ಏಕತೆಯ ಮತ್ತು ಸೌಹಾರ್ದತೆಯ ಪ್ರತೀಕ: ಸವದತ್ತಿ ಅಡ್ವೊಕೇಟ್ಸ್ ಕ್ರಿಕೆಟ್ ಕಪ್ 2026

WhatsApp Group Join Now

77ನೇ ಗಣರಾಜ್ಯೋತ್ಸವದ ಪ್ರಯುಕ್ತವಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ವಕೀಲರ ಸಂಘ, ಸವದತ್ತಿ ಇವರು ದಿನಾಂಕ 24-01-2026 ಮತ್ತು 25-01-2026 ರಂದು ಎರಡು ದಿನಗಳ ಕಾಲ ಆಯೋಜಿಸಿದ್ದ ಸವದತ್ತಿ ಅಡ್ವೊಕೇಟ್ಸ ಕ್ರಿಕೆಟ್ ಕಪ್ 2026 ಟೂರ್ನಮೆಂಟ್ ನಲ್ಲಿ ವಿಶೇಷ ತಂಡಗಳನ್ನು ಆಹ್ವಾನಿಸಲಾಗಿತ್ತು ಅದರಲ್ಲಿ ಮುಖ್ಯವಾಗಿ ಸವದತ್ತಿಯ ತಾಲೂಕೀನ ತಹಶೀಲ್ದಾರ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪುರಸಭೆ (ಟಿ ಎಂ ಸಿ) ಸವದತ್ತಿ , ವಕೀಲರ ಸಂಘ ಸವದತ್ತಿ, ನ್ಯಾಯಾಂಗ ಇಲಾಖೆಯ ಎಲ್ಲ ತಂಡಗಳು ಭಾಗವಹಿಸಿದ್ದವು. ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ ಯವರು ಕೊಡುಗೆ ನೀಡಿದ ಪ್ರಥಮ ಬಹುಮಾನದ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ನ್ಯಾಯಾಂಗ ಇಲಾಖೆ ಸವದತ್ತಿ ಕ್ರಿಕೆಟ್ ತಂಡ ಪಡೆದುಕೊಂಡಿತು, ಮತ್ತು ಉಪಾಧ್ಯಕ್ಷರಾದ ಶ್ರೀ ಎಂ ಎಸ್ ಹುಬ್ಬಳ್ಳಿ ವಕೀಲರು ನೀಡಿದ ದ್ವಿತೀಯ ಬಹುಮಾನದ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ಪುರಸಭೆ (ಟಿಎಂಸಿ) ಕ್ರಿಕೆಟ್ ತಂಡ ಸವದತ್ತಿ ಪಡೆದುಕೊಂಡಿತು, ಅದೆ ರೀತಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುರೇಶ ಎಸ್ ಕಾಳಪ್ಪನವರ ಕೊಡುಗೆ ನೀಡಿದ ತೃತೀಯ ಬಹುಮಾನ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಅರಣ್ಯ ಇಲಾಖೆ ಕ್ರಿಕೆಟ್ ತಂಡ ಸವದತ್ತಿ ಇವರು ಪಡೆದುಕೊಂಡರು.

  ಮತ್ತು ವಿವಿಧ ಆಕರ್ಷಕ ಬಹುಮಾನಗಳನ್ನು  ವಕೀಲರಾದ ಶ್ರೀ ಬಿ ಎಂ ಎಲಿಗಾರ,  ಶ್ರೀ ಎನ್ ಬಿ ಭೋವಿ, ಶ್ರೀ ಆರ್ ವಿ ಹುಂಬಿ, ಶ್ರೀ ಎಸ್ ಎಚ್ ಜಾಲಿಕೊಪ್ಪ, ಶ್ರೀ ಎ ಆರ್ ಜಕಾತಿ , ಶ್ರೀ ಆರ್ ಎಂ ನಿಡವನಿ, ಶ್ರೀ ಎ ಎಚ್ ನದಾಫ್, ಶ್ರೀ ವಾಯ್ ಎನ್ ಪಾಸ್ತೆ, ಶ್ರೀ ವಿ ವಿ ಅಂಗಡಿ ವಕೀಲರು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದರು.

