ಲಿಂಗದಳ್ಳಿಯಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವ

WhatsApp Group Join Now

ವಿಜಯಪುರ: ತಾಳಿಕೋಟಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ 6 ಗಂಟೆಗೆ ಸಾಂಪ್ರದಾಯಿಕ ಗಂಗಾಸ್ಥಳ ಮುಗಿಸಿಕೊಂಡು ಬಂದ ಬಳಿಕ, ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮದೇವತೆಯ ಭವ್ಯ ರಥೋತ್ಸವ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಸಾರವಾಡದ ಈಶ್ವರ ಗಾರುಡಿ ಗೊಂಬೆ ಗೆಳೆಯರ ಬಳಗ, ಬಾದಾಮಿ ತಾಲೂಕಿನ ಗೋವಿನಕೊಪ್ಪದ ಶ್ರೀ ಮಾಲಿಂಗರಾಯ ಮಹಿಳಾ ಡೊಳ್ಳು ಕುಣಿತ ತಂಡ ಹಾಗೂ ಕವಿತಾ ಮುದ್ದೇಬಿಹಾಳ, ಅಕ್ಷತಾ ಕವನೂರ ಮತ್ತು ಮಂಜುಳಾ ಹಡಗಲಿ ತಂಡದವರಿಂದ ಮಂಗಳಮುಖಿಯರ ನೃತ್ಯ ಪ್ರದರ್ಶನ ನಡೆಯಿತು. ಬಳಿಕ ಹನಗುಂದದ ‘ಎ.ಎನ್. ಕಲಾತಂಡ’ದ ಮಾಲೀಕ ಮಂಜು ಇಟಗಿ ನೇತೃತ್ವದಲ್ಲಿ ಮುತ್ತು ಹಳಿಯಾಳ ಮತ್ತು ಸಂಜನಾ ಡಿ.ಕೆ.ಡಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.
ಸಂಜೆ ನಡೆದ ಧಾರ್ಮಿಕ ಸಭೆಗೆ ಸಂತೆಕಲ್ಲೂರ ಹಾಗೂ ಫಿರೋಜಾಬಾದ್‌ನ ಶ್ರೀ ಘನಲಿಂಗೇಶ್ವರ ಮಠದ ಶ್ರೀ ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಭುಗೌಡ ಬ. ಪಾಟೀಲ ಭಾಗವಹಿಸಿದ್ದರು. ಇದೇ ವೇಳೆ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಲೇಸಾಬ ಬಾ. ಶೇಖ್ (ಜಮಾದಾರ) ಅವರನ್ನು ಸನ್ಮಾನಿಸಲಾಯಿತು.

ಹಾಗೂ ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು ಆದ ರಾಚಯ್ಯ ಹಿರೇಮಠ ಬಾಪುಗೌಡ ಪಾಟೀಲ್ ಧರ್ಮ ಸಿಂಗ್ ಪವರ್ ಜಾತ್ರ ಮಂಡಳಿಯಿಂದ ಗೌರವಾನ್ವಿತ ಸನ್ಮಾನ ಮಾಡಲಾಯಿತು. ಅದೇ ರೀತಿ ಸುತ್ತ ಮುತ್ತಲಿನ ಗ್ರಾಮದಲ್ಲಿ ಗಣಮನ್ಯ ರು ಆಗಮಿಸಿದರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನ ಮಾಡಲಾಯಿತು.

ಶನಿವಾರ ಬೆಳಿಗ್ಗೆ ಗ್ರಾಮದೇವತೆಯ ಗರ್ಭಗುಡಿ ಪ್ರವೇಶ ಕಾರ್ಯಕ್ರಮವು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದೆ ವೇಳೆ ಊರಿನ ಪ್ರಮುಖರಾದ
ಬಸನಗೌಡ ಬಸರಕೋಡ,
ಬಸಯ್ಯ ಚ ಹಿರೇಮಠ,ಗುರಣ್ಣಗೌಡ ಮೇಟಿ,
ಶಿವಾನಂದ ಹಿರೇಮಠ
ಅಯ್ಯನಗೌಡ ನಾಡಗೌಡ
ಸಂಗನಗೌಡ ಮೇಟಿ
ರಾಮನಗೌಡ (ಮುದ್ದುಗೌಡಾ) ಬಿರಾದಾರ
ಪ್ರಭುಗೌಡ ಭೀ ಪಾಟೀಲ
ಪ್ರಕಾಶ ದೊರೆಗೋಳ
ರುದ್ರಗೌಡ ಪ್ರ. ಪಾಟೀಲ
ಗುರಸಂಗಪ್ಪ ಗೌಡ ಬಿರಾದಾರ
ಪ್ರಭುಗೌಡ ಬಿರಾದಾರ
ಎಂ.ಬಿ .ಕುಂಬಾರ ಗುರುಗಳು
ಮಲ್ಲನಗೌಡ ನಾಡಗೌಡ
ಹೇಮರೆಡ್ಡಿ ಮೇಟಿ
ಗಂಗಾದರ ಮೇಟಿ
ಬಸನಗೌಡ .ಅ .ಮೇಟಿ
ಬಸನಗೌಡ ಪಾಟೀಲ್
ಅಮರೇಶ ನಾಡಗೌಡ
ರಮೇಶ ಪಾಟೀಲ
ಶ್ರೀಶೈಲ ಮೇಟಿ
ಗುತ್ತಣ್ಣ ಬಸರಕೋಡ ಉಪಸ್ಥಿತರಿದ್ದರು.

About The Author