ರಾಷ್ಟ್ರಪಕ್ಷಿ ನವಿಲನ್ನು ಹಲಾಲ್ ಮಾಡಿ ಮಾಂಸ ಮಾರುತ್ತಿದ್ದ ಖದೀಮ ಅರೆಸ್ಟ್!
ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ, ಹಲಾಲ್ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಭೀಕರ ದಂಧೆಯೊಂದನ್ನು ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ! ಈ ಅಮಾನವೀಯ ಕೃತ್ಯ ಎಸಗುತ್ತಿದ್ದ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿ, ಆತನ ಬಳಿಯಿದ್ದ ನವಿಲಿನ ಮಾಂಸ ಹಾಗೂ ಮೊಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಬೈಯಪ್ಪನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಈ ಕರಾಳ ದಂಧೆ ರಾಜಾರೋಷವಾಗಿ ನಡೆಯುತ್ತಿತ್ತು. ಸಾದೀಕ್ ಪಾಷ ಬಂಧಿತ ಆರೋಪಿ. ಈತ ಕಾಡಿನಿಂದ ನವಿಲುಗಳನ್ನು ಸೆರೆಹಿಡಿದು ತಂದು, ಅವುಗಳನ್ನು ಹಲಾಲ್…
