ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ


WhatsApp Group
Join Now
ಸವದತ್ತಿ, ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 13-02-2025 ರಂದು ಸರ್ಕಾರಿ ಆದರ್ಶ ಮಹಾವಿಧ್ಯಾಲಯ ಯಡ್ರಾಂವಿಯಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ. ಶಶಿಧರ ಎಮ್. ಗೌಡ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಈ ಕಾಯ್ದೆಯು ಮಕ್ಕಳನ್ನು ಎಲ್ಲ ರೀತಿಯ ಉಧ್ಯೋಗಗಳಲ್ಲಿ ತೊಡಗಿಸುವುದನ್ನು ನಿಷೇಧಿಸುತ್ತದೆ. ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಸುವುದನ್ನು ನಿಷೇಧಿಸುತ್ತದೆ. ಇಂತದೇ ವಿಷಯದೊಂದಿಗೆ ಈ ಕಾಯ್ದೆ ಸಂಬಂಧ ಹೊಂದಿರುತ್ತದೆ ಹಾಗೂ ಪ್ರತಿಯೊಬ್ಬ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳು ಅವಶ್ಯಕ ಹಾಗೂ ಕಾನೂನಿನ ಅರಿವು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ಉಪನ್ಯಾಸ ಭಾಷಣ ಮಾಡಿದ ನ್ಯಾಯವಾದಿಗಳಾದ ಶ್ರೀ. ಎ.ಎಮ್. ಭಾಗೋಜಿಕೊಪ್ಪ, ರವರು ಮಾತನಾಡಿ ಈ ಕಾಯ್ದೆಯು ದೇಶವ್ಯಾಪಿಯಾಗಿದೆ. ಹದಿಹರೆಯದವರು ಎಂದರೆ ಯಾವುದೇ ವ್ಯಕ್ತಿ 14 ವರ್ಷ ಪೂರ್ಣಗೊಂಡಿರುವ ಮತ್ತು 18 ವರ್ಷ ಪೂರ್ಣಗೊಳಿಸದವರು. ಯಾವುದೇ ಮಗುವನ್ನು ಯಾವುದೇ ಉದ್ಯೋಗಕ್ಕೆ ನೇಮಿಸಿಕೊಳ್ಳಬಾರದು ಅಥವಾ ಯಾವುದೇ ಕೆಲಸ ಅಥವಾ ಪ್ರಕ್ರಿಯೆಯಲ್ಲಿ ದುಡಿಯಲು ಅನುಮತಿ ನೀಡಬಾರದು. ಎಂದು ಹೇಳಿದರು.
ಅತಿಥಿ ಭಾಷಣ ಮಾಡಿದ ಕಾರ್ಮಿಕ ನೀರೀಕ್ಷರಾದ ಶ್ರೀ. ಮಹೇಶ ಬಾಗೋಜಿ, ರವರು ಮಾತನಾಡಿ ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಸಿರುವುದು ಯಾರಿಗಾದರೂ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ತಿಳಿಸುವಂತೆ ತಿಳಿಸಿದರು ಅಲ್ಲದೇ ಮಾಹಿತಿ ನೀಡಿದವರ ಹೆಸರು ಹಾಗೂ ವಿಳಾಸವನ್ನು ಯಾರೂ ಕೇಳಿವುದಿಲ್ಲ ಅದು ಗೌಪ್ಯವಾಗಿರುತ್ತದೆ. ಹೀಗಾಗಿ ಯಾರು ಭಯಪಡದೇ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸಲು ಕೈಜೊಡಿಸಿ ಎಂದು ಹೇಳಿದರು.
ಅಧ್ಯಕ್ಷತೆ ಭಾಷಣ ಮಾಡಿದ ಶಾಲೆಯ ಪ್ರಾಚಾರ್ಯರಾದ ಶ್ರೀ. ಆರ್.ಎಫ್. ಮಾಗಿ, ರವರು ಮಾತನಾಡಿ ಈ ಕಾನೂನು ಅರಿವು ನೆರವು ಕಾರ್ಯಕ್ರಮದಿಂದ ನೆರದಿರುವ ಎಲ್ಲರಿಗೂ ಸಾಮಾನ್ಯ ಕಾನೂನುಗಳ ಬಗೆಗೆ ತಿಳುವಳಿಕೆ ಮೂಡುತ್ತದೆ. ಆದ್ದರಿಂದ ಇಂತಹ ಕಾನೂನು ಅರಿವು ನೆರವು ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳಾದ ಎಸ್.ಎಸ್. ಕಾಳಪ್ಪನವರ, ಎ.ಡಿ.ಏಣಗಿ, ಎಸ್.ವಾಯ್. ಶಿಬಾರಗಟ್ಟಿ, ಹಾಗೂ ಶಾಲೆಯ ಎಸ್.ಡಿ.ಎಮ್.ಸಿ ಪದಾಧಿಕಾರಿಗಳು, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರವೀಣಕುಮಾರ ಬನಕಾರ ಸ್ವಾಗತಿಸಿದರು. ಐ.ಬಿ. ನೇಸರಗಿ ನಿರೂಪಿಸಿದರು, ಎಮ್. ಆರ್. ಮುದ್ದನ್ನವರ, ವಂದಿಸಿದರು.