ಕರ್ನಾಟಕ ರಾಜ್ಯ ಪಿಡಿಒ ‘ಬಿ’ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ರಾಮದುರ್ಗ ತಾಲ್ಲೂಕು ಘಟಕದ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ, ರಾಮದುರ್ಗ ಇವರಿಗೆ ಮನವಿ ಸಲ್ಲಿಸಿದರು

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕಿನ ಕರ್ನಾಟಕ ರಾಜ್ಯ ಪಿಡಿಒ ‘ಬಿ’ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ರಾಮದುರ್ಗ ತಾಲ್ಲೂಕು ಘಟಕದ ವತಿಯಿಂದ ವಿಬಿಜಿ ರಾಮ್ ಜಿ’ ಯೋಜನೆಯಡಿ ಕೆರೆ/ನಾಲಾ ಹೂಳೆತ್ತುವಿಕೆ, 5 ಲಕ್ಷದೊಳಗಿನ ಕಾಮಗಾರಿಗಳಿಗೆ ಟೆಂಡರ್ ವಿನಾಯಿತಿ ಹಾಗೂ ಇತರೆ ಕಾಮಗಾರಿಗಳ ಕುರಿತು ತಾಲ್ಲೂಕಿನ ಎಲ್ಲಾ ಪಿಡಿಒಗಳಿಗೆ ಅನ್ವಯಿಸುವಂತೆ ಸ್ಪಷ್ಟಿಕರಣ ಮಾರ್ಗದರ್ಶನ ನೀಡಲು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ, ರಾಮದುರ್ಗ ಇವರಿಗೆ ಮನವಿ ಸಲ್ಲಿಸಿದರು

ಕರ್ನಾಟಕ ರಾಜ್ಯ ಪಿಡಿಒ ‘ಬಿ’ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ರಾಮದುರ್ಗ ತಾಲ್ಲೂಕು ಘಟಕದ ವತಿಯಿಂದ ಪ್ರಸ್ತುತ ಜಾರಿಯಲ್ಲಿರುವ ‘ವಿಬಿಜಿ ರಾಮ್ ಜಿ’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಪ್ರಮುಖ ಕಾಮಗಾರಿಗಳ ಕುರಿತು ನಿಯಮಾವಳಿಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ತಾಲ್ಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಕೆಲಸ ಪ್ರಾರಂಭಿಸಲು ತೀವು ಆಡಳಿತಾತ್ಮಕ ತೊಡಕು ಮತ್ತು ಗೊಂದಲ ಉಂಟಾಗಿದೆ.

ಈ ಗೊಂದಲದಿಂದಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿದ್ದು, ಸಾರ್ವಜನಿಕ ಕೆಲಸಗಳು ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಪಿಡಿಒಗಳು ಗೊಂದಲವಿಲ್ಲದೆ ನಿಯಮಾನುಸಾರ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಈ ಕೆಳಗಿನ ಪ್ರಮುಖ ಅಂಶಗಳ ಕುರಿತು ಎಲ್ಲರಿಗೂ ಅನ್ವಯಿಸುವ ಸ್ಪಷ್ಟಿಕರಣ ಹಾಗೂ ಮಾರ್ಗದರ್ಶನ ಸುತ್ತೋಲೆ ನೀಡಬೇಕಾಗಿ ಕೋರುತ್ತೇವೆ:

