಿಗಳ ಪಲ್ಲಕ್ಕಿ ಉತ್ಸವ, ಪುರಜನರಿಂದ…

Read More

ರಾಮದುರ್ಗ ಪಟ್ಟಣದಲ್ಲಿ ಅಡುಗೆ ಅನಿಲಕ್ಕೆ ಪರದಾಟ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಬದಾಮಿ ರಸ್ತೆಯಲ್ಲಿ ಇರುವ ರೇಣುಕಾ ಟೆಂಡರ್ಸ್ (HP GAS) ಒಂದೇ ಗ್ಯಾಸ್‌ ಏಜೆನ್ಸಿಯಿಂದ ಪೂರೈಕೆ; ಒಂದು ತಿಂಗಳಿಂದ ಸಮಸ್ಯೆ ಎಚ್ ಪಿ ಗ್ಯಾಸ್‌ ಏಜೆನ್ಸಿ ಮುಂದೆ ಸಿಲಿಂಡರ್ ಪಡೆಯಲು ತಾಸು ಗಂಟಲೆ ನಿಂತಿರುವ ಜನರು ಅಡುಗೆ ಅನಿಲದಂತಹ ದಿನಬಳಕೆ ವಸ್ತುಗಳಿಗೂ ಪರದಾಡುವಂತಹ ಪರಿಸ್ಥಿತಿ ಬಂದಿದೆ.20 ದಿನಗಳಿಂದ ಬುಕಿಂಗ್ ಮಾಡಿದರು ಕೂಡ ಜನರಿಗೆ ಸಿಗದ ಸಿಲಿಂಡರ್.ಈ ನಡುವೆ ಕಳೆದ ಒಂದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಸಿಗದೆ ಜನ ಪರದಾಡುವಂತಾಗಿದೆ.

Read More