ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜೈಂಟ್ಸ ಗ್ರುಫ, ಹಾಗೂ ಲೈಂಗಿಕ ಕಿರುಕುಳ ವಿರೋಧಿ ಸವಿುತಿ ಇವರುಗಳ ಸಂಯುಕ್ತ ಆಶ್ರಯಲ್ಲಿ ದಿನಾಂಕಃ 17-07-2026 ರಂದು ಎಸ್.ವಿ.ಎಸ್. ಬೆಳ್ಳುಬ್ಬಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ NALSA“ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿಪಶುಗಳು” ಯೋಜನೆ, 2015 ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ಶ್ರಿಮತಿ. ಅರ್ಪಿತಾ ಬಿ ಬೆಲ್ಲದ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಪಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿದುಕೊಳ್ಳವುದು ಅತೀ ಅವಶ್ಯಕವಾಗಿದೆ ಎಂದರು. ಯಾವುದೇ ಅನಾಮಿಕ ವ್ಯಕ್ತಿ ನಿನಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ನಿನಗೆ ಒಳ್ಳೆಯ ಸಂಬಳ ಕೊಡುಸುತ್ತೇನೆ ಅಂತಾ ಅನೇಕ ತೆರನಾದ ಏನಾದರೂ ಆಮಿಶ ತೋರಿಸಿ ಕರೆದರೆ ಯಾವುದೇ ಕಾರಣಕ್ಕೂ ಅವನೊಟ್ಟಿಗೆ ಹೋಗಬಾರದು ಹುಡುಗರು ಅಥವಾ ಹುಡುಗಿಯರು ಯಾರೇ ಇರಲಿ ಎಲ್ಲರೂ ಈ ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗಿ ಅನೇಕ ತೊಂದರೆಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಯಾವುದೇ ವ್ಯಕ್ತಿ ಲಾಭವಿಲ್ಲದೇ ಯಾವುದೇ ಸಹಾಯ ಮಾಡಲಾರ ಎಲ್ಲರೂ ಜಾಗೃತವಾಗಿರಬೇಕು. ನಿಮ್ಮ ನೆರೆಹೊರೆಯವರಲ್ಲಿ ಮಕ್ಕಳಿಗೆ ಏನಾದರೂ ತೊಂದರೆಯಾಗುತ್ತಿದ್ದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಮಹಿಳಾ ಸಹಾಯವಾಣಿ 1091ಗೆ ಕರೆ ಮಾಡಿ ವಿಷಯ ತಿಳಿಸಬೇಕು ಎಂದರು.
ಉಪನ್ಯಾಸ ಭಾಷಣ ಮಾಡಿದ ಆಸಿಫ ಜಂಗ್ಲಿಸಾಬನವರ ವಕೀಲರು ಮಾತನಾಡಿ ಎಲ್ಲಾ ವಯಸ್ಸಿನ ಮಹಿಳೆಯರು ಸೇರಿದಂತೆ ಕಳ್ಳಸಾಗಣೆಯ ಬಲಿಪಶುಗಳ ಕಳವಳಗಳನ್ನು ಪರಿಹರಿಸಲು ಕಾನೂನು ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಮತ್ತು ಪ್ರತಿಯೊಂದು ಹಂತದಲ್ಲೂ ಅಂದರೆ ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ ಎಂದರು.
ಅತಿಥಿ ಉಪನ್ಯಾಸ ಮಾಡಿದ ಉಲ್ಲಾಸ ದೊಡಮನಿ ವಕೀಲರು ಮಾತನಾಡಿ ಮಕ್ಕಳು ಮತ್ತು ಹದಿಹರೆಯದ ಮಕ್ಕಳಿಗೆ ಅಪರಿಚಿತರು ಅವರೊಂದಿಗೆ ಸ್ನೇಹ ಬೆಳೆಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಬಹುದು ಮತ್ತು ನಗರಗಳಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಬಗ್ಗೆ ನೀಡಿದ ಭರವಸೆಗಳ ಸುಳ್ಳುತನದ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಬಹುದು. ಉದ್ಯೋಗಗಳು ಮತ್ತು ಉತ್ತಮ ಜೀವನದ ಸುಳ್ಳು ಭರವಸೆಗಳ ಬಗ್ಗೆ ಯುವ ವಯಸ್ಕರಿಗೆ ಇದೇ ರೀತಿ ಎಚ್ಚರಿಕೆ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಆರ್.ಸವತಿಕಾರ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ, ಮಾಜಿ ಅಧ್ಯಕ್ಷರಾದ ಎಮ್.ಜಿ.ವಟ್ನಾಳ, ಜೈಂಟ್ಸ ಗ್ರುಫಿನ ಅಧ್ಯಕ್ಷರಾದ ನಾರಾಯನ ಧನಿಯಾಳ, ವಿಜಯಕುಮಾರ ಮೀಶಿ, ಹಾಗೂ ಇತರರು ಉಪಸ್ಥಿತರಿದ್ದರು.
ನ್ಯಾಯವಾದಿಗಳಾದ ಎಮ್.ಎಮ್.ಯಲಿಗಾರ ಸ್ವಾಗತಿಸಿದರು, ಕಾಲೇಜಿನ ಪ್ರಾದ್ಯಾಪಕರಾದ ಎಮ್.ಎನ್.ಸಂಗೊಳ್ಳಿ ನಿರೂಪಿಸಿದರು ಲೈಂಗಿಕ ಕಿರುಕುಳ ವಿರೋಧಿ ಸವಿುತಿಯ ಸಯೋಜಕರಾದ ಡಾ. ಅರುಂಧತಿ ಬದಾಮಿ ವಂದಿಸಿದರು.



