ಪೋಷಣ ಅಭಿಯಾನ ಕಾರ್ಯಕ್ರಮದಡಿ ಪೋಷಣ ಮಾಸ ಆಚರಣೆ

WhatsApp Group Join Now

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾ ಚೇತನ ಶಾಲೆಯಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮದಡಿ ಪೋಷಣ ಮಾಸ ಆಚರಣೆ ರಾಮದುರ್ಗ ಒಂದನೇ ವಲಯದ ಕಾರ್ಯಕ್ರಮವನ್ನು ಪುರಸಭೆ ಮಾಜಿ ಅಧ್ಯಕ್ಷ ಶಂಕ್ರಪ್ಪ ಬೆನ್ನೂರ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಆರ್ ಮಂಜುಳಾ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ ಮಾಸ ಆಚರಣೆ ಮಾಡುತ್ತಿದ್ದು ಗರ್ಭಿಣಿಯವರಿಗೆ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸಿದರು.

ಆರೋಗ್ಯ ಇಲಾಖೆಯ ಪಿ ಎಚ್ ಸಿ ಓ.
ವಿ ಎಸ್ ದಸಮನಿ ಮಾತನಾಡಿ ಗರ್ಭಿಣಿಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ರಕ್ತಹೀನತೆಯನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗರ್ಭಿಣಿಯರ ಸೀಮಂತ, 6 ತಿಂಗಳ ತುಂಬಿದ ಮಕ್ಕಳಿಗೆ ಅನ್ನ ಪ್ರಾಸನ,ಮಕ್ಕಳ ಹುಟ್ಟುಹಬ್ಬ, ವಿವಿಧ ರೀತಿಯ ಪೌಷ್ಠಿಕ ಆಹಾರ ಪ್ರದರ್ಶನ ಕಾರ್ಯಕ್ರಮ ಜರಗಿತ್ತು
ಎಸ್ ಎಸ್ ಶಿರಸಂಗಿ ನಿರೋಪಿಸಿದರು. ಮುಕ್ತಾ ಜಂಬಾಳೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಕಟ್ಟಿಮನಿ,
ಪ್ರಹ್ಲಾದ ಬಡಿಗೇರ್, ಸಂಗೀತಾ ರಾಯಬಾಗ್, ರೇಷ್ಮಾ ಮುದುಕವಿ, , ಮೌಲಾನ್ ಶಾಲೆಯ ಮುಖ್ಯಪಾದ್ಯಯರು ಎಸ್ ಎಸ್ ಹುಡೇದ ಮನಿ, ಹಾಗೂ ಗರ್ಭಿಣಿಯರು ತಾಯಂದಿರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

About The Author