ವಿಜಯ‌ ನಾಯ್ಕ ಅವರ ಜನ್ಮದಿನದ ಪ್ರಯುಕ್ತ ಸಸಿಗಳನ್ನು ನೆಡುವುದು.

WhatsApp Group Join Now

ವಿಜಯ‌ ಸೇನಾ ಸಮಿತಿ ಸಂಸ್ಥಾಪಕರಾದ ಶ್ರೀ ವಿಜಯ‌ ನಾಯ್ಕ ಅವರ ಜನ್ಮದಿನದ ಪ್ರಯುಕ್ತ ಅನೇಕ‌ ಸಾಮಾಜಿಕ ಹಿತಾಸಕ್ತಿ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಸರ್ಕಾರಿ ‌ನೌಕರರಿಗೆ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಾಮೆಂಟ್ ಯಶಸ್ವಿಯಾಗಿ ಜರುಗಿದ್ದು ಹಾಗೆಯೇ ಪರಿಸರ ಸಂರಕ್ಷಣೆ ಕೂಡ ನಮ್ಮೆಲ್ಲರ ಜವಾಬ್ದಾರಿ ಅನ್ನುವ ಕಾರಣಕ್ಕೆ ವನೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು VSS ಸದಸ್ಯರು 200 ಸಸಿಗಳನ್ನು ತಮ್ಮ ತಮ್ಮ ಮನೆ ಹಾಗೂ ಹೊಲಗಳಲ್ಲಿ ನೆಡುವ ಮೂಲಕ ಜನ್ಮದಿನದ ಶುಭಾಶಯ ಕೋರುವ ವಿಶೇಷ ಆಚರಣೆಗೆ ಮುಂದಾಗಿದ್ದಾರೆ.

ವಿಜಯ ನಾಯ್ಕ ಅವರ ಜನ್ಮದಿನದ ಅಂಗವಾಗಿ ಸಸಿಗಳನ್ನು ನೆಡುವ ಈ ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಶ್ಲಾಘನೀಯವಾದ ಕೆಲಸವಾಗಿದೆ. ಇತ್ತೀಚಿನ ದಿನಗಳಲ್ಲಿ ಜನ್ಮದಿನದಂತಹ ವಿಶೇಷ ಸಂದರ್ಭಗಳಲ್ಲಿ ಪರಿಸರಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಜನಪ್ರಿಯವಾಗುತ್ತಿದೆ.

ಇಂತಹ ಕಾರ್ಯಕ್ರಮಗಳು ಕೇವಲ ಸಸಿ ನೆಡುವುದಕ್ಕೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಮತ್ತು ಕಾಳಜಿಯನ್ನು ಮೂಡಿಸಲು ಸಹಕಾರಿಯಾಗುತ್ತವೆ.
ಎಲ್ಲರಿಂದ ಎಲ್ಲರಿಗಾಗಿ – ವಿಜಯ್ ಸೇನಾ ಸಮಿತಿ ರಾಮದುರ್ಗ

About The Author