ಹೊಳಲೂರು ಗ್ರಾಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಪದಗ್ರಹಣ: ಅಧ್ಯಕ್ಷರಾಗಿ ಉಮೇಶ್ ಪೂಜಾರ್ ಅಧಿಕಾರ ಸ್ವೀಕಾರ

WhatsApp Group Join Now

ಕನ್ನಡ ನೆಲ, ಜಲ ಹಾಗೂ ಭಾಷೆಯ ರಕ್ಷಣೆಗೆ ನಿರಂತರವಾಗಿ ಹೋರಾಡುತ್ತಿರುವ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲೆ ರೋಣ ತಾಲೂಕಿನ ಹೊಳಲೂರು ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
​ಗ್ರಾಮದ ಆರಾಧ್ಯ ದೈವ ಪೂಜ್ಯ ಶ್ರೀ ಎಚ್ಚರೇಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯ ಹಾಗೂ ಆಶೀರ್ವಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಹಾಗೂ ಗದಗ ಜಿಲ್ಲಾ ಅಧ್ಯಕ್ಷರ ಎಂ ಎ ಕುರ್ತ್ ಕೋಟಿ
ನೇತೃತ್ವದಲ್ಲಿ ಜರುಗಿದ ಈ ಮಹತ್ವದ ಸಭೆಯಲ್ಲಿ, ಹೊಳಲೂರು ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ಉಮೇಶ್ ಪೂಜಾರ್ ಅವರಿಗೆ ಅಧಿಕೃತವಾಗಿ ಆದೇಶ ಪತ್ರ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು.
​ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ಸುರೇಶ್ ಗಾಣಿಗೇರ್ ಹಾಗೂ ಉಪಾಧ್ಯಕ್ಷರಾಗಿ ರವಿ ಲಮಾಣಿ ಅವರನ್ನು ನೇಮಕ ಮಾಡಲಾಯಿತು.
​ಈ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಘಟನೆಯ ಸಕ್ರಿಯ ಕಾರ್ಯಕರ್ತರಾದ ಮುತ್ತು ಪೂಜಾರ್, ಬಸುರಾಜ ಕಾತರಿಕಿ, ಮುತ್ತಣ್ಣ ಹೂಗಾರ್, ಮಾರುತಿ ಲಮಾಣಿ ಹಾಗೂ ಹನುಮಂತಪ್ಪ ಹಳ್ಳಿಕೇರಿ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಹಾಗೂ ಗ್ರಾಮದ ಅನೇಕ ಪ್ರಮುಖರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳನ್ನು ಹೂಮಾಲೆ ಹಾಕಿ ಅತ್ಯಂತ ಸಡಗರದಿಂದ ಅಭಿನಂದಿಸಿ ಶುಭ ಹಾರೈಸಿದರು.

About The Author