ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ)ವತಿಯಿಂದ ಧಾರವಾಡದ ಆಲೂರ ವೆಂಕಟರಾಯರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2026
ಪ್ರೇಮಾ ನಡುವಿನಮನಿ ಅವರು ಬರದ ಹಾಡು ‘ ಮೊದಲ ಭೇಟಿ ‘ ಅವರೇ ನಿರ್ಮಿಸಿ, ಅಭಿನಯಿಸಿದ , ಸ್ವಾತಿ ಸ್ಟುಡಿಯೋ ‘ ಪ್ರಸ್ತುತ ಪಡಿಸಿದ ಮತ್ತು ನೃತ್ಯ ನಿರ್ದೇಶಕ ಶ್ರೀ ಪ್ರಕಾಶ ಕ್ಷತ್ರಿಯ ನಿರ್ದೇಶನ ಮಾಡಿದ ಹಾಗೂ ಶ್ರೀ ಸಿದ್ದು ಹಿರೇಮಠ ಚಿತ್ರೀಕರಣ ಮಾಡಿದ
ಮ್ಯೂಸಿಕ್ ವಿಡಿಯೋ ಅಲ್ಬಮ್ ಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ ಹಿರಿಯ ನಟ, ಪರಿಸರವಾದಿ, ಜೀವಮಾನ ಸಾಧನೆ ಪುರಸ್ಕೃತ ಶ್ರೀ ಸುರೇಶ ಹೆಬ್ಳೀಕರ, ನಿರ್ದೇಶಕ ನಟ ಅನಿರುದ್ಧ ಜತ್ಕರ್, ಗ್ಯಾರಂಟಿ ನ್ಯೂಸ್‌ನ ರಾಧಾ ಹಿರೇಗೌಡರ, ನ್ಯೂಜೋ ನ್ಯೂಸ್‌ನ ಹರೀಶ ನಾಗರಾಜು ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಟಿ ಭವ್ಯ, ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಉ.ಕ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥ ಹಗೇದಾರ, ಕಾರ್ಯಾಧ್ಯಕ್ಷ ಡಾ.ಕಲ್ಲೇಶ ಹಾವೇರಿಪೇಟ, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭು ಹಂಚಿನಾಳ, ಸಲಹಾ ಸಮಿತಿ ಸದಸ್ಯೆ
ಶ್ರೀಮತಿ ಶಿಲ್ಪಾ ಇಡಿಗಲ್ಲ,ಶ್ರೀ ನಾಗೇಂದ್ರ ಮಾಗಡಿ
ಮಂಡಳಿಯ ಪದಾಧಿಕಾರಿಗಳು,
ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಉ.ಕ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಮಂಜುನಾಥಹಗೇದಾರ, ಕಾರ್ಯಾಧ್ಯಕ್ಷ ಡಾ.ಕಲ್ಲೇಶ ಹಾವೇರಿಪೇಟ, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ, ಉಪಾಧ್ಯಕ್ಷ ಪ್ರಭು ಹಂಚಿನಾಳ, ಹಿರಿಯ ಹೋರಾಟಗಾರರು, ನ್ಯಾಯವಾದಿ ಬಿ.ಡಿ.ಹಿರೇಮಠ ಉಪಸ್ಥಿತರಿದ್ದರು.ಉತ್ತರ ಕರ್ನಾಟಕದ ಧಾರವಾಡದ ಸುತ್ತಲಿನ ಪರಿಸರದಲ್ಲಿ
ಚಿತ್ರೀಕರಣವಾದ ” ಮೊದಲ ಭೇಟಿ ” ಕನ್ನಡ ಮ್ಯೂಸಿಕ್ ವಿಡಿಯೋ ಅಲ್ಬಮ್
‘ಅತ್ಯುತ್ತಮ ಸಾಹಿತ್ಯ’ ಪ್ರಶಸ್ತಿ ದೊರೆತಿದ್ದಕ್ಕೆ ಕವಯಿತ್ರಿ ಪ್ರೇಮಾ ನಡುವಿನಮನಿ ಅವರು ಖುಷಿಯಾಗಿದ್ದಾರೆ. ಸದ್ಯದಲ್ಲೇ ” ಮಧುರ ಪಿಸುಮಾತಿಗೆ , ನಕ್ಕಿದೆ ಸುಮ್ಮನೆ ” ಹಾಡುಗಳಿಗೆ ಚಿತ್ರೀಕರಣ ಮಾಡುವುದಾಗಿ
ಪ್ರೇಮಾ ಅವರು ಭರವಸೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮಾ ಅವರ ಕುಟುಂಬದ ಸದಸ್ಯರು ಹಾಗೂ ಅಸ್ಮಿತಾ ಫೌಂಡೇಶನ್ ಧಾರವಾಡದ ಎಲ್ಲಾ ಪದಾಧಿಕಾರಿಗಳು ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪದಾಧಿಕಾರಿಗಳು ಕವಯಿತ್ರಿ ಪ್ರೇಮಾ ನಡುವಿನಮನಿ ಅವರಿಗೆ ಹರ್ಷದಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ
ನಟಿ ,ನಿರ್ದೇಶಕಿ, ನಿರ್ಮಾಪಕಿ ಹಾಗೂ ಕನ್ನಡ ಹಿಂದಿ ಭಾಷೆಯ ಸಾಹಿತಿ, ಕವಯಿತ್ರಿ ಪ್ರೇಮಾ ನಡುವಿನಮನಿ ಅವರಿಗೆಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ.

WhatsApp Group
Join Now


