ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದಾರೆ: ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ

WhatsApp Group Join Now

ಸ್ಥಳೀಯ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ

ಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ

ಬೆಟಗೇರಿ: ಶಿವನು ಸೃಷ್ಟಿಸಿದ ಗಣಾಧೀಶ್ವರರಲ್ಲಿ ವೀರಭದ್ರೇಶ್ವರನೂ ಓರ್ವನಾಗಿದ್ದಾನೆ. ಅಧರ್ಮದ ನಾಶಕ್ಕಾಗಿ ಹಾಗೂ ಜಗದ ಉದ್ಧಾರಕ್ಕೆ ಉಗ್ರಸ್ವರೂಪಿ ವೀರಭದ್ರೇಶ್ವರರು ಅವತರಿಸಿದರು ಎಂದು ಸುಣಧೋಳಿ ಅಭಿನವ ಶಿವಾನಂದ ಮಹಾಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ಅ.೨೮ರಂದು ನಡೆದ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬೆಟಗೇರಿ ಜನತೆ ದೇವರಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದು, ಸ್ಥಳೀಯರು ಧಾರ್ಮಿಕ ಕಾರ್ಯಗಳಿಗೆ ನೀಡುತ್ತೀರುವ ಸಹಾಯ, ಸಹಕಾರ, ಭಕ್ತಿಯ ಸೇವೆ ಮೆಚ್ಚುವಂತಹದ್ದಾಗಿದೆ ಎಂದರು.
ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿದರು. ಬಸಯ್ಯ ಹಿರೇಮಠ, ಈರಯ್ಯ ಹಿರೇಮಠ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಅ.೨೮ರಂದು ಬೆಳಗ್ಗೆ ೬ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಪುರಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ಮುಂಜಾನೆ ೧೦ ಗಂಟೆಗೆ ಸುಮಂಗಲೆಯರಿAದ ಆರತಿ, ಕರಡಿ ಮಜಲು ಸೇರಿದಂತೆ ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ ಮೂಲಕ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆಯ ಮೂರ್ತಿಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಬಳಿಕ ಧರ್ಮಸಭೆ, ಸಂಗೀತ ಕಾರ್ಯಕ್ರಮ, ಶ್ರೀಗಳಿಗೆ, ಗಣ್ಯರಿಗೆ, ದಾನಿಗಳಿಗೆ ಸತ್ಕಾರ ಸಮಾರಂಭ, ಮಹಾಪ್ರಸಾದ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಪುರವಂತರ ಭಕ್ತಿಯ ಪರಾಕಾಷ್ಟೇ ಪ್ರದರ್ಶನ: ವೀರಭದ್ರೇಶ್ವರ ದೇವರ ಭಕ್ತರಾದ ಪುರವಂತರು ಆಹಾ..ಹಾ..ವೀರಾ..,ಆಹಾ..ಹಾ..ರುದ್ರಾ..,ಕಡೆ..ಕಡೆ…ಅಂತಾ ವೀರಭದ್ರೇಶ್ವರ ದೇವರ ಒಡಪು ಹೆಳುವ ಸನ್ನಿವೇಶ ರುದ್ರಾವೇಶದ ಭಕ್ತಿಯ ಪರಾಕಾಷ್ಟೇ ತೋರಿಸಿದರು. ಅಷ್ಟೇ ಅಲ್ಲದೆ ಪುರವಂತರು ತಮ್ಮ ಗಲ್ಲ ಹಾಗೂ ನಾಲಿಗೆಯಲ್ಲಿ ಶಸ್ತçಗಳನ್ನು ಚುಚ್ಚಿಕೊಳ್ಳುವದು ರುದ್ರಾವೇಶದಿಂದ ಒಡಪು ಹೇಳುವದು, ಸೊಜಿಯಿಂದ ಶಸ್ತçದ ಜೋತೆಗೆ ಸುಮಾರು ಉದ್ದದ ಶಸ್ತçದಾರವನ್ನು ನಾಲಿಗೆ ಹಾಗೂ ಒಂದು ಗಲ್ಲದಿಂದ ಮತ್ತೊಂದಡೆ ತಗೆಯುವ ದೃಶ್ಯ ನೊಡುಗರ ಮೈ ನೆವರಿಳಿಸುವಂತಿತ್ತು. ಭಕ್ತಿಯಿಂದ ವಿವಿಧ ಕಸರತ್ತು ಪ್ರದರ್ಶನ ಮಾಡಿದ ಪುರವಂತರು ವೀರಭದ್ರೇಶ್ವರ ದೇವರ ಭಕ್ತಿ ಕೃಪಾರ್ಶೀವಾದಕ್ಕೆ ಪಾತ್ರರಾದರು.
ತಾಪಂ ಮಾಜಿ ಸದಸ್ಯರಾದ ಬಸವಂತ ಕೋಣಿ, ಈರಣ್ಣ ದೇಯಣ್ಣವರ, ಮಹಾಂತೇಶ ಸಿದ್ನಾಳ, ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಮಾಹಾಂತೇಶ ದಂಡಿನ, ಬಸವರಾಜ ದೇಯಣ್ಣವರ, ಮುತ್ತೆಪ್ಪ ದಂಡಿನ, ಹನುಮಂತ ಆನೆಗುಂದಿ, ಅಪ್ಪಣ್ಣ ಖಡಕಭಾಂವಿ, ಭೀಮಶೆಪ್ಪ ಬಳಿಗಾರ, ಸಿದ್ರಾಮ ದಂಡಿನ, ಪಡಶೆಟ್ಟಿ, ಅಡಿವೆಪ್ಪ ಮುಧೋಳ, ಮಂಜು ಕಂಬಿ, ಬಸು ಮಾಡಲಗಿ ಸೇರಿದಂತೆ ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಸಂತ ಶರಣರು, ಪುರವಂತರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

About The Author