ಗ್ರಾಮೀಣ ಮಟ್ಟದಲ್ಲಿ ಬರುವ ಪ್ರವಾಸಿಗರಿಗೆ ವಿಶ್ರಾಂತಿ ನೀಡಬೇಕೆಂಬ ಉದ್ದೇಶದಿಂದ ಸರಕಾರ ಸೇರಿದಂತೆ ನಾನಾ ಹೋಬಳಿ ಮಟ್ಟದಲ್ಲಿ ಲೋಕೊಪಯೋಗಿ ಇಲಾಖೆ ಮೂಲಕ ಪ್ರವಾಸಿ ಮಂದಿರ ನಿರ್ಮಿಸಿದೆ. ಆದರೆ ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದ ಪ್ರವಾಸಿ ತಾಣ ಸೂಕ್ತ ಸೌಕರ್ಯಗಳು ಇಲ್ಲದೇ ಪಾಳು ಬಿದ್ದಿದ
ಮುರಗೋಡ ಗ್ರಾಮೀಣ ಮಟ್ಟದಲ್ಲಿ ಬರುವ ಪ್ರವಾಸಿಗರಿಗೆ ವಿಶ್ರಾಂತಿ ನೀಡಬೇಕೆಂಬ ಉದ್ದೇಶದಿಂದ ಸರಕಾರ ಮುರಗೋಡ ಸೇರಿದಂತೆ ನಾನಾ ಹೋಬಳಿ ಮಟ್ಟದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ. 1968ವಿಶ್ವಯಲ್ಲಿ ಶತಮಾನದ ಶಿವಯೋಗಿ ಮಹಾಂತ ಶಿವಯೋಗಿಗಳ ಅಮೃತ ಹಸ್ತದಿಂದ ಲೋಕೊಪಯೋಗಿ ಇಲಾಖೆ ಮೂಲಕ ಪ್ರವಾಸಿ ಮಂದಿರ ನಿರ್ಮಿಸಿದೆ. ಆದರೆ ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದ ಪ್ರವಾಸಿ ತಾಣ ಸೂಕ್ತ ಸೌಕರ್ಯಗಳು ಇಲ್ಲದೇ ಪಾಳು ಬಿದ್ದಿದೆ.
ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕಾಗಿ ಸರಕಾರ
ಹಣ ಖರ್ಚು ಮಾಡಿದೆ. ಆದರೆ ಇಂದು ಹೋಬಳಿ ಮಟ್ಟದಲ್ಲಿ ನಿರ್ಮಾಣವಾದ ಪ್ರವಾಸಿ ಮಂದಿರ ಸರಿಯಾಗಿ ಮತ್ತು ಸಮರ್ಪಕವಾಗಿ ಜನತೆ ಉಪಯೋಗಕ್ಕೆ ಬಾರದೆ ಇರುವುದರಿಂದ ಸರಕಾರದ ಕೋಟ್ಯಾಂತರ ಅನುದಾನಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಗ್ರಾಮೀಣ ಮಟ್ಟದ ಪ್ರವಾಸಿ ಮಂದಿರ ಜನತೆಗೆ ಸೇವೆ ಒದಗಿಸದೆ ಇರುವುದರಿಂದ ಸದುಪಯೋಗವಾಗದೆ ದುರಪಯೋಗವಾಗಿದೆ ಎಂಬುದಕ್ಕೆ ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದಲ್ಲಿರುವ ಪ್ರವಾಸಿ ಮಂದಿರ ತಾಜಾ ಉದಾಹರಣೆಯಾಗಿದೆ.
ಮುರಗೋಡ ಗ್ರಾಮದಲ್ಲಿ. ಸುಮಾರು 58 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಪ್ರವಾಸಿ ಮಂದಿರ ಈವರೆಗೂ ಇಲ್ಲಿ ಯಾರು ವಾಸ್ತವ್ಯ ಮಾಡಿದ ಉದಾಹರಣೆ ಇಲ್ಲ.
ಅಷ್ಟೇ ಏಕೆ ಇದರ ಮುಂದಿ ಅನೈತಿಕ ಚಟುವಟಿಕೆಗಳ ಸ್ಥಾನವಾಗಿದೆ ಇದರಿಂದಾಗಿ ಪ್ರವಾಸಿ ಮಂದಿರದ ಸುತ್ತಲೂ ಮುಳ್ಳಿನ ಕಂಟಿ ಬೆಳೆದು ನಿಂತಿದೆ. ಈಗೆ ಇದು ಪಾಳು
ಬಿದ್ದ ಬಂಗಲೆಯಂತೆ ಕಾಣುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಇಲ್ಲಿ ಪ್ರವಾಸಿ ಮಂದಿರ ಇದೆ ಎಂಬುದೇ ಗ್ರಾಮದ ಎಷ್ಟೋ ಜನ ಇದನ್ನು ಬೂತ್ ಬಂಗಲ ಎಂದು ಕರೀತಿದ್ದಾರೆ . ಹಾಗೂ ಮಧ್ಯಪ್ರಿಯರಿಗೆ ಹಾಗೂ ಗಾಂಜಾ ಸೇದುವರೆಗೆ ಹಾಗೂ ಜೂಜಾಟ ಆಡುವವರಿಗೆ ಹಾಗೂ ಇನ್ನಿತರ ಅನೈತಿಕ ಚಟುವಟಿಕೆಗಳ ಸ್ಥಾನವಾಗಿದೆ ಎಂದು ಹೇಳಬಹುದು ಈಗಲಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ. ಇದನ್ನು ಸ್ವಚ್ಛಗೊಳಿಸಿ ಹಾಗೂ ಬಹಳ ಹಳೆಯ ಕಟ್ಟಡ ಇರುವ ಈ ಕಟ್ಟಡವನ್ನು ತೆರವುಗೊಳಿಸಿ ಪ್ರವಾಸಿಗರಿಗೆ ಅನುಕೂಲವಾಗೂವ ರೀತಿಯಲ್ಲ ಲೋಕೋಪಯೋಗಿ ಇಲಾಖೆ ಸಚಿವರ ಅನುದಾನದಡಿಯಲ್ಲಿ ಹಾಗೂ ಸ್ಥಳೀಯ ಶಾಸಕರ ಒಂದು ಪ್ರಯತ್ನದಿಂದ ಹೊಸ ಪ್ರವಾಸಿ ಮಂದಿರ ನಿರ್ಮಿಸಬೇಕೆಂಬುವುದು ಗ್ರಾಮದ ಗ್ರಾಮಸ್ಥರ ಹಾಗೂ ಕನ್ನಡಪರ ಸಂಘಟನೆಗಳ ಒಂದು ಬೇಡಿಕೆ ಕೂಡ ಇದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಇತ್ತ ಗಮನಹರಿಸದ ಅಧಿಕಾರಿಗಳು



