WhatsApp Group
Join Now
ಬೆಳಗಾವಿ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಲಿಂಗಾಯತ ಸಂಘಟನೆಯಿಂದ ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜೇಶ್ವರಿ ಹಿರೇಮಠ ಅವರು ʼಜಾನಪದ ಸಿರಿʼ ಎಂಬ ವಿಷಯ ಕುರಿತು ಉಪನ್ಯಾಸ ಮಂಡಿಸಿದರು.
ಮಾನವ ಜನಾಂಗದ ಹುಟ್ಟಿನಿಂದಲೇ ಜನಪದ ಹುಟ್ಟಿದ್ದು, ಜನರಿಂದ ಜನರಿಗೆ ಬಾಯಿಂದ ಬಾಯಿಗೆ ಹರಿದು ಬಂದಿದೆ. ಈ ರೀತಿ ಸಾಮಾನ್ಯ ಜನರಿಂದ ಜನರಿಗೆ ಹರಿದು ಬಂದುದೇ ʼಜನಪದʼ ಸಾಹಿತ್ಯವಾಗಿದೆ. ಈ ಜನಪದರ ಸಂಸ್ಕೃತಿ, ಜೀವನ ಪದ್ಧತಿ, ಆಚಾರ, ವಿಚಾರಗಳನ್ನು ಅಧ್ಯಯನ ಮಾಡುವುದೇ “ಜಾನಪದ” ಸಾಹಿತ್ಯವೆಂದು ಅವುಗಳ ನಡುವಿನ ವ್ಯತ್ಯಾಸವನ್ನು ಉಪನ್ಯಾಸಕರು ತಿಳಿಸಿದರು. ಜನಪದರು ದೇವರನ್ನು ಅತಿಯಾಗಿ ನಂಬಿದವರು ಆದರೆ ಅವರು ಗುಡಿಗಳನ್ನು ಕಟ್ಟಲಿಲ್ಲ, ಬಸವಾದಿ ಶರಣರಂತೆ ನಿಸರ್ಗವನ್ನೇ ದೇವರೆಂದು ಕಂಡವರು. ಅವರು ತಮ್ಮ ಜೀವನದ ಅನುಭವಗಳನ್ನು ಸರಳವಾಗಿ ನೇರವಾಗಿ ಪದಗಳನ್ನಾಗಿಸಿದರು. ಅದರಿಂದ ಮೂಡಿಬಂದ ನಂಬಿಕೆಗಳನ್ನು ಸಾರಿದರೇ ವಿನಾ: ಮೂಢನಂಬಿಕೆಗಳನ್ನು ಭಿತ್ತಲಿಲ್ಲ. ಎಲ್ಲಿಯೂ ಎಂದಿಗೂ ಜನಪದರು ತಮ್ಮ ಹೆಸರನ್ನು ಉಲ್ಲೇಖಿಸದೇ ಯಾವುದೇ ಪ್ರತಿಫಲ ಬಯಸದೇ ಅದ್ಭುತ ತತ್ವಸಂದೇಶಗಳನ್ನು ಕೊಟ್ಟಿದ್ದಾರೆ. ಅಂತಹ ಹಲವಾರು ಜನಪದ ಗೀತೆಗಳನ್ನು ಗಾದೆಮಾತುಗಳನ್ನು ಹಾಸ್ಯರೂಪದಲ್ಲಿ ಮನಮುಟ್ಟುವಂತೆ ವಿವರಿಸಿ, ಡಾ.ರಾಜೇಶ್ವರಿ ಹಿರೇಮಠ ಅವರು ನೆರೆದಿದ್ದ ಶರಣರನ್ನು ರಂಜಿಸಿದರು.
ಸುರೇಶ ನರಗುoದ ಅವರ ಪ್ರಾಥ೯ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೂರೆಯಿತು. ಆರಂಭದಲ್ಲಿ ಶoಕರ ಗುಡಸ, ಆನoದ ಕರಕಿ, ದ್ರಾಕ್ಷಾಯಣಿ ಪೂಜಾರ, ಜಯಶ್ರೀ ಚವಲಗಿ ವಚನ ವಿಶ್ಲೇಷನೆ ಮಾಡಿದರು. ಶಿವಕುಮಾರ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು.
ಕಾರ್ಯಕ್ರಮದ ವಿಶೇಷ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಜೋತಿ೯ಲಿoಗ ಹೊನಕಟ್ಟಿ ಪೊಲೀಸ್ ಇಲಾಖೆ ಅವರು ಜನಪದ ಗೀತೆಯನ್ನು ಹಾಡಿ ಎಲ್ಲರ ಮನ ಸೊರೆಗೂಂಡರು.
ಅಧ್ಯಕ್ಷತೆಯನ್ನು ಈರಣ್ಣಾ ದೇಯನ್ನವರ ವಹಿಸಿದ್ದರು. ಸ್ವಾಗತಿಸಿದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ.ಶಾಂತಾ ಚಿನಿವಾಲರ ದಾಸೋಹ ಸೇವೆಗೈದರು.
ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಶಿವಾನoದ ನಾಯಕ, ಶಿವಪುತ್ರಯ್ಯ ಪೂಜಾರ, ಪ. ಬ. ಕರಿಕಟ್ಟಿ, ಶೇಖರ ವಾಲಿ ಇಟಗಿ, ಶ್ರೀದೇವಿ ನರಗುoದ, ಸುವಣಾ೯ ಗುಡಸ, ನoದಾ ಬಗಲಿ, ಶಿವಲೀಲಾ ಗೌಡರ, ಸುದೀರ ರಘಶೆಟ್ಟಿ, ಗುರಸಿದ್ದ ರೇವಣ್ಣವರ, ಬಾಬಣ್ಣ ತಿಗಡಿ, ಮಹದೇವ ಕೆoಪಿಗೌಡರ ದoಪತಿ, ಮುಂತಾದ ಶರಣ ಶರಣೆಯರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.


