ಬೆಳಗಾವಿ ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ (𝗞𝗼𝗹𝗶𝗸𝗼𝗽𝗽𝗮) ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ. (𝗥𝘀. 𝟭𝟬𝟬 𝗖𝗿𝗼𝗿𝗲) ವೆಚ್ಚದಲ್ಲಿ ಭವ್ಯವಾದ ‘ತಿರುಪತಿ ವೆಂಕಟೇಶ್ವರ ದೇವಸ್ಥಾನ’ ತಲೆ ಎತ್ತಲಿದೆ. ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ತಿರುಮಲ ತಿರುಪತಿ ದೇವಸ್ಥಾನ (𝗧𝗶𝗿𝘂𝗺𝗮𝗹𝗮 𝗧𝗶𝗿𝘂𝗽𝗮𝘁𝗶 𝗗𝗲𝘃𝗮𝘀𝘁𝗵𝗮𝗻𝗮𝗺𝘀 – 𝗧𝗧𝗗) ಆಡಳಿತ ಮಂಡಳಿಗೆ 𝟳 ಎಕರೆ (𝟳 𝗔𝗰𝗿𝗲𝘀) ಭೂಮಿಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷರಾದ ಲಕ್ಷ್ಮಣ ರೆಡ್ಡಿ (𝗟𝗮𝗸𝘀𝗵𝗺𝗮𝗻𝗮 𝗥𝗲𝗱𝗱𝘆) ಹಾಗೂ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷರಾದ ರಾಮಣ್ಣ ಮುಳ್ಳೂರ (𝗥𝗮𝗺𝗮𝗻𝗻𝗮 𝗠𝘂𝗹𝗹𝘂𝗿𝗮) ಅವರು 𝗧𝗧𝗗 ಆಡಳಿತ ಮಂಡಳಿ ಸದಸ್ಯರಾದ ಎಸ್. ನರೇಶ್ ಕುಮಾರ್ (𝗦. 𝗡𝗮𝗿𝗲𝘀𝗵 𝗞𝘂𝗺𝗮𝗿) ಅವರಿಗೆ ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಿದರು.
ಮುಂದಿನ 𝟮 ವರ್ಷಗಳಲ್ಲಿ ತಿರುಮಲ ತಿರುಪತಿ ಮಾದರಿಯಲ್ಲೇ ಈ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ದೇವಸ್ಥಾನದ ಜೊತೆಗೆ ತಿರುಪತಿಯಂತೆಯೇ ಭಕ್ತರಿಗೆ ವಸತಿ ಸೌಲಭ್ಯ ಹಾಗೂ ನಿರಂತರ ಅನ್ನಪ್ರಸಾದ ವಿತರಣೆಯ (𝗔𝗻𝗻𝗮 𝗣𝗿𝗮𝘀𝗮𝗱𝗮) ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್ ನರೇಶ್ ಕುಮಾರ್ ತಿಳಿಸಿದರು.
ಯೋಜನೆಯ ವೆಚ್ಚ ಮತ್ತು ಅನುದಾನದ ವಿವರ:
ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನಕ್ಕಾಗಿ ಟಿಟಿಡಿ ಯು ಹಣ ಮೀಸಲಿಟ್ಟಿದೆ. ಬೆಳಗಾವಿಯ ಈ ನೂತನ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯಿಂದ ಶೇ. 𝟴𝟬 ರಷ್ಟು ಅನುದಾನ ಒದಗಿಸಲಾಗುತ್ತದೆ. ಉಳಿದಂತೆ ಬೆಳಗಾವಿ ರೆಡ್ಡಿ ಸಂಘದಿಂದ ಶೇ. 𝟭𝟬 ಮತ್ತು ದಾನಿಗಳಿಂದ ಶೇ. 𝟭𝟬 (𝟭𝟬%) ರಷ್ಟು ದೇಣಿಗೆ ಸಂಗ್ರಹಿಸಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಟಿಟಿಡಿ ಸದಸ್ಯರಾದ ಎಸ್ ನರೇಶ್ ಕುಮಾರ್ ತಿಳಿಸಿದರು
ಬಾಕ್ಸ್:
“ದೇಶಾದ್ಯಂತ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 𝗧𝗧𝗗 ಬದ್ಧವಾಗಿದೆ. ಬೆಳಗಾವಿಯಲ್ಲಿ ನಿರ್ಮಾಣವಾಗಲಿರುವ ಈ ದೇವಸ್ಥಾನವು ಈ ಭಾಗದ ಲಕ್ಷಾಂತರ ಭಕ್ತರಿಗೆ ಅನುಕೂಲವಾಗಲಿದ್ದು, ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.”
ಎಸ್. ನರೇಶ್ ಕುಮಾರ್ 𝗧𝗧𝗗 ಆಡಳಿತ ಮಂಡಳಿ ಸದಸ್ಯ.
“ನಮ್ಮ ಬೆಳಗಾವಿ ಭಾಗದ ಭಕ್ತರಿಗೆ ವೆಂಕಟೇಶ್ವರನ ದರ್ಶನ ಭಾಗ್ಯವನ್ನು ಸ್ಥಳೀಯವಾಗಿಯೇ ಕಲ್ಪಿಸುವ ಉದ್ದೇಶದಿಂದ 𝟳 ಎಕರೆ ಭೂಮಿಯನ್ನು 𝗧𝗧𝗗 ಗೆ ನೀಡಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ.”
ಲಕ್ಷ್ಮಣ ರೆಡ್ಡಿ , ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ.



