ಹಬ್ಬ-ಹರಿದಿನಗಳು ನಾಡಿನ ಸಂಸ್ಕೃತಿ ಪ್ರತೀಕವಾಗಿವೆ: ಕಸ್ತೂರೆವ್ವ ಹಿರೇಮಠ
ಬೆಟಗೇರಿ: ಮನುಷ್ಯನು ತಮಗೆ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಾಯ, ಸಹಕಾರ ನೀಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಶರಣೆ ಕಸ್ತೂರೆವ್ವ ಸಂಗಯ್ಯ ಹಿರೇಮಠ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸ.೧ರಂದು ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಹಬ್ಬ-ಹರಿದಿನಗಳು, ಜಾತ್ರಾಮಹೋತ್ಸವ, ನಾಡಿನ ಸಂಸ್ಕೃತಿ, ಸಂಪ್ರದಾಯದ ಪ್ರತೀಕವಾಗಿವೆ. ಸ್ಥಳೀಯರು ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಾಯ, ಸಹಕಾರವನ್ನು ಈ ವೇಳೆ ಶ್ಲಾಘಿಸಿದರು.ಸಂಗಯ್ಯ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಮಹಾಂತೇಶ ಸಿದ್ನಾಳ…
