WhatsApp Group
Join Now
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ
ಆಸಿಫ್ (ರಾಜು) ಸೇಠ್ ಅವರನ್ನು ಮಹಾನಗರ ಪಾಲಿಕೆ ಆಯುಕ್ತರು, ನಗರ ಸೆವಕರು, ಅಧಿಕಾರಿಗಳು ಅಭಿನಂದಿಸಿ ಶುಭಾಶಯ ಕೋರಿದರು.
ನಗರದ ಬುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರನ್ನು ಭೇಟಿಯಾದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ವಿಭಾಗದ ಉಪ ಆಯುಕ್ತ, ಉದಯಕುಮಾರ ಟಿ.ಬಿ.,ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ
ಲಕ್ಷ್ಮೀ ನಿಪ್ಪಾಣಿಕರ್,
ವಲಯ ಆಯುಕ್ತ ಅನೀಲ ಬೋರ್ಗಾವಿ, ನಗರ ಸೇವಕರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಮುಜಾಮಿಲ್ ಡೋಣಿ, ರಿಯಾಜ್ ಕಿಲ್ಲೇದಾರ್, ಅಭಿಯಂತರ ಅಂಕಿತ್, ಸುಶಾಂತ ಕಾಂಬಳೆ ಮತ್ತಿತರರು
ಹೂಗುಚ್ಛ ನೀಡಿ ಅಭಿನಂದಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಆಸೀಫ್ ಸೇಠ ಅವರು, ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೊಂದಿಗೆ ಜೊತೆಗೂಡಿ ಸಹಕಾರದಿಂದ ಕಾರ್ಯನಿರ್ವಹಿಸೋಣ ಎಂದು ಹೇಳಿದರು.