  1. ಕೆರೆ, ನಾಲಾ ಮತ್ತು ಕಾಲುವೆಗಳ ಹೂಳೆತ್ತುವ ಕಾಮಗಾರಿ ಯೋಜನೆಯಡಿ ಜಲಮೂಲಗಳ ಸಂರಕ್ಷಣೆಗಾಗಿ ಕೆರೆ, ನಾಲಾ ಮತ್ತು ಕಾಲುವೆಗಳ ಹೂಳೆತ್ತುವ ಕೆಲಸಗಳು ಅನುಮೋದಿತ ಕಾಮಗಾರಿಗಳ ವ್ಯಾಪ್ತಿಗೆ ಒಳಪಡುತ್ತವೆಯೇ? ಎಂಬುದರ ಕುರಿತು ಸ್ಪಷ್ಟತೆ ನೀಡಿ, ತಾಲ್ಲೂಕು ಪಂಚಾಯತಿಯಿಂದ ಹೂಳೆತ್ತಲು ಅಧಿಕೃತ ಸಮ್ಮತಿ ಹಾಗೂ ಅನುಮತಿ ನೀಡುವುದು.
  2. ₹5 ಲಕ್ಷದೊಳಗಿನ ಕಾಮಗಾರಿಗಳಿಗೆ ಟೆಂಡರ್ ವಿನಾಯಿತಿ ಪ್ರಸ್ತುತ ನಿಯಮಾವಳಿಗಳಲ್ಲಿ ₹5 ಲಕ್ಷದೊಳಗಿನ ಸಣ್ಣ ಮತ್ತು ತುರ್ತು ಕಾಮಗಾರಿಗಳಿಗೆ ಟೆಂಡ ಪ್ರಕ್ರಿಯೆಯಿಂದ ವಿನಾಯಿತಿ ನೀಡದಿರುವುದರಿಂದ ಕೆಲಸ ಆರಂಭಿಸಲು ಸಾಧ್ಯವಾಗುತ್ತೀ ಆದ್ದರಿಂದ ಸಾರ್ವಜನಿಕ ತುರ್ತು ಸಂದರ್ಭಗಳನ್ನು ಎದುರಿಸಲು (Emergency Works), ಟೆಂಡರ್ ಮಾಡದೆಯೇ ತುರ್ತಾಗಿ ಕೆಲಸ ನೀಡಲು ಹಾಗೂ ಕಾಮಗಾರಿ ಪ್ರಾರಂಭಿಸಲು ಅನುಕೂಲವಾಗುವಂತೆ ಸ್ಪಷ್ಟ ಮಾರ್ಗಸೂಚಿ ನೀಡುವುದು.
  3. ಅನುಮೋದಿತ ಪಟ್ಟಿಯ ಹೊರತಾದ ಇತರೆ ತುರ್ತು ಕೆಲಸಗಳು ಯೋಜನೆಯಲ್ಲಿ ಪ್ರಸ್ತುತ ಅನುಮತಿಸಲಾದ ಕೆಲಸಗಳ ಹೊರತಾಗಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ಯಗತ್ಯ ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳಲು ಸೂಕ್ತ ಅನುಮೋದನೆ ಹಾಗೂ ಮಾರ್ಗಸೂಚಿ ಹೊರಡಿಸುವುದು.

ಈ ಮೇಲ್ಕಂಡ ಗೊಂದಲಗಳಿಂದಾಗಿ ತಾಲ್ಲೂಕಿನ ಎಲ್ಲಾ ಪಿಡಿಒ ಅಧಿಕಾರಿಗಳಿಗೆ ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲು ತೊಂದರೆಯಾಗುತ್ತಿರುವುದರಿಂದ, ಇಲಾಖೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಮ್ಮ ಕಚೇರಿಯಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಅನ್ವಯಿಸುವಂತೆ ತಕ್ಷಣವೇ ಅಧಿಕೃತ ಸ್ಪಷ್ಟಿಕರಣ ಮಾರ್ಗದರ್ಶನ ಸುತ್ತೋಲೆ ಹೊರಡಿಸಬೇಕಾಗಿ ವಿನಂತಿಸುತ್ತೇವೆ. ಸುತ್ತೋಲೆ ದೊರೆತ ತಕ್ಷಣವೇ ಎಲ್ಲಾ ಪಿಡಿಒಗಳು ನಿಯಮಾನುಸಾರ ಕಾಮಗಾರಿಗಳನ್ನು ಪ್ರಾರಂಭಿಸಲು ಸಿದ್ಧರಿದ್ದೇವೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು

About The Author