ಈ ಸಲ ಕಪ್ ನಮ್ದು….! ಇತಿಹಾಸ ಸೃಷ್ಟಿಸಿದ ಆರ್ಸಿಬಿ ಮಹಿಳಾ ತಂಡ
ಈ ಕ್ಷಣ… ಇದೊಂದು ಕ್ಷಣಕ್ಕಾಗಿ ಆರ್ಸಿಬಿ (RCB) ಅಭಿಮಾನಿಗಳು ಕಾಯ್ದಿದ್ದು ಬರೋಬ್ಬರಿ 17 ವರ್ಷಗಳು. ಐಪಿಎಲ್ (IPL) ಶುರುವಾಗಿ ಇಲ್ಲಿಯವರೆಗೆ 16 ಆವೃತ್ತಿಗಳು ಕಳೆದಿವೆ. ಪ್ರತಿ ಆವೃತ್ತಿಯಲ್ಲೂ ಬೆಟ್ಟದಷ್ಟು ನಿರೀಕ್ಷೆ ಇಟ್ಟು ಕಾಯುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು, ಸೋಲಿನ ನಿರಾಸೆ. ಕಳೆದ 16 ಆವೃತ್ತಿಗಳಲ್ಲಿ ಆರ್ಸಿಬಿ 4 ಬಾರಿ ಫೈನಲ್ಗೇರಿತ್ತಾದರೂ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರತಿ ಫೈನಲ್ ಪಂದ್ಯದಲ್ಲೂ ಆರ್ಸಿಬಿ ಗೆಲುವಿಗಾಗಿ ಮುಕ್ಕೋಟಿ ದೇವರ ಬಳಿ ಮೊರೆ ಇಡುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಕೊನೆಗೆ ಎದುರಾಗುತ್ತಿದ್ದಿದ್ದು…