ಟೂರ್ನಮೆಂಟ್ ನಲ್ಲಿ ಅತ್ಯಂತ ಆಕರ್ಷಣೀಯವಾಗಿ ನ್ಯಾಯಾಂಗ ಇಲಾಖೆ ಕ್ರಿಕೆಟ್ ತಂಡದ ಪರವಾಗಿ ಗೌರವಾನ್ವಿತ ಒಂದನೇ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ಕೃಷ್ಣಪ್ಪ ಪಮ್ಮಾರ, ತಹಶೀಲ್ದಾರ ಕ್ರಿಕೆಟ್ ತಂಡದ ಪರವಾಗಿ ಮಾನ್ಯ ತಹಶೀಲ್ದಾರಾದ ಶ್ರೀಮಲ್ಲಿಕಾರ್ಜುನ ಹೆಗ್ಗನವರ, ಅರಣ್ಯ ಇಲಾಖೆ ಕ್ರಿಕೆಟ್ ತಂಡದ ಪರವಾಗಿ ಮುಖ್ಯ ಅರಣ್ಯ ಅಧಿಕಾರಿಗಳಾದ ಶ್ರೀ ಸಂಜೀವ್ ಸಂಸುದ್ದಿ ಆಟದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಮನರಂಜಿಸಿ ಕ್ರೀಡಾ ಸ್ಪೂರ್ತಿ ಮೆರೆದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎ ಎ ಖಾಜಿಯವರು ತಮ್ಮ ತಂಡಗಳನ್ನು ಪ್ರೋತ್ಸಾಹಿಸಿದರು.

