ವಿಜಯಪುರ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಏಪ್ರಿಲ್ 24ರಂದು ಬೆಳಿಗ್ಗೆ 9ಗಂಟೆಗೆ ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜನೆ ಮಾಡಲಾದ ವರನಟ ಡಾ.ರಾಜಕುಮಾರ್ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ್ ಅವರ ಚಲನಚಿತ್ರ ಗೀತೆಗಳ ಪ್ರಸ್ತುತಪಡಿಸಲು ಆಸಕ್ತ ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ವಯಸ್ಸಿನ ಮಿತಿ ಇರುವುದಿಲ್ಲ. ಪ್ರಸ್ತುತಿಯ ಸಮಯದ ಮಿತಿ ಇದೆ. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶವಿದ್ದು,ಆಯೋಜಕರ ನಿರ್ಣಯವೇ ಅಂತಿಮವಾಗಿದ್ದು,ತಮ್ಮ ಹೆಸರು ಮತ್ತು ಪೂರ್ಣ ವಿಳಾಸದೊಂದಿಗೆ ಇದೆ ಏಪ್ರೀಲ್ 22ರೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಕಡ್ಡಾಯವಾಗಿದೆ .
ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸುವ ಹಾಡುಗಾರರು, ಕಲಾವಿದರು, ಸಾರ್ವಜನಿಕರು ಸ್ವಂತ ಖರ್ಚಿನಲ್ಲೇ ಕಾರ್ಯಕ್ರಮಕ್ಕೆ ಬರತಕ್ಕದ್ದು. ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ಮಾತ್ರ ಗೌರವವಾಗಿ ವಿತರಿಸಲಾಗುವುದು. ಆಸಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯನ್ನು ಅಥವಾ ಮೊಬೈಲ್ ಸಂಖ್ಯೆ 9049499783 ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಡಾ.ರಾಜ್ ಕುಮಾರ ಅಭಿನಯದ ಸಿನಿಮಾ ಗೀತೆಗಳ ಗಾಯನಕ್ಕೆ ಸಾರ್ವಜನಿಕರಿಗೆ ಅವಕಾಶ

WhatsApp Group
Join Now


