2024-25 ನೇ ಸಾಲಿನ ಸರ್ಕಾರದ ಬೆಂಬಲಬೆಲೆ ಯೋಜನೆಯಡಿಯಲ್ಲಿ ಹೆಸರುಕಾಳು ಖರೀದಿ ಮತ್ತು ಸೂರ್ಯಕಾಂತಿ ಖರೀದಿಗೆ ಮುಖ್ಯ ಸಚೇತಕರು ಅಶೋಕ ಮ. ಪಟ್ಟಣ ಜ್ಯೋತಿ ಬೆಳಗಿಸೋದರ ಮೂಲಕ ಚಾಲನೆ ನೀಡಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಶುಕ್ರವಾರ ಜರಗಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ, ಬೆಂಗಳೂರು ಹೆಸರುಕಾಳು ಖರೀದಿ ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ನಿ, ಹುಬ್ಬಳ್ಳಿ ಸೂರ್ಯಕಾಂತಿ ಖರೀದಿ ಇವರ ಸಹಯೋಗದೊಂದಿಗೆ ರಾಮದುರ್ಗ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿ, ರಾಮದುರ್ಗ ಇದರಿಂದ
ಸನ್ 2024-25 ನೇ ಸಾಲಿನ ಸರ್ಕಾರದ ಬೆಂಬಲಬೆಲೆ ಯೋಜನೆಯಡಿಯಲ್ಲಿ ಹೆಸರು ಕಾಳು ಖರೀದಿ ಮತ್ತು ಸೂರ್ಯಕಾಂತಿ ಖರೀದಿಗೆ ಜನಪ್ರಿಯ ಶಾಸಕರು ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಮ ಪಟ್ಟಣ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು
ಸರ್ಕಾರದ ಬೆಂಬಲಬೆಲೆ ಯೋಜನೆಯಡಿಯಲ್ಲಿ ಹೆಸರು ಕಾಳು ಖರೀದಿ ಮತ್ತು ಸೂರ್ಯಕಾಂತಿ ಕರಿದಿ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಪಾಂಪ್ಲೆಟ್ ಮುಖಾಂತರ ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಆದಷ್ಟು ರೈತರಿಗೆ ಅನುಕೂಲ ಆಗುವಂತೆ ಜಾಗೃತಿ ಮೂಡಿಸಬೇಕು. ರೈತರು ಆದಷ್ಟು ಸಾವಯುವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.

ಹೆಸರುಕಾಳು ಪ್ರತಿ ಕ್ವಿಂಟಲ್ ದರ ರೂ, 8682.00 ಒಬ್ಬ ರೈತರಿಂದ ಗರಿಷ್ಟ 10 ಕ್ವಿಂಟಲ್ ಪ್ರತಿ ಎಕರೆಗೆ 2 ಕ್ವಿಂಟಲ್ ಮಾತ್ರ,

ಸೂರ್ಯಕಾಂತಿ ಪ್ರತಿ ಕ್ವಿಂಟಲ್ ದರ ರೂ, 7280.00 ಒಬ್ಬ ರೈತರಿಂದ ಗರಿಷ್ಟ 15 ಕ್ವಿಂಟಲ್ ಪ್ರತಿ ಎಕರೆಗೆ 3 ಕ್ವಿಂಟಲ್ ಮಾತ್ರ ಖರೀದಿಸಲಾಗುವುದು ಈಗಾಗಲೇ 125 ರೈತರು ಹೆಸರುಕಾಳಿಗೆ ಹೆಸರು ನೊಂದಾಯಿಸಿದ್ದಾರೆ 225 ರೈತರು ಸೂರ್ಯಕಾಂತಿಗೆ ಹೆಸರು
ನೊಂದಾಯಿಸಿದ್ದಾರೆ

ನಿರೂಪನೆ ತುಳಜಪ್ಪ ನಡಗಡಿ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯದರ್ಶಿ,

ಈ ಸಂದರ್ಭದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್. ಉಪಾಧ್ಯಕ್ಷರು ಪಿ.ಎಮ್.ಜಗತಾಪ್, ಕುಬೇರಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಎಸ್.ಜಿ.ಮಠ, ಸಹಾಯಕ ಕೃಷಿ ನಿರ್ದೇಶಕರು ಎಸ್ಎಫ್ ಬೆಳವಟಗಿ, ಪರಪ್ಪ ಜಂಗವಾಡ, ಚೆನ್ನಪ್ಪ ಮುದೇನೂರ, ಬಸವರಾಜ ಧರ್ಮನ್ನವರ, ರಮೇಶ್ ಜಾಲಿಹಾಳ, ಈರಪ್ಪ ಮುದೇನೂರ, ಶಿವಾನಂದ ಚಿಕ್ಕೋಡಿ, ಶಿವಣ್ಣ ಅಂಗಡಿ, ರಾಜನ್ನಾ ಗಂಗಣ್ಣವರ್, ಅಶೋಕ ಶಿರೋಳ ಪಾಲ್ಗೊಂಡಿದ್ದರು.

About The Author