ಈ ಟೂರ್ನಿಯ ಆಯೋಜನೆಗೆ ವಿವಿಧ ರೀತಿಯ ಸಹಾಯ ಸಹಕಾರವನ್ನು ಮಾಡಿದ ಸವದತ್ತಿ ವಕೀಲರ ಸಂಘದ ಸದಸ್ಯರಾದ ಶ್ರೀ ಬಿ ಎಂ ಎಲಿಗಾರ, ಶ್ರೀ ಬಿ ವಿ ಮಲಗೌಡ್ರ, ಶ್ರೀ ಜಿ ಜಿ ಕಣವಿ, ಶ್ರೀ ಜೆ ಎಸ್ ಕುಸುಗಲ, ಶ್ರೀ ಎಂ ಜಿ ವಟ್ನಾಳ, ಶ್ರೀ ಸಿ ಬಿ ದೊಡಗೌಡರ , ಎಂ ಬಿ ದ್ಯಾಮನಗೌಡರ, ಶ್ರೀ ಜಿ ವಾಯ್ ಕರಮಲ್ಲಪ್ಪನವರ , ಶ್ರೀ ಎಂ ಎಂ ಎಲಿಗಾರ , ಶ್ರೀ ಎಂ ಎಸ್ ಸರ್ವಿ, ಶ್ರೀ ಎಸ್ ಎಸ್ ಮಾನೆ, ಎಸ್ ಎಂ ಸಾಂಗ್ರೇಸಕೊಪ್ಪ , ಎನ್ ಎಸ್ ನಾಯ್ಕರ, ಶ್ರೀ ರವಿ ಮುತ್ತಗಿ, ಶ್ರೀ ಎಂ ಎಂ ಗುಂಡ್ಲೂರ, ಶ್ರೀ ಎ ಎ ಪಟ್ಹಾಣ, , ಶ್ರೀ ಎಂ ಕೆ ನಂದೆನ್ನವರ ಶ್ರೀ ಎಸ್ ಕೆ ದ್ಯಾಮಣ್ಣವರ, ಶ್ರೀ ವಾಯ್ ಪಿ ರಾಮಜಾರ ಶ್ರೀ ಘಾಜಿ ಮತ್ತು ಎಂ ಎಸ್ ಕುರಿ, ಶ್ರೀ ಎಸ್ ಆರ್ ಪಾಟೀಲ್, ಶ್ರೀ ಎಂ ಎಂ ಮಡಿವಾಳರ , ಶ್ರೀ ಎಲ್ ಟಿ ಹೊಸಮನಿ ಶ್ರೀ ಎಸ್ ಎಸ್ ಹಿರೇಮಠ, ಶ್ರೀ ಎಪ್ ಎಂ ಕಾಳೆ ಶ್ರೀ ಎಸ್ ಟಿ ತೊರಗಲ್ಲಮಠ ಶ್ರೀ ಎಂ ಎಸ್ ಹತ್ತಿ, ಶ್ರೀ ಎಂ ಎಸ್ ವಂಟಮೂರಿ , ಶ್ರೀ ಮಂಜುನಾಥ್ ಮಲ್ಲಾಡ , ಶ್ರೀ ಡಿ ಎಂ ಚೂರಿಖಾನ ಶ್ರೀ ಸಚೀನ ಗಿರಿಜನ್ನವರ, ಶ್ರೀ ವಿವೇಕ ಮುನವಳ್ಳಿ ವಕೀಲರು ಉಪಸ್ಥಿತರಿದ್ದರು.
ಟೂರ್ನಿಯ ವ್ಯವಸ್ಥಾಪಕರಾಗಿ ಸವದತ್ತಿ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಜೊತೆಗೂಡಿ ವಕೀಲರಾದ ಶ್ರೀ ಎಸ್ ಎಸ್ ಕಾಳಪ್ಪನವರ, ಶ್ರೀ ಇಮ್ತೀಯಾಜ ಬಿ ಎಲಿಗಾರ, ಶ್ರೀ ಎಂ ಎಂ ದೊಡಮನಿ, ಶ್ರೀ ಎಂ ಕೆ ನಂದೆನ್ನವರ, ಶ್ರೀ ವಾಯ್ ಎನ್ ಪಾಸ್ತೆ, ಶ್ರೀ ಆರ್ ವಿ ಪೂಜಾರ, ಶ್ರೀ ವಿನಾಯಕ್ ಮುನವಳ್ಳಿ , ಶ್ರೀ ರಾಜು ಬಾವಾಖಾನ ಶ್ರೀ ಮುಸ್ತಾಕ್ ಶಹಪುರ, ಶ್ರೀ ಎಂ ಎಸ್ ಸೊಗಲದ ಶ್ರೀ ವಿನಯ ವಿ ಅಂಗಡಿ, ಶ್ರೀ ವಿ ಆರ್ ಕಳ್ಳಿಮಠ, ಶ್ರೀ ಎನ್ ಬಿ ಭೋವಿ, ಶ್ರೀ ಆರ್ ವಿ ಹುಂಬಿ (ಸಿದ್ದನಗೌಡರ) ವಕೀಲರ ಸಿಬ್ಬಂದಿಗಳಾದ ಶ್ರೀ ಅಸ್ಲಾಂ ಚೂರಿಖಾನ ಶ್ರೀ ಚಂದ್ರು ಪಡೆಪ್ಪನವರ, ವಿಠ್ಠಲ ಕುರಿ, ಈರಣ್ಣ ಸಂಪಗಾವಿ ಮತ್ತು ಇತರರು ಕಾರ್ಯ ನಿರ್ವಹಿಸಿದರು.
ಭಾಗವಹಿಸಿದ ಎಲ್ಲಾ ತಂಡಗಳ ಸದಸ್ಯರುಗಳು ಟೂರ್ನಿಯ ಆಯೋಜಕರಿಗೆ ಕೃತಜ್ಞತೆ ತಿಳಿಸಿದರು. ಮತ್ತು ಮಾಧ್ಯಮ ಮಿತ್ರರು ಈ ಕ್ರಿಕೆಟ್ ಟೂರ್ನಿಯು ಸರ್ಕಾರಿ ನೌಕರರ ಮತ್ತು ಎಲ್ಲಾ ವಕೀಲ ಬಾಂಧವರ ಏಕತೆಯ ಮತ್ತು ಸೌಹಾರ್ದತೆಯ ಪ್ರತೀಕವೆಂದು ಸವದತ್ತಿ ವಕೀಲರ ಸಂಘಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

About The Author